More

    ‘ಭೀಮ್ಲಾ ನಾಯಕ್’ ಅಬ್ಬರ ತಡೆಯಲು ದಿನವೊಂದಕ್ಕೆ 3 ಕೋಟಿ ರೂ. ಖರ್ಚು ಮಾಡುತ್ತಿರುವ ಜಗನ್?

    ನಟ ಪವನ್ ಕಲ್ಯಾಣ್​ರ ಭೀಮ್ಲಾ ನಾಯಕ್‘ ಚಿತ್ರ ಫೆಬ್ರವರಿ 25 ರಂದು ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಅಮೇರಿಕಾದಲ್ಲಿ ಬರೋಬ್ಬರಿ 850k ಡಾಲರ್ ಅಂದರೆ ಸುಮಾರು 63.7 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದರೆ ನೀವು ನಂಬಲೇಬೇಕು. ಇನ್ನು, ತೆಲಂಗಾಣದಲ್ಲಂತೂ ಮೊದಲ ದಿನದ ಕಲೆಕ್ಷನ್ ಕೋಟಿ ಕೋಟಿ ಎನ್ನಲಾಗಿದೆ. ಆದರೆ, ಜನರ ಕುತೂಹಲ, ಚಿತ್ತ ಮಾತ್ರ ಪವನ್ ಅವರ ಭೀಮ್ಲಾ ನಾಯಕ್ ಆಂಧ್ರ ಪ್ರದೇಶದಲ್ಲಿ ಎಷ್ಟು ಗಳಿಕೆ ಮಾಡಿದೆ ಹಾಗೂ ಸಿನಿಮಾಗೆ ಪ್ರತಿಕ್ರಿಯೆ ಹೇಗಿದೆ ಎಂಬುದರ ಮೇಲಿದೆ. ಇದಕ್ಕೆ ಕಾರಣ ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಪವನ್​ರ ನಡುವಿನ ರಾಜಕೀಯ ವೈಷಮ್ಯ, ಆಂಧ್ರದಲ್ಲಿ ಸಿನಿಮಾ ಟಿಕಿಟ್ ಬೆಲೆಯ ಮೇಲೆ ಹೊರಡಿಸಿರುವ ಹೊಸ ನಿಯಮಗಳು.
    ಅಂದಹಾಗೆ, ತೆಲುಗಿನ ಪವರ್ ಸ್ಟಾರ್ ನಟ ಪವನ್ ಕಲ್ಯಾಣ್ ಅವರು ಹಾಗೂ ಅವರ ಚಿತ್ರಗಳ ಮೇಲಿನ ಆಂಧ್ರದ ಜಗನ್ ಸರ್ಕಾರದ ದ್ವೇಷ ಮುಂದುವರೆದಿದೆಯಂತೆ. ಹೌದು, ಫೆಬ್ರವರಿ 25 ರಂದು ಆಂಧ್ರ ಹಾಗೂ ತೆಲಂಗಾಣ ಎರಡೂ ರಾಜ್ಯಗಳಲ್ಲಿ ಭೀಮ್ಲಾ ನಾಯಕ್ಸಿನಿಮಾ ಬಿಡುಗಡೆ ಆಗಿದ್ದೇ ತಡ, ಆಂಧ್ರದಲ್ಲಿ ಮಾತ್ರ ಥಿಯೇಟರ್​ಗಳು ಸೂಕ್ಷ್ಮ ಪ್ರದೇಶಗಳಾಗಿ ಪರಿವರ್ತನೆಗೊಂಡಿವೆ. ಇದಕ್ಕೆ ಕಾರಣ, ಆಂಧ್ರದಲ್ಲಿ ಚಿತ್ರಮಂದಿರಗಳ ಮೇಲೆ ಜಗನ್ ಸರ್ಕಾರವು ಹಲವು ನಿಯಮಗಳನ್ನು ಹೇರಿದೆ. ಇನ್ನು, ಇತ್ತೀಚೆಗೆ ಟಿಕೆಟ್ ದರವನ್ನು ಧಾರುಣವಾಗಿ ಇಳಿಸಿದೆ ಜಗನ್ ಸರ್ಕಾರ. ಆ ಹೊಸ ನಿಯಮಗಳನ್ನು ಪಾಲಿಸದ ಚಿತ್ರಮಂದಿರಗಳನ್ನು ಈಗಾಗಲೇ ಬಂದ್ ಕೂಡಾ ಮಾಡಲಾಗಿದೆ ಎಂಬ ವಿಷಯ ಹಲವರಿಗೆ ತಿಳಿದಿದೆ.
    ಕಳೆದ ಬಾರಿ ಪವನ್‌ ಕಲ್ಯಾಣ್ ಅವರ ವಕೀಲ್ ಸಾಬ್ಚಿತ್ರ ಬಿಡುಗಡೆ ಆದ ಸಂದರ್ಭದಲ್ಲಿಯೂ ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ ಸರ್ಕಾರ ಹೀಗೆಯೇ ತುಂಬಾ ಸಮಸ್ಯೆಗಳನ್ನು ಕೊಟ್ಟಿತ್ತು. ಆಗ, ನಟ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಆಂಧ್ರದಲ್ಲಿ ಹಲವೆಡೆ ಥಿಯೇಟರ್​ಗಳ ಬಳಿ ಸಿಕ್ಕಾಪಟ್ಟೆ ಗಲಾಟೆ ಮಾಡಿದ್ದರು. ಇನ್ನು, ಈ ಬಾರಿಯೂ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರ ಭಿಮ್ಲಾ ನಾಯಕ್ತೆರೆಗಪ್ಪಳಿಸುವ ಮುನ್ನವೇ ಬಹಳಷ್ಟು ಸಮಸ್ಯೆ ನೀಡಿದೆ ಎಂದು ಹಲವು ವರದಿಗಳು ಹೇಳುತ್ತಿವೆ. ‘ಭೀಮ್ಲಾ ನಾಯಕ್ಬಿಡುಗಡೆ ಆಗುವುದಕ್ಕೆ ಮುನ್ನವೇ ಕೆಲವು ಚಿತ್ರಮಂದಿರಗಳನ್ನು ಕಾರಣವಿಲ್ಲದೇ ಬಂದ್ ಮಾಡಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
    ಜತೆಗೆ, ‘ಭಿಮ್ಲಾ ನಾಯಕ್ಸಿನಿಮಾದ ಹೆಚ್ಚು ಶೋಗಳನ್ನು ಯಾವುದೇ ಚಿತ್ರಮಂದಿರಗಳು ಹಾಕದಂತೆ ಮತ್ತು ಟಿಕೆಟ್ ದರ ಏರಿಕೆ ಮಾಡದಂತೆ ನೋಡಿಕೊಳ್ಳಲು ಪ್ರತ್ಯೇಕವಾಗಿ ಸಿಆರ್‌ಪಿಎಫ್ ಯೋಧರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಇದೆ. ಹೀಗೆ, ಸಿಆರ್‌ಪಿಎಫ್ ಯೋಧರನ್ನು ಮತ್ತು ಒಂದು ಪ್ರತ್ಯೇಕ ದಳವನ್ನು ಸೃಷ್ಟಿಸಿ ಪ್ರತಿ ಚಿತ್ರಮಂದಿರಕ್ಕೂ ಕಾವಲು ವಿಧಿಸಲಾಗಿದೆ. ಸಿಆರ್‌ಪಿಎಫ್ ಯೋಧರನ್ನು ಬಳಸಿಕೊಂಡು ಸಂಭಾವ್ಯ ಗಲಾಟೆಗಳನ್ನು ಕೂಡಾ ಹತ್ತಿಕ್ಕಲಾಗಿದೆಯಂತೆ. ಇನ್ನು, ‘ಭೀಮ್ಲಾ ನಾಯಕ್ಚಿತ್ರಕ್ಕೆ ಹೀಗೆ ಸಮಸ್ಯೆ ಕೊಡಲೆಂದೇ ಜಗನ್ ಮೋಹನ್ ರೆಡ್ಡಿ ಸರ್ಕಾರ ಒಂದು ದಿನಕ್ಕೆ ಬರೋಬ್ಬರಿ 3 ಕೋಟಿ ರೂ. ರುಪಾಯಿ ಖರ್ಚು ಮಾಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
    ಹೌದು, ಥಿಯೇಟರ್​ಗಳು ಹೊಸ ನಿಯಮವನ್ನು ಮೀರದಂತೆ ನೋಡಿಕೊಳ್ಳುವ ದಳ ಮತ್ತು ಅದರ ಪ್ರಯಾಣ ವೆಚ್ಚ, ಸಿಆರ್‌ಪಿಎಫ್ ಯೋಧರ ಪ್ರಯಾಣ ಹಾಗೂ ದಿನದ ಭತ್ಯೆ, ಜತೆಗೆ ಹೆಚ್ಚುವರಿ ಪೊಲೀಸರ ನಿಯೋಜನೆ ಭತ್ಯೆ ಇತರೆಗಳನ್ನು ಲೆಕ್ಕ ಹಾಕಿದರೆ ಒಂದು ದಿನಕ್ಕೆ ಮೂರು ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚಾಗುತ್ತದೆ ಎನ್ನಲಾಗಿದೆ. ಟಿಕೆಟ್ ದರ ಇಳಿಕೆ ನಿಯಮವನ್ನು ಜಗನ್ ಸರ್ಕಾರ ಮತ್ತೆ ಪರಿಶೀಲಿಸುವ ಮೊದಲೇ ಭೀಮ್ಲಾ ನಾಯಕ್ಚಿತ್ರ ರಿಲೀಸ್ ಆಗಿದ್ದು, ಇದರಿಂದ, ಆಂಧ್ರದಲ್ಲಿ ಮತ್ತೆ ಪವನ್ v/s ಜಗನ್ ಸರ್ಕಾರ‘ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು, ಇದರಿಂದ ಪವನ್ ಅಭಿಮಾನಿಗಳಿಗಂತೂ ಎರಡನೇ ಬಾರಿ ಅವರ ನೆಚ್ಚಿನ ನಟನ ಸಿನಿಮಾ ನೋಡೋಕೆ ಆಗದೆ ನಿರಾಸೆ ಎದುರಾಗಿದೆ.

    ಹಾಲಿನ ಬದಲು ಮೊಸರು ಕದ್ದ ಅಭಿಮಾನಿಗಳು! ಅಜಿತ್ ಫ್ಯಾನ್ಸ್​ ಮೇಲೆ ಪೆಟ್ರೋಲ್​ ಬಾಂಬ್​​ ಎಸೆತ! ವಿಡಿಯೋ ವೈರಲ್…

    ಒಬ್ಬರು ಕೈದಿ, ಮತ್ತೊಬ್ಬರು ಪೊಲೀಸ್! ಮೆಗಾ ಸಹೋದರರು ಒಟ್ಟಿಗೆ ಕಾಣಿಸಿಕೊಂಡ ವಿಡಿಯೋ ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts