More

    ಒಬ್ಬರು ಕೈದಿ, ಮತ್ತೊಬ್ಬರು ಪೊಲೀಸ್! ಮೆಗಾ ಸಹೋದರರು ಒಟ್ಟಿಗೆ ಕಾಣಿಸಿಕೊಂಡ ವಿಡಿಯೋ ವೈರಲ್…

    ತೆಲುಗಿನ ನಟ ರಾಮ್ ಚರಣ್ ತೇಜ್ ಇಂದು ಒಂದು ಅದ್ಭುತವಾದ ವಿಡಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ, ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ, ಈ ವಿಡಿಯೋದಲ್ಲಿ ನಟ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಒಟ್ಟಿಗೆ ಅವರ ಮುಂಬರುವ ಚಲನಚಿತ್ರಗಳ ಶೂಟಿಂಗ್ ಸೆಟ್​ಗಳಲ್ಲಿ ಭಾಗವಹಿಸಿರುವುದು ಕಂಡುಬಂದಿದೆ. ಈ ವಿಡಿಯೋ ಕಂಡ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.
    ಹೌದು, ನಟ ಪವನ್ ಕಲ್ಯಾಣ್ ಮತ್ತು ಅವರ ಭೀಮಲಾ ನಾಯಕ್ಸಿನಿಮಾತಂಡ ಚಿರಂಜೀವಿ ಅವರ ಮುಂಬರುವ ಚಿತ್ರ ಗಾಡ್‌ಫಾದರ್ಸೆಟ್‌ಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಗಾಡ್‌ಫಾದರ್‌ಚಿತ್ರಕ್ಕಾಗಿ ಚಿರಂಜೀವಿ ಕೈದಿಯ ಲುಕ್‌ನಲ್ಲಿ ಶೂಟಿಂಗ್ ವೇಳೆ ಕಾಣಿಸಿಕೊಂಡಿದ್ದು, ನಟ ಪವನ್ ಕಲ್ಯಾಣ್ ಅವರು ತಮ್ಮ ಭೀಮಲಾ ನಾಯಕ್ಚಿತ್ರದ ಪೊಲೀಸ್ ಪಾತ್ರದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ, ಇವರಿಬ್ಬರೂ ಒಟ್ಟಿಗೆ ಕ್ಯಾಮೆರಾಗಳಿಗೆ ಇದೇ ಕೈದಿ ಮತ್ತು ಪೊಲೀಸ್ ಲುಕ್​ನಲ್ಲಿ ಪೋಸ್ ನೀಡಿದ್ದಾರೆ.
    ಬಳಿಕ, ಮೆಗಾ ಸ್ಟಾರ್ ಚಿರಂಜೀವಿ ಮತ್ತು ಗಾಡ್‌ಫಾದರ್ಚಿತ್ರತಂಡ ಕೂಡಾ ಪವನ್ ಕಲ್ಯಾಣ್ ಅವರ ಭೀಮ್ಲಾ ನಾಯಕ್ಸೆಟ್​ಗೆ ಹೋಗಿದ್ದಾರೆ. ಹಾಗಾಗಿ, ಗಾಡ್‌ಫಾದರ್ಮತ್ತು ಭೀಮ್ಲಾ ನಾಯಕ್ಸೆಟ್‌ಗಳಿಂದ ಈ ಒಂದು ಒಳ್ಳೆಯ ವಿಡಿಯೋವನ್ನು ಹಂಚಿಕೊಂಡ ರಾಮ್ ಚರಣ್ ಅದಕ್ಕೆ, “#GODFATHER ಮತ್ತು #BHEEMLANAYAKAK ಪರಸ್ಪರರ ಚಿತ್ರ ಸೆಟ್‌ಗಳಿಗೆ ಭೇಟಿ ನೀಡಿದ ಕ್ಷಣ! #BheemlaNayakOn25thFeb”, ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
    ಮತ್ತೊಂದೆಡೆ,ಗಾಡ್‌ಫಾದರ್‌ತಂಡದಿಂದ ಭೀಮಲಾ ನಾಯಕ್‌ಗೆ ಆಲ್‌ ದಿ ಬೆಸ್ಟ್‌ ಎಂಬ ಶುಭ ಹಾರೈಕೆಗಳೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಇಬ್ಬರೂ ನಟರು ತಮ್ಮ ತಮ್ಮ ಸಿನಿಮಾ ತಂಡಗಳೊಂದಿಗೆ ಕೆಲವು ಸಂತೋಷಕರ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವುದು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಟಾಲಿವುಡ್​ನ ಇಬ್ಬರೂ ದೊಡ್ಡ ಸ್ಟಾರ್ ನಟರು ಮತ್ತು ಸಹೋದರರು ಒಟ್ಟಿಗೆ ಕಾಣಿಸಿಕೊಂಡಿರುವ ಈ ವಿಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ಸಿನಿಪ್ರೇಕ್ಷಕರನ್ನು ಸಖತ್ ರಂಜಿಸುತ್ತಿದೆ. 

    ಒಬ್ಬರು ಕೈದಿ, ಮತ್ತೊಬ್ಬರು ಪೊಲೀಸ್! ಮೆಗಾ ಸಹೋದರರು ಒಟ್ಟಿಗೆ ಕಾಣಿಸಿಕೊಂಡ ವಿಡಿಯೋ ವೈರಲ್...

    ‘ಏಕ್ ಲವ್ ಯಾ’ ಸಿನಿಮಾ ನೋಡಿದ ಮಾಜಿ ಸಿಎಂ ಸಿದ್ದರಾಮಯ್ಯ! ಫೋಟೋಗಳು ವೈರಲ್…

    ‘ಭೀಮ್ಲಾ ನಾಯಕ್’ನಲ್ಲಿ ಸುದೀಪ್ ನಟಿಸದಿರುವುದು ಒಳ್ಳೇದಾಯ್ತು ಎಂದ ಅಭಿಮಾನಿಗಳು! ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts