More

    ಸಂಭಾವನೆ ಇಳಿಸಿಕೊಂಡ ಪೂಜಾ ಹೆಗ್ಡೆಗೆ ಪವನ್ ಕಲ್ಯಾಣ್ ಸಿನಿಮಾ ಜತೆಗೆ 2 ಸಿನಿಮಾ ಆಫರ್?

    ನಟಿ ಪೂಜಾ ಹೆಗ್ಡೆಗೆ ಸೌತ್ ಸಿನಿರಂಗದಲ್ಲಿ ಇರುವ ಬೆಲೆ ಎಷ್ಟು ಎಂಬುದು ಗೊತ್ತೆ ಇದೆ. ಬಾಲಿವುಡ್ ಆದರೂ ಅಥವಾ ಸೌತ್​ನಲ್ಲಿ ಆದರೂ ನಟಿ ಪುಜಾ ಹೆಗ್ಡೆಗೆ ಇರುವ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚು ಆಗುತ್ತಲೆ ಇದೆ. ಇನ್ನೂ, ಸೌತ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡಾ ಬುಟ್ಟ ಬೊಮ್ಮಾ ಪೂಜಾ. ಇವರಿಗೆ ಸದ್ಯ ಪೋಟಿಗೆ ಪೈಪೋಟಿ ನೀಡಿತ್ತಿರುವ ನಟಿ ಅಂದರೆ ಅದು ಕೇವಲ ಕನ್ನಡತಿ ಹಾಗೂ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ. ಆದರೆ, ಇತ್ತೀಚೆಗೆ ಬುಟ್ಟ ಬೊಮ್ಮಾಳಿಗಿರುವ ಬೇಡಿಕೆ ಕಡಿಮೆ ಆಗುತ್ತಿದೆ ಎನ್ನುವ ಸುದ್ದಿಗಳು ಹೈದರಾಬಾದ್​ನ ಗಾಂಧಿ ನಗರದ ಅಂಗಳದಲ್ಲಿ ಹರಿದಾಡುತ್ತಿವೆ.
    ಹೌದು, ಪೂಜಾ ಹೆಗ್ಡೆ ಅವರು ಹೆಚ್ಚು ಸಂಭಾವನೆ ಪಡೆಯುತ್ತಿರುವ ಕಾರಣ, ಅವರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿವೆ ಎನ್ನಲಾಗುತ್ತಿದೆ. ಆದರೆ, ಈ ರೀತಿಯ ಗಾಳಿ ಸುದ್ದಿಗಳು ಕೇಳಿ ಬಂದ ನಂತರವೂ ಕೂಡಾ ಪೂಜಾ ಅವರಿಗೆ ಸಾಲು, ಸಾಲು ಸಿನಿಮಾಗಳ ಆಫರ್​ಗಳು ಈಗಲೂ ಒಲಿದು ಬರುತ್ತಿವೆ ಎಂದರೇ ತಪ್ಪಾಗುವುದಿಲ್ಲ. ಅಂದಹಾಗೆ, ಇದೀಗ ನಟಿ ಪೂಜಾ ಅವರ ಹೆಸರು ಮತ್ತೊಬ್ಬ ತೆಲುಗಿನ ಸ್ಟಾರ್ ನಟನ ಜೊತೆಗೆ ಕೇಳಿ ಬರ್ತಿದೆ. ಅವರೇ ಟಾಲಿವುಡ್​ನ ಪವರ್ ಸ್ಟಾರ್ ನಟ ಪವನ್ ಕಲ್ಯಾಣ್. ಪವನ್‌ ಕಲ್ಯಾಣ್ ಸಿನಿಮಾ ಭವದೀಯುಡು ಭಗತ್ ಸಿಂಗ್​ಗೆ ಪೂಜಾ ಅವರು ನಾಯಕಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
    ಇನ್ನು, ಪವನ್ ಕಲ್ಯಾಣ್ ಸಿನಿಮಾಗೆ ಆಯ್ಕೆಯಾಗಿದ್ದಾರೆ ಪೂಜಾ ಎಂಬ ಸುದ್ದಿಗಳು ಹರಿದಾಡುವುದು ಆರಂಭಿಸಿದ ನಂತರ, ಇದೀಗ ಪೂಜಾ ಅವರ ಬಗ್ಗೆ ಮತ್ತೊಂದು ಗಾಳಿ ಸುದ್ದಿ ಕೇಳಿ ಬರುತ್ತಿದೆ. ಹೌದು, ತೆಲುಗು ಚಿತ್ರರಂಗದಲ್ಲಿ ಪೂಜಾ ಹೆಗ್ಡೆ ಬಗ್ಗೆ ಹೊಸದೊಂದು ಸುದ್ದಿ ಹಬ್ಬಿದೆ. 3 ಕೋಟಿ ಸಂಭಾವನೆ ಪಡೆಯುತ್ತಿದ್ದ ನಟಿ ಪೂಜಾ ಹೆಗ್ಡೆ ಅವರ ಸಂಭಾವನೆ ಈಗ ಕಡಿಮೆಯಾಗಿದೆಯಂತೆ. ಹಾಗಾಗಿ, ನಟಿ ಪೂಜಾ ಹೆಗ್ಡೆ ಸಂಭಾವನೆ ಹೆಚ್ಚು ಎಂದು ಬಾಯಿ ಮೇಲೆ ಬೆರಳಿಟ್ಟ ದೊಡ್ಡ, ದೊಡ್ಡ ನಿರ್ಮಾಪಕರು ಈಗ ಪೂಜಾ ಅವರ ಹಿಂದೆ ಬಿದ್ದಿದ್ದಾರಂತೆ. ತೆಲುಗಿನ ಅಲಾ ವೈಕುಂಠ ಪುರಮುಲೋಚಿತ್ರದಿಂದ ಹೆಚ್ಚಾದ ಪೂಜಾ ಸಂಭಾವನೆ ಈಗ ಇಳಿದಿದೆ ಎನ್ನಲಾಗುತ್ತಿದೆ.
    ಮತ್ತೊಂದೆಡೆ, ರಶ್ಮಿಕಾ ಮಂದಣ್ಣ, ಸಾಯಿ ಪಲ್ಲವಿ, ಕೃತಿ ‌ಶೆಟ್ಟಿ ಅವರಿಂದ ಪೂಜಾಗೆ ಎದುರಾಗುತ್ತಿರುವ ಪೈಪೋಟಿ ಕೂಡಾ ಪೂಜಾ ಸಂಭಾವನೆಯ ಇಳಿಕೆಗೆ ಕಾರಣವಂತೆ. ಹಾಗಾಗಿಯೇ, ಪೂಜಾ ಬಾಲಿವುಡ್‌ನ ಸರ್ಕಸ್ಮತ್ತು ತೆಲುಗಿನಲ್ಲಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಹೊಸದೊಂದು ಟೈಟಲ್ ಇಲ್ಲದ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಇನ್ನು, ಟಾಲಿವುಡ್​ನ ಪ್ರಿನ್ಸ್ ಮಹೇಶ್ ಬಾಬು ಅವರ #SSMB28 ಚಿತ್ರಕ್ಕೂ ಪೂಜಾ ಅವರೇ ನಾಯಕಿ. ಈಗ ಬಿಡುಗಡೆಯಾಗಲಿರುವ ಸಿನಿಮಾಗಳು ಬಿಟ್ಟರೆ, ಮುಂಬರುವ ಹಾಗೂ ಹೊಸದಾಗಿ ಸಹಿ ಹಾಕಿರುವ ಎಲ್ಲಾ ಸಿನಿಮಾಗಳಿಗೆ ನಟಿ ಪೂಜಾ ಹೆಗ್ಡೆ ತಮ್ಮ ಸಂಭಾವನೆಯನ್ನು 3 ಕೋಟಿ ಗಿಂತ ಕಡಿಮೆಗೆ ಇಳಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

    ದಾಖಲೆ ಬರೆದ ಯೋಗೇಶ್ ಮಾಸ್ಟರ್; ಒಂದೇ ಚಿತ್ರದಲ್ಲಿ 24 ಪಾತ್ರಗಳು

    ಬಾಲಿವುಡ್​ನಲ್ಲಿ ಕಡಿಮೆ ಚಿತ್ರಗಳೇಕೆ?; ಕೊನೆಗೂ ಮನಸ್ಸಿನ ಮಾತು ಬಿಚ್ಚಿಟ್ಟ ಪೂಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts