More

    ನಾಡಿದ್ದು ಭಾರತ್ ಬಂದ್​: ಜಿಎಸ್​ಟಿ, ತೈಲ ಬೆಲೆ ಏರಿಕೆ ಇತ್ಯಾದಿ ವಿರುದ್ಧ 8 ಕೋಟಿ ವ್ಯಾಪಾರಸ್ಥರ ಪ್ರತಿಭಟನೆ

    ನವದೆಹಲಿ: ಹೆಚ್ಚುತ್ತಲೇ ಇರುವ ಪೆಟ್ರೋಲ್​-ಡೀಸೆಲ್ ಬೆಲೆ, ತೈಲ ಬೆಲೆ ಏರಿಕೆ ಇತ್ಯಾದಿಗಳನ್ನು ವಿರೋಧಿಸಿ ವರ್ತಕ ಸಮುದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಾಡಿದ್ದು ಭಾರತ್ ಬಂದ್ ನಡೆಸುವುದಾಗಿ ಕರೆಕೊಟ್ಟಿದೆ. ಅಲ್ಲದೆ, ಫೆ. 26ರಂದು ದೇಶವ್ಯಾಪಿ ನಡೆಯಲಿರುವ ಈ ಬಂದ್​ನಲ್ಲಿ 8 ಕೋಟಿ ವ್ಯಾಪಾರಸ್ಥರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

    ಕಾನ್ಫೆಡರೇಷನ್​ ಆಫ್​ ಆಲ್ ಇಂಡಿಯಾ ಟ್ರೇಡರ್ಸ್​ (ಸಿಎಐಟಿ) ಈ ಬಂದ್​ಗೆ ಕರೆ ನೀಡಿದ್ದು, ಇದರಲ್ಲಿ 8 ಕೋಟಿಗೂ ಅಧಿಕ ವ್ಯಾಪಾರಸ್ಥರನ್ನು ಪ್ರತಿನಿಧಿಸುವ ಸುಮಾರು 40,000 ವರ್ತಕ ಸಂಘಟನೆಗಳು ಬೆಂಬಲ ಸೂಚಿಸಲಿವೆ ಎಂಬುದಾಗಿ ಹೇಳಿದೆ. ಇನ್ನು ಈ ಬಂದ್​ ಕರೆಗೆ ಆಲ್​ ಇಂಡಿಯಾ ಟ್ರಾನ್ಸ್​ಪೋರ್ಟರ್ಸ್ ವೆಲ್​ಫೇರ್​ ಅಸೋಸಿಯೇಷನ್​ (ಎಐಟಿಡಬ್ಲ್ಯುಎ) ಕೂಡ ಬೆಂಬಲ ವ್ಯಕ್ತಪಡಿಸಿದೆ.

    ಫೆ. 26ರಂದು ದೇಶಾದ್ಯಂತ ಇರುವ ಎಲ್ಲ ವಾಣಿಜ್ಯ ಮಾರುಕಟ್ಟೆಗಳು ಮುಚ್ಚಿರಲಿವೆ. ಅಲ್ಲದೆ ದೇಶಾದ್ಯಂತದ ಎಲ್ಲ ರಾಜ್ಯಗಳ ಪ್ರಮುಖ ಪಟ್ಟಣಗಳು ಸೇರಿ ಸುಮಾರು 1,500 ಕೇಂದ್ರಗಳಲ್ಲಿ ಧರಣಿಗಳು ನಡೆಯಲಿವೆ ಎಂದು ಸಿಎಐಟಿ ಸೆಕ್ರೆಟರಿ ಜನರಲ್​ ಪ್ರವೀಣ್ ಖಂಡೇಲ್​ವಾಲ್​ ತಿಳಿಸಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ನಿಮ್ಮ ಪಾಸ್​ವರ್ಡ್​ ದುರ್ಬಳಕೆ ಆದ್ರೆ ಇನ್ನು ನಿಮಗೆ ಅಲರ್ಟ್ ಬರುತ್ತೆ; ಶೀಘ್ರದಲ್ಲೇ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಹೊಸ ಅಪ್​ಡೇಟ್​

    ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಹೊಸ ಕಾರು ಖರೀದಿಸಲು ಸಚಿವ-ಸಂಸದರಿಗೆ ಲಕ್ಷಾಂತರ ಹಣ ಕೊಡುತ್ತೆ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts