More

    ಇಂದು ಅಪರಾಹ್ನ ಭಾರತ ರತ್ನ ಪ್ರಣಬ್​ ಮುಖರ್ಜಿ ಅವರ ಅಂತ್ಯಸಂಸ್ಕಾರ

    ನವದೆಹಲಿ: ಮಾಜಿ ರಾಷ್ಟ್ರಪತಿ ಭಾರತ ರತ್ನ ಪ್ರಣಬ್ ಮುಖರ್ಜಿ ನಿನ್ನೆ ಸಂಜೆ ನಿಧನರಾಗಿದ್ದು, ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಇಂದು ಅಪರಾಹ್ನ ನಡೆಯಲಿದೆ. ಅಲ್ಪ ಕಾಲದ ಅನಾರೋಗ್ಯದ ಕಾರಣ ಕಳೆದ 21 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದು ಫಲಕಾರಿಯಾಗದೆ ನಿನ್ನೆ ಅಸ್ತಂಗತರಾದರು.

    ಅವರನ್ನು ಆಗಸ್ಟ್ 10ರಂದು ಆರ್ಮಿಯ ರಿಸರ್ಚ್​ ಆ್ಯಂಡ್ ರೆಫರೆಲ್ ಹಾಸ್ಪಿಟಲ್​ಗೆ ದಾಖಲಿಸಲಾಗಿತ್ತು. ಅದೇ ದಿನ ಅವರ ಮಿದುಳಿನಲ್ಲಿ ಉಂಟಾಗಿದ್ದ ಕ್ಲಾಟ್​ ರಿಮೂವ್ ಮಾಡುವ ಶಸ್ತ್ರ ಚಿಕಿತ್ಸೆನಡೆದಿತ್ತು. ಆ ನಂತರ ಹಲವು ಅರೋಗ್ಯ ಸಮಸ್ಯೆಗಳುಂಟಾಗಿತ್ತು. ಲಂಗ್ ಇನ್​ಫೆಕ್ಷನ್ ಆಗಿತ್ತು. ಅಲ್ಲದೆ ಕೋವಿಡ್ 19 ಪಾಸಿಟಿವ್ ಕೂಡ ದೃಢಪಟ್ಟಿತ್ತು. ಕೊನೆಗೆ ಚಿಕಿತ್ಸೆಫಲಕಾರಿಯಾಗದೆ ಭಾನುವಾರ ಸಂಜೆ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು.

    ಇದನ್ನೂ ಓದಿ: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್​ ​ಮುಖರ್ಜಿ ನಿಧನ

    ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಇಂದು ಅಪರಾಹ್ನ 2 ಗಂಟೆಗೆ ಲೋಧಿ ರಸ್ತೆಯ ಕ್ರೆಮಟೋರಿಯಂನಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಸರ್ಕಾರ ಆಗಸ್ಟ್​ 31ರಿಂದ ಸೆಪ್ಟೆಂಬರ್ 6 ರ ತನಕ ಒಂದು ವಾರ ಶೋಕಾಚರಣೆ ಘೋಷಿಸಿದೆ. (ಏಜೆನ್ಸೀಸ್)

    ಭಾರತ ರತ್ನ ಪ್ರಣಬ್​ ಮುಖರ್ಜಿಯ ಅಪರೂಪದ ಫೋಟೋಗಳು ಇಲ್ಲಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts