More

    ಅಡ್ವಾಣಿಗೆ ಭಾರತ ರತ್ನ: ಹೋರಾಟ, ಸಂಘಟನೆಗೆ ಸಂದ ಗೌರವ ಎಂದ ವಿಜಯೇಂದ್ರ

    ಬೆಂಗಳೂರು: ಭಾರತದ ಮಾಜಿ ಉಪಪ್ರಧಾನಿ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ, ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಎಲ್‌ಕೆ ಅಡ್ವಾಣಿ ಅವರಿಗೆ ಪ್ರಶಂಸೆ ಮಹಾಪೂರ ಹರಿದು ಬರುತ್ತಿದೆ.

    ಇದನ್ನೂ ಓದಿ:ನಟ ದರ್ಶನ್ ಹುಟ್ಟು ಹಬ್ಬಕ್ಕೆ ದಿನಗಣನೆ; ದವಸ-ಧಾನ್ಯ ತರಲು ಮನವಿ ಮಾಡಿದ್ದೇಕೆ ?

    ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಎಲ್‌ಕೆ ಅಡ್ವಾಣಿ ಅವರಿಗೆ ಭಾರತರತ್ನ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಅಡ್ವಾಣಿಯವರಿಗೆ ಭಾರತ ರತ್ನ ಗೌರವ ಸಿಕ್ಕಿರೋದು ದೇಶದ ಜನರಿಗೆ ತುಂಬಾ ಸಂತಸವನ್ನು ತಂದು ಕೊಟ್ಟಿದೆ. ರಾಜ್ಯದ ಪರವಾಗಿ ನಾನು ಅಡ್ವಾಣಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿಯೊಬ್ಬರಿಗೆ ನೆನಪು ಆಗೋದು ಎಲ್ ಕೆ ಅಡ್ವಾಣಿಯವರ ಹೋರಾಟಗಳು. ಅಡ್ವಾಣಿ ಎಂದರೆ ಉತ್ತಮ ಸಂಘಟನಕಾರರು ಎಂದರು.

    ಲಾಲ್‌ಕೃಷ್ಣ ಅಡ್ವಾಣಿಯವರು ಮಾಡಿದ್ದ ರಥಯಾತ್ರೆಯನ್ನು ಯಾರೂ ಕೂಡ ಮರೆಯೋಕೆ ಸಾಧ್ಯವಿಲ್ಲ ಎಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ, ಇಂತಹ ಉತ್ತಮ ತೀರ್ಮಾನ ಕೈಗೊಂಡ ಪ್ರಧಾನಿಗಳಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

    ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆಗಾಗಿ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡ ತಪಸ್ವೀ ರಾಜಕಾರಣಿ, ಬಿಜೆಪಿ ಕಂಡ ಶ್ರೇಷ್ಠ ನೇತಾರ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಜೀ ಅವರು ತಮ್ಮ ಸಾಧನೆ ಹಾಗೂ ಹೋರಾಟಕ್ಕೆ ಅವರ ಜೀವತಾವಧಿಯಲ್ಲೇ ‘ಭಾರತರತ್ನ’ ಪಡೆಯುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.

    ವಿವಾದದ ನಡುವೆ ಮತ್ತೆರಡು ಫೋಟೊ ಹಂಚಿಕೊಂಡ ಪವಿತ್ರಾಗೌಡ! ನಟ ದರ್ಶನ್​ ಫ್ಯಾನ್ಸ್​ ಹೇಳಿದ್ದೇನು?  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts