ಲಖನೌ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜೀವನದ ಕಥೆಯನ್ನು ನಾಟಕ ರೂಪದಲ್ಲಿ ತೋರಿಸಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಾಬತ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಂ (10) ಹೆಸರಿನ ಬಾಲಕ ಮತ್ತು ಆತನ ಸ್ನೇಹಿತರು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭಗತ್ ಸಿಂಗ್ ನಾಟಕ ಮಾಡಲು ಸಿದ್ಧತೆ ನಡೆಸುತ್ತಿದ್ದರು. ನಾಟಕದ ತಾಲೀಮನ್ನು ನಡೆಸುತ್ತಿದ್ದರು. ಅದಕ್ಕೆಂದು ಸ್ನೇಹಿತರೆಲ್ಲರು ಗುರುವಾರದಂದು ಶಿವಂ ಮನೆಗೆ ಬಂದಿದ್ದಾರೆ. ಭಗತ್ ಸಿಂಗ್ ಗೆ ನೇಣು ಶಿಕ್ಷೆ ನೀಡುವ ಸನ್ನಿವೇಶವನ್ನು ಪ್ರಾಕ್ಟೀಸ್ ಮಾಡಲಾಗುತ್ತಿತ್ತು. ಭಗತ್ ಪಾತ್ರದಲ್ಲಿದ್ದ ಶಿವಂ ಸ್ಟೂಲ್ ಮೇಲೆ ನಿಂತು ನೇಣು ಹಾಕಿಕೊಂಡಿದ್ದಾನೆ. ಆ ವೇಳೆ ಸ್ಟೂಲ್ ಜಾರಿದ್ದು, ನೇಣು ಬಿಗಿಯಾಗಿದೆ.
ನೇಣು ಬಿಗಿಯಾಗಿ ಉಸಿರಾಡಲಾಗದೆ ಶಿವಂ ಒದ್ದಾಡಲಾರಂಭಿಸಿದ್ದಾನೆ. ಆದರೆ ಅವನ ಸ್ನೇಹಿತರು ಆತ ನಟನೆ ಮಾಡುತ್ತಿದ್ದಾನೆಂದುಕೊಂಡು ಸುಮ್ಮನಾಗಿದ್ದಾರೆ. ಆದರೆ ಯಾವಾಗ ಶಿವಂ ಉಸಿರು ನಿಲ್ಲಿಸಿ ದೇಹ ಅಲುಗಾಡುವುದು ನಿಂತಿತೋ ಆಗ ಸ್ನೇಹಿತರು ಗಾಬರಿಗೊಂಡಿದ್ದಾರೆ. ಓಡಿ ಹೋಗಿ ಗ್ರಾಮಸ್ಥರನ್ನು ಕರೆ ತಂದಿದ್ದಾರೆ. ಆದರೆ ಊರವರು ಬರುವ ಮೊದಲೇ ಶಿವಂ ಪ್ರಾಣ ಬಿಟ್ಟಿದ್ದ. ಬಾಲಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)
ಬಿಗ್ಬಾಸ್ನಲ್ಲಿ ಇಂದೇ ಎಲಿಮಿನೇಶನ್! ಮನೆಯಿಂದ ಹೊರಬಂದವರು ಇವರೇ ನೋಡಿ..