ಏರಿಕೆ ಹಂತದಲ್ಲಿ ಕರೊನಾ! ಇಂದು ಮತ್ತೆ 2 ಸಾವಿರದಷ್ಟು ಸೋಂಕು ದೃಢ

ಬೆಂಗಳೂರು: ಕರ್ನಾಟಕದಲ್ಲಿ ಬಹುತೇಕ ಕಡಿಮೆಯಾಗಿದ್ದ ಕರೊನಾ ಸೋಂಕು ಮತ್ತೆ ಏರಲಾರಂಭಿಸಿದೆ. ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 1987 ಮಂದಿಯಲ್ಲಿ ಸೋಂಕು ದೃಢವಾಗಿದೆ. ಸತತ ಮೂರು ದಿನಗಳಿಂದ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಇದೀಗ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 29,05,124ಕ್ಕೆ ಏರಿಕೆಯಾಗಿದೆ. ಇಂದು 1,632 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ಗುಣಮುಖರ ಸಂಖ್ಯೆ 28,44,742ಕ್ಕೆ ಏರಿದ್ದರೆ 23,796 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಇಂದು 37 ಸೋಂಕಿತರು ಕೊನೆಯುಸಿರೆಳೆದಿದ್ದು, ಮೃತರ ಸಂಖ್ಯೆ 36,562ಕ್ಕೆ ಏರಿಕೆಯಾಗಿದೆ. … Continue reading ಏರಿಕೆ ಹಂತದಲ್ಲಿ ಕರೊನಾ! ಇಂದು ಮತ್ತೆ 2 ಸಾವಿರದಷ್ಟು ಸೋಂಕು ದೃಢ