More

    ‘ಇರಲಿ ಎಚ್ಚರ! ಕಿಕ್ಕಿರಿದ ಸ್ಥಳಗಳಲ್ಲಿ ಕರೊನಾ ವೇಗವಾಗಿ ಹರಡುತ್ತದೆ’

    ನವದೆಹಲಿ : ಕರೊನಾ ಅಪಾಯ ಇನ್ನೂ ಕಳೆದಿಲ್ಲವಾದರೂ, ಅದೂ ಮತ್ತೆ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಉಂಟಾಗುತ್ತಿರುವುದು ಸರ್ಕಾರದ ಆರೋಗ್ಯ ವಿಶೇಷಜ್ಞರಲ್ಲಿ ಆತಂಕ ಮೂಡಿಸಿದೆ. ನಿರ್ಬಂಧಗಳು ಕಡಿಮೆಯಾಗಿವೆ ಎಂದು ಮೈಮರೆತು ನಡೆದುಕೊಳ್ಳಬಾರದು ಎಂದು ಅವರು ಎಚ್ಚರಿಸಿದ್ದಾರೆ.

    ಕರೊನಾ ಕೇಸುಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರಿಂದ ಹಲವು ರಾಜ್ಯಗಳು ಪ್ರವಾಸ ಮತ್ತು ಸಾರ್ವಜನಿಕ ಚಟುವಟಿಕೆ ಮೇಲೆ ನಿರ್ಬಂಧಗಳನ್ನು ಸಡಿಲೀಕರಿಸಿದೆ. ಇದರಿಂದ ಪ್ರೋತ್ಸಾಹಿತರಾಗಿರುವ ಜನರು ಒಟ್ಟಾಗಿ ಮನಾಲಿ ಮಸ್ಸೂರಿಯಂತಹ ಹಿಲ್​ ಸ್ಟೇಷನ್​ಗಳಿಗೆ ಮತ್ತು ಇತರ ಪ್ರವಾಸಿ ತಾಣಗಳಿಗೆ ತೆರಳಿದ್ದು, ಜನಪ್ರವಾಹದ ಫೋಟೋ ವಿಡಿಯೋಗಳು ಮಾಧ್ಯಮದಲ್ಲಿ ವರದಿಯಾಗುತ್ತಿವೆ. ಆದರೆ, ಕರೊನಾ ವೈರಸ್ ಗಾಳಿಯಿಂದ ಹರಡುವ ಹಿನ್ನೆಲೆಯಲ್ಲಿ, ಇದು ಕಳವಳಕಾರಿ ಬೆಳವಣಿಗೆ ಎಂದು ತಜ್ಞರು ಹೇಳಿದ್ದಾರೆ.

    ಇದನ್ನೂ ಓದಿ: ಸಾಗರಮಾಲಾ ಯೋಜನೆಗೆ ವಿರೋಧ: ಬೆಂಗರೆಯಲ್ಲಿ ದೋಣಿಯಲ್ಲಿ ಮೀನುಗಾರರಿಂದ ಪ್ರತಿಭಟನೆ

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸರ್ಕಾರದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್, “ಪ್ರವಾಸಿ ತಾಣಗಳಲ್ಲಿ ಮನರಂಜನೆಯ ಮನಸ್ಥಿತಿಯಲ್ಲಿ ಜನ ಸೇರುತ್ತಿರುವುದರಿಂದ ವಿಶೇಷವಾಗಿ ಕೋವಿಡ್ ಅಪಾಯವಿದೆ. ಸೋಂಕು ಯಾವಾಗಲೂ ಕಿಕ್ಕಿರಿದ ಸ್ಥಳಗಳಲ್ಲಿ ವೇಗವಾಗಿ ಹರಡುತ್ತದೆ. ಪ್ರವಾಸೋದ್ಯಮ ಇರಬೇಕು, ಆದರೆ ನಾವು ಬೇಜವಾಬ್ದಾರಿಯಿಂದ ವರ್ತಿಸಿ, ಕೋವಿಡ್-ಸೂಕ್ತವಾದ ನಡವಳಿಕೆಯನ್ನು ಅನುಸರಿಸದಿದ್ದರೆ, ವೈರಸ್ ವೇಗವಾಗಿ ಹರಡಬಹುದು” ಎಂದು ಎಚ್ಚರಿಸಿದ್ದಾರೆ.

    “ಈ ಜನನಿಬಿಡ ಸ್ಥಳಗಳಲ್ಲಿ ಸೋಂಕಿಗೀಡಾಗುವ ಜನರು ಮತ್ತೆ ವಾಪಸ್​ ಹೋಗಿ ಇತರರಿಗೂ ಸೋಂಕು ಹರಡಬಹುದು. ಎಲ್ಲಾ ಸಾಮಾನ್ಯಸ್ಥಿತಿಗೆ ಮರುಕಳಿಸಿದಂತೆ ವರ್ತಿಸಲು ಇದು ಸಮಯವಲ್ಲ. ಈ ರೀತಿಯ ಉಡಾಫೆ ಸಲ್ಲ. ಕೋವಿಡ್​ ವಿರುದ್ಧ ನಿರಂತರ ಅಭಿಯಾನ ನಡೆಯಬೇಕಿದೆ” ಎಂದು ಡಾ. ಪೌಲ್ ಹೇಳಿದ್ದಾರೆ.

    ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ.. ಇಲ್ಲಿ ಮಾಸ್ಕ್​ ಧರಿಸದಿದ್ದರೆ 5 ಸಾವಿರ ರೂ. ದಂಡ ಇಲ್ಲವೇ 8 ದಿನ ಜೈಲುಶಿಕ್ಷೆ!

    “ಎಲ್ಲಾ ಪರಿಸ್ಥಿತಿಗಳಲ್ಲೂ ಕೋವಿಡ್-​ಸೂಕ್ತವಾದ ನಡವಳಿಕೆ ಪಾಲಿಸಲು ನಾವು ಜನರನ್ನು ಕೇಳಿಕೊಳ್ಳಲಿಚ್ಛಿಸುತ್ತೇವೆ. ನೀವು ಖುದ್ದು ನಿಮ್ಮನ್ನಷ್ಟೇ ವೈರಸ್​ಗೆ ಒಡ್ಡುತ್ತಿಲ್ಲ, ನಿಮ್ಮ ಹತ್ತಿರದ ಮತ್ತು ಆಪ್ತವಾದ ಜನರನ್ನೂ ಅಪಾಯಕ್ಕೆ ಒಡ್ಡುತ್ತಿದ್ದೀರ. ಇದು ನಾವು ಕೋವಿಡ್ ವಿರುದ್ಧದ ಸಮರದಲ್ಲಿ ಸೋಲುವಂತೆ ಮಾಡಬಲ್ಲದು” ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್​ವಾಲ್ ಹೇಳಿದ್ದಾರೆ. (ಏಜೆನ್ಸೀಸ್)

    ರಸ್ತೆಯಲ್ಲಿ ಉಗುಳಿ 33 ಲಕ್ಷ ರೂಪಾಯಿ ದಂಡ ಕಕ್ಕಿದ ಮುಂಬೈಕರರು!

    ಜುಲೈ 12, 13 ರಂದು ರೆಡ್ ಅಲರ್ಟ್! ಕರಾವಳಿ, ಮಲೆನಾಡಲ್ಲಿ ಹೆಚ್ಚು ಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts