More

    ಬೆಂಗಳೂರಿನ ರೇವ್​ ಪಾರ್ಟಿ; 103 ಮಂದಿಯ ಪೈಕಿ 86 ಮಂದಿ ಡ್ರಗ್ ಸೇವನೆ…

    ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿಆರ್ ಫಾರ್ಮ್ ಹೌಸ್​​ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಸೋಮವಾರ ನಸುಕಿನ ಜಾವದವರೆಗೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ನಶೆ ಪಾರ್ಟಿಯಲ್ಲಿ ಭಾಗಿಯಾಗಿದ್ದ  103 ಮಂದಿಯ ಪೈಕಿ 86 ಮಂದಿ ಡ್ರಗ್ ಸೇವನೆ ಮಾಡಿರುವುದು ಖಚಿತವಾಗಿದೆ.

    ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ  103 ಮಂದಿಯ ಪೈಕಿ 86 ಮಂದಿ ಡ್ರಗ್ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಪೈಕಿ ಪಾರ್ಟಿಯಲ್ಲಿ ಭಾಗಿಯಾಗಿದ್ದ 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಡ್ರಗ್ಸ್  ಪಾಸಿಟಿವ್ ಬಂದಿದೆ. ಜೊತೆಗೆ, 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಡ್ರಗ್ಸ್ ಪಾಸಿಟಿವ್ ಬಂದಿದೆ. ಇದರಲ್ಲಿ  ತೆಲುಗು ನಟಿ ಹೇಮಾ ಅವರ ಡ್ರಗ್ಸ್ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ.

    ರಾತ್ರೋ ರಾತ್ರಿ ಎಲ್ಲರನ್ನು ವಶಕ್ಕೆ ಪಡೆದ ಪೊಲೀಸರು ಎಲ್ಲರನ್ನು ಬೆಳಗ್ಗೆಯಿಂದ ಸಂಜೆವರೆಗೂ ಕೂಡಿ ಹಾಕಿ ವಿಚಾರಣೆ ಮಾಡಿದ್ದರು. ಎಲ್ಲರ ಬ್ಲಡ್ ಸ್ಯಾಂಪಲ್ ಕಲೆಕ್ಟ್ ಮಾಡಿ ಪೊಲೀಸರು ಅವರನ್ನು ಕಳುಹಿಸಿದ್ದರು. ಎಲ್ಲರ ರಕ್ತದ ಮಾದರಿ ಪರೀಕ್ಷೆ ಮಾಡಿದಾದ 103 ಜನರ ಪೈಕಿ 86 ಜನರಲ್ಲಿ ಡ್ರಗ್ಸ್ ಪಾಸಿಟಿವ್ ಬಂದಿದೆ.

    ಬೆಂಗಳೂರಿನ ರೇವ್ ಪಾರ್ಟಿಗೂ ನನಗೂ ಯಾವುದೇ ಸಂಬಂಧವಿಲ್ಲ: ಸ್ಪಷ್ಟನೆ ಕೊಟ್ಟ’ಪವರ್​​’ ಸಿನಿಮಾ ನಟಿ ಹೇಮಾ

    ತಗ್ಲಾಕ್ಕೊಂಡಳು ನಟಿ ಹೇಮಾ; ಬೆಂಗಳೂರು ರೇವ್ ಪಾರ್ಟಿಗೆ ಬಂದಿಲ್ಲ ಎಂದವಳ ರಕ್ತದಲ್ಲಿ ಡ್ರಗ್ಸ್ ಪತ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts