More

    ಕಾರು ನಿಲ್ಲಿಸಿಕೊಂಡು ಹಣ ಲೆಕ್ಕ ಹಾಕುತ್ತಿದ್ದ ವೇಳೆ ಪೊಲೀಸರ ದಾಳಿ: ದಾಖಲೆ ಇಲ್ಲದ 10 ಲಕ್ಷ ರೂ. ಹಣ ಸೀಜ್​

    ಬೆಂಗಳೂರು: ಅನುಮಾನಾಸ್ಪದವಾಗಿ ಕಾರನ್ನು ನಿಲ್ಲಿಸಿಕೊಂಡು 10 ಲಕ್ಷ ರೂ. ಹಣ ಲೆಕ್ಕ ಹಾಕುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಸ್ಕೂರು ಬಳಿ ನಡೆದಿದೆ.

    ಕೆಎ 52 N 0603 ಇನೋವಾ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ನಿರ್ಜನ ಪ್ರದೇಶದಲ್ಲಿ ಕಂತೆ ಕಂತೆ ನೋಟು ಎಣಿಸುತ್ತಿದ್ದರು. ರೌಂಡ್ಸ್​ನಲ್ಲಿ ಇದ್ದ ಪೊಲೀಸರು ಅನುಮಾನಗೊಂಡು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಕಾರಿನಲ್ಲಿ 10 ಲಕ್ಷ ಹಣ ಸಿಕ್ಕಿದ್ದು, ಅದಕ್ಕೆ ದಾಖಲೆ ಕೇಳಿದ್ದಾರೆ. ಆದರೆ ಸರಿಯಾದ ಉತ್ತರ ಸಿಗದ ಹಿನ್ನೆಲೆ ಹುಸ್ಕೂರು ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಮಲ್ಲೇಶ್ ಮತ್ತು ನೆಲಮಂಗಲದ ರಾಜೇಶ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ.

    ಮಲ್ಲೇಶ್ ತಮ್ಮನಿಂದ ಹಣವನ್ನು ಪಡೆದುಕೊಂಡು ಬಂದಿರುವುದಾಗಿ ಪೊಲೀಸ್ ಠಾಣೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಸರಿಯಾದ ದಾಖಲೆ ನೀಡಿದ ಹಿನ್ನೆಲೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಲಯಕ್ಕೆ ಹಣವನ್ನು ಒಪ್ಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮೊದಲ ಬಾರಿ ಬದುಕುಳಿದವಳು 2ನೇ ಬಾರಿ ದುರಂತ ಸಾವು: ಮನಕಲಕುತ್ತೆ ಈಕೆ ಅನುಭವಿಸಿದ ನರಕಯಾತನೆ

    83 ವರ್ಷದ ಅಜ್ಜಿಗೆ ಕೇರಂ ಆಟದಲ್ಲಿ ಚಿನ್ನದ ಮೆಡಲ್​..!

    ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳಾ ಕ್ರಿಕೆಟರ್​ ದಟ್ಟ ಅರಣ್ಯದಲ್ಲಿ ಶವವಾಗಿ ಪತ್ತೆ: ಜೀವ ಕಸಿಯಿತು ಕ್ರಿಕೆಟ್​ ಮೋಹ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts