More

    83 ವರ್ಷದ ಅಜ್ಜಿಗೆ ಕೇರಂ ಆಟದಲ್ಲಿ ಚಿನ್ನದ ಮೆಡಲ್​..!

    ಪುಣೆ: ವಯಸ್ಸು ಬರೇ ಒಂದು ಸಂಖ್ಯೆ ಎಂದು ನೀವು ಹಲವಾರು ಬಾರಿ ಕೇಳಿರಬಹುದು. ಆ ಮಾತಿಗೆ ತಕ್ಕಂತೆ, 83 ವರ್ಷದ ಮಹಿಳೆಯೊಬ್ಬರು ಪುಣೆಯಲ್ಲಿ ನಡೆದ ಕೇರಂ ಟೂರ್ನಮೆಂಟ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮಾಹಿತಿಯನ್ನು ಅವರ ಮೊಮ್ಮಗ ತನ್ನ ಟ್ವಿಟರ್‌ ಅಕೌಂಟ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ಸುದ್ದಿ ಈಗ ವೈರಲ್​ ಆಗಿದೆ.

    ತಮ್ಮ ಟ್ವಿಟರ್ ಬಯೋ ಪ್ರಕಾರ ಆಮ್ ಆದ್ಮಿ ಪಕ್ಷದ ವಕೀಲ ಮತ್ತು ವಕ್ತಾರ ಅಕ್ಷಯ್ ಮರಾಠೆ, ಪುಣೆಯ ಆಲ್-ಮಗರಪಟ್ಟಾ ಸಿಟಿ ಕೇರಂ ಪಂದ್ಯಾವಳಿಯಲ್ಲಿ ತನ್ನ 83 ವರ್ಷದ ಅಜ್ಜಿ, ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಸಿಂಗಲ್ಸ್ ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ ಎಂದು ಹಂಚಿಕೊಂಡಿದ್ದಾರೆ.

    ಕಿರಿಯ ವಯಸ್ಸಿನ ಎದುರಾಳಿಗಳನ್ನು ಅಜ್ಜಿ ಸೋಲಿಸಿದ್ದು ಈ ಸಾಧನೆಯನ್ನು ಎಲ್ಲರೂ ಮೆಚ್ಚುತ್ತಿದ್ದಾರೆ. ತನ್ನ ಅಜ್ಜಿ ಯುವತಿಯೊಬ್ಬಳ ವಿರುದ್ಧ ಕೇರಂ ಆಟ ಆಡುತ್ತಿರುವ 21 ಸೆಕೆಂಡ್ ಗಳ ಕ್ಲಿಪ್ ಕೂಡ ಅಕ್ಷಯ್​ ಮರಾಠೆ ಹಾಕಿದ್ದಾರೆ. ನೆಟ್ಟಿಗರು, ಈ ಸಾಧನೆ ಬಗ್ಗೆ ಅಜ್ಜಿಗೆ ಅಭಿನಂದಿಸಿದ್ದರಿಂದ ಅಕ್ಷಯ್​ ಮರಾಠೆ ಪೋಸ್ಟ್​ ಮಾಡಿದ್ದ ಕ್ಲಿಪ್ 10,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts