More

    ತಾಯಿಯ ಕೊಲೆ ಪ್ರಕರಣ: ನೆಟ್​ಫ್ಲಿಕ್ಸ್​​​ನಲ್ಲಿ ಪ್ರಸಾರಕ್ಕೆ ಹೈಕೋರ್ಟ್​ ತಡೆಯಾಜ್ಞೆ

    ಬೆಂಗಳೂರು: ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರಕ್ಕೆ ಸಿದ್ಧವಾಗಿರುವ ‘ಕ್ರೈಂ ಸ್ಟೋರೀಸ್​:ಇಂಡಿಯಾ ಡಿಟೆಕ್ಟೀವ್ಸ್’ ವೆಬ್ ಸರಣಿಯ ಪ್ರಥಮ ಕಂತನ್ನು ಪ್ರಸಾರ ಮಾಡದಂತೆ ಕರ್ನಾಟಕ ಹೈಕೋರ್ಟ್​ ತಡೆಯಾಜ್ಞೆ ವಿಧಿಸಿದೆ. ಹೈಕೋರ್ಟ್​ ಆದೇಶದ ಮೇರೆಗೆ ನೆಟ್​ಫ್ಲಿಕ್ಸ್, ತಾಯಿಯನ್ನೇ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಟೆಕ್ಕಿ ಅಮೃತ ಪ್ರಕರಣದ ಬಗ್ಗೆ ಚಿತ್ರೀಕರಿಸಲಾಗಿರುವ ‘ಎ ಮರ್ಡರ್ಡ್​ ಮದರ್​’ ಎಪಿಸೋಡ್​ಅನ್ನು ಬ್ಲಾಕ್​ ಮಾಡಿದೆ ಎನ್ನಲಾಗಿದೆ.

    ಬೆಂಗಳೂರಿನಲ್ಲಿ ನಡೆದಿದ್ದ ನಿರ್ಮಾಲಾ ಚಂದ್ರಶೇಖರ್ ಎಂಬುವರ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಶ್ರೀಧರ್ ರಾವ್ ಸಲ್ಲಿಸಿದ್ದ ಅರ್ಜಿಯ ಮೇಲೆ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಈ ಮಧ್ಯಂತರ ಆದೇಶ ಜಾರಿಗೊಳಿಸಿದ್ದಾರೆ.

    ಇದನ್ನೂ ಓದಿ: ಶಾರುಖ್‌ ಪತ್ನಿಗೂ ಡ್ರಗ್ಸ್‌ ನಂಟು? ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದ ಗೌರಿ ಖಾನ್‌!

    ವೆಬ್​ ಸೀರಿಸ್​​ನ ಮೊದಲ ಕಂತಿನಲ್ಲಿ ವಿಚಾರಾಣಾಧೀನ ಆರೋಪಿಗಳ ಹೇಳಿಕೆಗಳನ್ನು ಸೇರಿಸಲಾಗಿದೆ. ಆದ್ದರಿಂದ ಅದರ ಪ್ರಸಾರವು ಅವರಿಗೆ ಕಿರುಕುಳ ನೀಡುವುದಲ್ಲದೆ, ಅವರ ಬಗ್ಗೆ ಪೂರ್ವಾಗ್ರಹ ಉಂಟು ಮಾಡುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಬಗ್ಗೆ ವೆಬ್​ ಸರಣಿಯ ನಿರ್ಮಾಪಕರು ಮತ್ತು ನೆಟ್​ಫ್ಲಿಕ್ಸ್​ಗೆ ಹೇಳಿಕೆಗಳನ್ನು ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ.

    ‘ದೇಶದಲ್ಲಿರುವುದು ನೀಚ ರಾವಣ ರಾಜ್ಯ’; ಪ್ರಿಯಾಂಕ ಗಾಂಧಿ ಬಂಧನವನ್ನ ಖಂಡಿಸಿದ ಡಿಕೆಶಿ

    ಮಕ್ಕಳಿಗೆ ನೀಡುವ ಜೈಕೋವಿ-ಡಿ ಕರೊನಾ ಲಸಿಕೆಗೆ ಶೀಘ್ರ ಬೆಲೆ ನಿಗದಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts