More

    ಮಕ್ಕಳಿಗೆ ನೀಡುವ ಜೈಕೋವಿ-ಡಿ ಕರೊನಾ ಲಸಿಕೆಗೆ ಶೀಘ್ರ ಬೆಲೆ ನಿಗದಿ

    ನವದೆಹಲಿ: 12 ವರ್ಷ ಮೇಲ್ಪಟ್ಟವರಿಗೆ ನೀಡಲು ತುರ್ತು ಬಳಕೆ ಅನುಮೋದನೆ ಪಡೆದಿರುವ ಜೈಡಸ್​ ಕ್ಯಾಡಿಲಾದ ಜೈಕೋವಿ-ಡಿ ಕರೊನಾ ಲಸಿಕೆಯ ಬೆಲೆ ನಿಗದಿ ಕುರಿತಾಗಿ ಕಂಪೆನಿ ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ನಡೆಯುತ್ತಿದೆ. ತನ್ನ ಮೂರು ಡೋಸ್​ ಲಸಿಕೆಗೆ 1,900 ರೂ. ಬೆಲೆ ನಿಗದಿ ಮಾಡುವ ಪ್ರಸ್ತಾವನೆಯನ್ನು ಕ್ಯಾಡಿಲಾ ಕಂಪೆನಿ ಸರ್ಕಾರದ ಮುಂದಿರಿಸಿದೆ ಎನ್ನಲಾಗಿದೆ.

    ಜಗತ್ತಿನ ಮೊದಲ ಡಿಎನ್​ಎ ಆಧಾರಿತ ಕರೊನಾ ಲಸಿಕೆಯಾದ ಜೈಕೋವಿ-ಡಿಯನ್ನು ಸದ್ಯದಲ್ಲೇ ಲಸಿಕಾ ಅಭಿಯಾನದಲ್ಲಿ ಬಳಸಲು ಆರಂಭಿಸಲಾಗುವುದು ಎಂದು ಕಳೆದ ದಿನಗಳಲ್ಲಿ ಸರ್ಕಾರ ಹೇಳಿಕೆ ನೀಡಿತ್ತು. ಈ ಲಸಿಕೆಯ ಬೆಲೆಯ ಬಗ್ಗೆ ಅದಾಗಲೇ ಎರಡು ಸುತ್ತಿನ ಮಾತುಕತೆ ನಡೆದಿದ್ದು, ಈ ವಾರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಿಟಿಐ ವರದಿ ಮಾಡಿದೆ.

    ಇದನ್ನೂ ಓದಿ: ಮಹಿಳೆಯ ಜೀವ ತೆಗೆದ ಶಾಸಕ ಕುಮಾರಸ್ವಾಮಿ ಕಾರು- ಸಿಸಿಟಿವಿಯಲ್ಲಿ ಬಯಲಾಯ್ತು ಅಸಲಿಯತ್ತು!

    ಜೈಕೋವಿ-ಡಿ ಲಸಿಕೆಗೆ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್​ಗಿಂತ ಭಿನ್ನವಾಗಿ ಬೆಲೆ ನಿಗದಿಯಾಗಲಿದೆ. ಏಕೆಂದರೆ ಅದನ್ನು ಸೂಜಿರಹಿತ ಇಂಜೆಕ್ಟರ್​ನಿಂದ ಮೂರು ಡೋಸ್​ಗಳಲ್ಲಿ ನೀಡಲಾಗುವುದು. ಒಂದು ಇಂಜೆಕ್ಟರ್​ನಿಂದ 20,000 ಡೋಸ್​ಗಳನ್ನು ಕೊಡಬಹುದಾಗಿದ್ದು, ಇಂಜೆಕ್ಟರ್​ನ ಬೆಲೆಯೇ 30,000 ರೂ.ಗಳಾಗಿದೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

    ಈ ತಿಂಗಳಲ್ಲೇ ಮಕ್ಕಳಿಗೂ ಕರೊನಾ ಲಸಿಕೆ: ಆರೋಗ್ಯ ಸಚಿವ ಸುಧಾಕರ್

    ಅಕ್ಕಿನೇನಿ ಕುಟುಂಬ ನೀಡಲು ಮುಂದಾದ ಜೀವನಾಂಶ ಎಷ್ಟು ಗೊತ್ತಾ?! ಏನೆಂದರು ಸಮಂತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts