More

    ಎಪಿಎಂಸಿ ಕಟ್ಟಡಕ್ಕೆ ಬೆಳ್ತಂಗಡಿ ಸಂತೆ ಸ್ಥಳಾಂತರ, ಶಾಸಕರಿಂದ ಪರಿಶೀಲನೆ

    ಬೆಳ್ತಂಗಡಿ: ಪ್ರತಿ ಸೋಮವಾರ ಬೆಳ್ತಂಗಡಿ ಸಂತೆಮಾರುಕಟ್ಟೆ ಪ್ರದೇಶದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಕರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಸೋಮವಾರ ವಾಣಿ ಕಾಲೇಜು ಸಮೀಪದ ಎಪಿಎಂಸಿ ಪ್ರಾಂಗಣಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.

    ಬೆಳ್ತಂಗಡಿ ವಾರದ ಸಂತೆಯು ಮೊದಲ ಬಾರಿಗೆ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರವಾದ್ದರಿಂದ ಅಲ್ಲಿನ ವ್ಯಾಪಾರ ವಹಿವಾಟುಗಳನ್ನು ಶಾಸಕ ಹರೀಶ್ ಪೂಂಜ ಪರಿಶೀಲಿಸಿದರು. ಖರೀದಿ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿ ವ್ಯಾಪಾರ ಬಗ್ಗೆ ಮಾಹಿತಿ ಪಡೆದುಕೊಂಡರು.

    ಬೆಳ್ತಂಗಡಿ ಸಂತೆಕಟ್ಟೆ ಆವರಣದಲ್ಲಿ ನಡೆಯುತ್ತಿದ್ದ ತರಕಾರಿ ಮಾರುಕಟ್ಟೆ ಹಾಗೂ ಒಣಮೀನು, ಹಣ್ಣುಹಂಪಲು ವಹಿವಾಟು ಸೋಮವಾರ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಂಡಿದ್ದವು. ಬೆಳಗ್ಗೆ 5.30ರಿಂದಲೇ ವ್ಯಾಪಾರ ವಹಿವಾಟು ಆರಂಭಗೊಂಡಿತ್ತು. ಸುಮಾರು 25 ಅಂಗಡಿಗಳಿಗೆ ಫ್ಲ್ಯಾಟ್ ಫಾರಂ ನಂಬರ್ ನೀಡಲಾಗಿತ್ತು. ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಪಾಕಿರ್ಂಗ್ ಅವಕಾಶ ಕಲ್ಪಿಸಿಕೊಡಲಾಗಿತ್ತು.

    ಪೊಲೀಸರಿಂದ ಬಂದೋಬಸ್ತ್: ಪ್ರತಿ ವಾರವು ಸಂತೆ ನಡೆಯುತ್ತಿದ್ದ ಸಂತೆಕಟ್ಟೆ ಪ್ರದೇಶದಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಗ್ರಾಹಕರಿಗೆ ಈ ಸಂಬಂಧ ಸೂಚನೆ ನೀಡಿ ಪೊಲೀಸರು ಸೂಚನೆ ನೀಡಿ ಎಪಿಎಂಸಿ ಪ್ರಾಂಗಣಕ್ಕೆ ಕಳುಹಿಸುತ್ತಿದ್ದರು. ತಹಸೀಲ್ದಾರ್ ಗಣಪತಿ ಶಾಸ್ತ್ರಿ, ನಪಂ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ಬೆಳಾಲು, ಬೆಳ್ತಂಗಡಿ ಠಾಣೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ನಪಂ ಇಂಜಿನಿಯರ್ ಮಹಾವೀರ ಆರಿಗ ಉಪಸ್ಥಿತರಿದ್ದರು.

    ಹಿಂದೆ ಇದ್ದ ಸಂತೆ ಮಾರುಕಟ್ಟೆಯಲ್ಲಿ ಸ್ಥಳಾವಕಾಶ ಕೊರತೆಯಿತ್ತು. ಎಪಿಎಂಸಿ ಕಟ್ಟಡ ಸ್ಥಳಾವಕಾಶವಿದೆ. ಸೂಕ್ತ ವ್ಯವಸ್ಥೆ ಮಾಡಿದರೆ ಗ್ರಾಮೀಣ ಸಾವಯವ ತರಕಾರಿಗಳನ್ನು ಮಾರಾಟ ಮಾಡಲು ಅನುಕೂಲ. ಮಧ್ಯವರ್ತಿಗಳ ಮೊರೆಹೋಗದೆ ನೇರ ಗ್ರಾಹಕರಿಗೆ ತರಕಾರಿ ನೀಡಬಹುದು.
    ಕೊರಗಪ್ಪ ಗೌಡ, ಕೃಷಿಕರು ಕೊಯ್ಯೂರು

    ಕರೊನಾ ನಿಯಂತ್ರಣ ವಿಚಾರದಲ್ಲಿ ಅಧಿಕಾರಿ, ಇಲಾಖೆಗಳೊಂದಿಗೆ ಜತೆಯಾಗಿದ್ದೇನೆ. ಸಂತೆ ಮಾರುಕಟ್ಟೆಯಲ್ಲಿ ಸ್ಥಳಾವಕಾಶ ಕೊರತೆಯಿರುವುದರಿಂದ ಎಪಿಎಂಸಿ ಮಾರುಕಟ್ಟೆಗೆ ವಾರದ ಸಂತೆ ಸ್ಥಳಾಂತರಿಸಲಾಗಿದೆ. ಪ್ರಥಮ ದಿನ ವ್ಯಾಪಾರಿ, ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
    ಹರೀಶ್ ಪೂಂಜ ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts