More

    ಬಳ್ಳಾರಿಯಲ್ಲಿ ಎನ್‌ಇಪಿಗೆ ವಿರೋಧಿಸಿದ ವಿದ್ಯಾರ್ಥಿಗಳ ಮೇಲೆ ಕೈಬೀಸಿದ ಪೊಲೀಸರು

    ಬಳ್ಳಾರಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಸಂಘಟನೆ ನೇತೃತ್ವದಲ್ಲಿ ನೂರಾರು ಸ್ಟೂಡೆಂಟ್ಸ್ ಗುರುವಾರ ಇಲ್ಲಿನ ಬಿಐಟಿಎಂ ಕಾಲೇಜು ಎದುರು ಬೃಹತ್ ಪ್ರತಿಭಟನೆ ನಡೆಸಿದರು.

    ಇದೇ ವೇಳೆ ಎನ್‌ಇಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಡಾ.ಅಶ್ವತ್ಥ ನಾರಾಯಣಗೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ಪೊಲೀಸರು ವಿದ್ಯಾರ್ಥಿಗಳಿಗೆ ಮೇಲೆ ಕೈಬೀಸಿದ್ದಲ್ಲದೆ ಲಾಠಿ ಚಾರ್ಜ್ ಸಹ ಮಾಡಿದರು. ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಖಾಸಗಿ ವಾಹನದಲ್ಲಿ ಹತ್ತಿಸಿಕೊಂಡರು. ಒಂದು ವಾಹನದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುವಾಗ ಉಳಿದವರು ವಾಹನಕ್ಕೆ ಅಡ್ಡಪಡಿಸಿದರು. ತಾಳ್ಮೆ ಕಳೆದುಕೊಂಡ ಪೊಲೀಸರು, ಕೈ ಮತ್ತು ಲಾಠಿಯಿಂದ ಹೊಡೆದರು. ಹೊಡೆಯುವ ಭರದಲ್ಲಿ ಡಿವೈಎಸ್ಪಿ ಮತ್ತು ಇತರೆ ಪೊಲೀಸರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ಒಂದೆಡೆ ಒಳಗೆ ಭರ್ಜರಿಯಾಗಿ ಕಾರ್ಯಕ್ರಮ ನಡೆದರೆ, ಹೊರಗೆ ವಿದ್ಯಾರ್ಥಿಗಳ ಪ್ರತಿಭಟನೆ ಕಾವು ಜೋರಾಗಿತ್ತು.

    ರಾಷ್ಟ್ರೀಯ ಶಿಕ್ಷಣ ನೀತಿಂದ ಎಲ್ಲ ವರ್ಗದವರಿಗೂ ಉತ್ತಮ ಅವಕಾಶ ಸಿಗುತ್ತವೆ. ಈ ಕುರಿತಂತೆ ಅಲ್ಪಸಂಖ್ಯಾತರ ಜತೆಗೆ ಪ್ರತ್ಯೇಕ ಸಭೆ ನಡೆಸಲಾಗಿದೆ. ಕಾಯ್ದೆಂದ ಯಾವುದೇ ಆತಂಕ, ಯಾವುದೇ ವರ್ಗಕ್ಕೂ ಧಕ್ಕೆಯಿಲ್ಲ. ಈ ನೀತಿಂದ ಎ್ಲರ ಸಬಲೀಕರಣ ಸಾಧ್ಯ. ಕೆಲವರು ಉದ್ದೇಶ ಪೂರ್ವಕವಾಗಿ ಗೊಂದಲ ಸೃಷ್ಟಿಸುುತ್ತಿದ್ದಾರೆ. ಕಳಂಕ ತರುವ ಕೆಲಸ ಪ್ರತಿಪಕ್ಷ ಮಾಡುತ್ತಿದೆ.
    | ಡಾ.ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts