More

    ನಿರ್ಗತಿಕರಿಗೆ ಸಹಾಯ ಹಸ್ತ ನೀಡಿದ ಅಂಗವಿಕಲ ಭಿಕ್ಷಕ; ‘ಮನ್ ಕಿ ಬಾತ್​​’ನಲ್ಲಿ ಶ್ಲಾಘಿಸಿದ ಪ್ರಧಾನಿ ಮೋದಿ

    ಪಠಾಣ್‌ಕೋಟ್: COVID-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡಿದವರು ಅದೆಷ್ಟೋ ಜನ. ಆದರೆ ಜೀವನೋಪಾಯಕ್ಕೆ ಭಿಕ್ಷಾಟನೆಯನ್ನೇ ಅವಲಂಬಿಸಿದ ಅಂಗವಿಕಲನೋರ್ವ ತನ್ನ ಸಂಪಾದನೆಯಲ್ಲೇ ಅಗತ್ಯವಿರುವವರಿಗೆ ಸಹಾಯ ಮಾಡುತ್ತಿರುವುದು ಸಮಾಜದ ಕಣ್ಣು ತೆರೆಸುವಂತಿದೆ.
    ಅಗತ್ಯವಿರುವವರಿಗೆ ಮಾಸ್ಕ್ ಮತ್ತು ಆಹಾರ ನೀಡುತ್ತಿರುವ ಅಂಗವಿಕಲ ಭಿಕ್ಷುಕ, ತನಗೆ ಅಗತ್ಯವಿರುವಷ್ಟು ದುಡ್ಡು ಇಟ್ಟುಕೊಂಡು ಉಳಿದೆಲ್ಲವನ್ನು ಇತರರಿಗೆ ಸಹಾಯ ಮಾಡಲು ಖರ್ಚು ಮಾಡುತ್ತಾನೆ.
    “ನಾನು ಎಷ್ಟೇ ಸಂಪಾದಿಸಿದರೂ ನನಗೆ ಅಗತ್ಯತೆಗೆ ಸ್ವಲ್ಪ ಖರ್ಚು ಮಾಡುತ್ತೇನೆ ಮತ್ತು ಉಳಿದವುಗಳನ್ನು ಇತರರಿಗೆ ಸಹಾಯ ಮಾಡಲು ಬಳಸುತ್ತೇನೆ” ಎಂದು ಹೇಳಿದ್ದಾನೆ, ನಿರುದ್ಯೋಗಿಯಾದ ಈತ ಜೀವನೋಪಾಯಕ್ಕೆ ಭಿಕ್ಷಾಟನೆಯನ್ನೇ ಅವಲಂಬಿಸಿದ್ದಾನೆ.

    ಇದನ್ನೂ ಓದಿ: ಐದು ದಶಕಗಳ ಬಳಿಕ ಕೊನೆಗೂ ಸಹೋದರಿ ಕೈ ಸೇರಿದ ಯೋಧನ ಪತ್ರ

    ಪ್ರಧಾನಿ ನರೇಂದ್ರ ಮೋದಿಯವರು ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 65 ನೇ ಆವೃತ್ತಿಯಲ್ಲಿ ಭಾನುವಾರ ಈತನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಸಂತೋಷ ವ್ಯಕ್ತಪಡಿಸಿದ ಆತ “ಅವರು ನನ್ನ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ಅಂಗವಿಕಲರಾಗಿದ್ದರೂ ಅವರು ನನ್ನನ್ನು ಹಾಗೆ ಪರಿಗಣಿಸಲಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ, ನಾನು ಮಾಡುವುದು ಪುಟ್ಟ ಕಾರ್ಯವಾದರೂ ಅದನ್ನು ನಾನು ಅದನ್ನು ಮುಂದುವರಿಸುತ್ತೇನೆ.” ಎಂದಿದ್ದಾನೆ.
    ಇದುವರೆಗೆ ಆತ 3,000 ಮಾಸ್ಕ್ ಗಳನ್ನು ಹಾಗೂ 100 ಕುಟುಂಬಗಳಿಗೆ ಆಹಾರ ಧಾನ್ಯ ಹಂಚಿದ್ದಾನೆ.
    COVID-19 ಲಾಕ್‌ಡೌನ್ ಹಿನ್ನೆಲೆಯಲ್ಲಿ, ಉದ್ಯೋಗವಿಲ್ಲದೆ, ಮನೆಯಲ್ಲಿ ಸಿಲುಕಿದವರಿಗಾಗಿ ಸಹಾಯ ಮಾಡಲು ರಾಜು ತನ್ನ ತ್ರಿಚಕ್ರ ವಾಹನದಲ್ಲಿ ಪಠಾಣ್‌ಕೋಟ್ ನಗರದ ಸುತ್ತಲೂ ಸಂಚರಿಸುತ್ತಿದ್ದಾನೆ. ಅಷ್ಟೇ ಅಲ್ಲದೆ ಆತ ಬಡ ಕುಟುಂಬಗಳ ಹಲವಾರು ಹೆಣ್ಣುಮಕ್ಕಳ ಮದುವೆಗೆ ಸಹಕರಿಸಿದ್ದಾನೆ ಮತ್ತು ಬಡ ಮಕ್ಕಳಿಗೆ ಶಿಕ್ಷಣ ಸಾಮಗ್ರಿಗಳನ್ನು ನೀಡಿ ಸಹಕರಿಸಿದ್ದಾನೆ.

    ನಿತ್ಯವೂ ನೂರಾರು ನಿರ್ಗತಿಕರಿಗೆ ಕೈ ತುತ್ತು ನೀಡುತ್ತಿದ್ದಾರೆ ಈ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts