More

    ದೇವಸ್ಥಾನದ ಅನ್ನದಾನ ಸೇವೆಗೆ ಈ ಭಿಕ್ಷುಕಿ ಕೊಟ್ಟ ದೇಣಿಗೆ ಎಷ್ಟು ಅಂತ ಗೊತ್ತಾದ್ರೆ ಅಚ್ಚರಿಯಾಗುತ್ತೆ!

    ಕೋಟ (ಉಡುಪಿ ಜಿಲ್ಲೆ): ಸಾಲಿಗ್ರಾಮ ಶ್ರೀ ಗುರುನರಸಿಂಹ ಹಾಗೂ ಆಂಜನೇಯ ದೇವಳದ ಸಮೀಪದ ಪರಿಸರದಲ್ಲಿ ಹೊಟ್ಟೆಹೊರೆಯಲು ಭಿಕ್ಷೆ ಬೇಡಿ ಸಾರ್ವಜನಿಕವಾಗಿ ‘ಅಜ್ಜಿ’ ಎಂದು ಕರೆಯಲ್ಪಡುತ್ತಿದ್ದ ಅಶ್ವತ್ಥಮ್ಮ, ಗುರುವಾರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅನ್ನದಾನ ಸೇವೆಗೆ ನೀಡಿದ ದೇಣಿಗೆಯ ಪ್ರಮಾಣ ನೋಡಿ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ.

    ‘ಸರ್ವರಿಗೂ ಒಳಿತಾಗಲಿ, ಲೋಕಕ್ಕೆ ಹಿತವಾಗಲಿ ಮತ್ತು ಹಸಿದವರ ಹೊಟ್ಟೆ ತುಂಬಲಿ, ಕರೊನಾದಿಂದ ಮುಕ್ತಿ ದೊರೆಯಲಿ’ ಎಂಬ ಪ್ರಾರ್ಥನೆಯೊಂದಿಗೆ ತಾನು ಸಂಗ್ರಹಿಸಿದ ಸಂಪತ್ತಿನ ಒಂದು ಭಾಗವನ್ನು ಗುರುನರಸಿಂಹ ದೇವರ ಪಾದಕಮಲಕ್ಕೆ ಗುರುವಾರ ಈ ಅಜ್ಜಿ ಸಮರ್ಪಿಸಿದರು. ಗಂಗೊಳ್ಳಿ ಮೂಲದ ಅಂದಾಜು 65 ವರ್ಷ ವಯಸ್ಸಿನ ಅಶ್ವತ್ಥಮ್ಮ ಪತಿ ಹಾಗೂ ಪುತ್ರಿಯನ್ನು ಕಳೆದುಕೊಂಡಿದ್ದು, ಸಾಲಿಗ್ರಾಮದಲ್ಲಿ 10 ವರ್ಷಗಳಿಂದ ವಾಸವಾಗಿದ್ದಾರೆ. ಗಂಗೊಳ್ಳಿಯಲ್ಲಿ ಮೊಮ್ಮಕ್ಕಳು ಇದ್ದು, ಯಾವಾಗಲಾದರೊಮ್ಮೆ ಹೋಗಿ ಬರುತ್ತಾರೆ. ಸಾಲಿಗ್ರಾಮ ದೇವಳದ ಕೆರೆ ಬಳಿಯ ದೋಣಿ ಇಡುವ ಕೊಠಡಿಯೇ ಇವರ ವಾಸಸ್ಥಳ. ತಮ್ಮ ಪ್ರತಿದಿನ ಆದಾಯದಲ್ಲಿಯೇ ಒಂದು ಲಕ್ಷ ರೂ.ಗಳನ್ನು ಒಟ್ಟುಗೂಡಿಸಿ ಅವರು ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ.

    ಇವರು ದೇಣಿಗೆ ನೀಡಿರುವುದು ಇದೊಂದೇ ದೇಗುಲಕ್ಕೆ ಅಲ್ಲ ಎಂಬುದು ಇನ್ನೂ ಅಚ್ಚರಿಯ ವಿಷಯ. ಭಾರತದ ಉದ್ದಗಲಕ್ಕೂ ಹಲವಾರು ಪವಿತ್ರ ಕ್ಷೇತ್ರಗಳ ಯಾತ್ರೆ ಮಾಡಿರುವ ಅಜ್ಜಿ, ವಿವಿಧ ದೇವಳಕ್ಕೆ ತಾನು ಸಂಪಾದಿಸಿದ ಹಣದ ಒಂದು ಪಾಲನ್ನು ನೀಡುತ್ತ್ತಿರುವುದು ವಿಶೇಷವಾಗಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಜೀರ್ಣೋದ್ಧಾರ ವೇಳೆಯೂ ಅಜ್ಜಿ 1.5 ಲಕ್ಷ ರೂ. ನೀಡಿದ್ದಾರೆ. ಪಂಪೆ ಹಾಗೂ ಪಂದಳ ಕ್ಷೇತ್ರಗಳಿಗೂ ತಲಾ 1 ಲಕ್ಷ ರೂ. ನೀಡಿದ್ದಾರೆ. ಅದರಲ್ಲೂ ಅಯ್ಯಪ್ಪ ಸ್ವಾಮಿಯ ಬಗ್ಗೆ ಅಪಾರ ಭಕ್ತಿ ಹೊಂದಿರುವ ಅವರು, ಈ ಬಾರಿ ಶಬರಿಮಲೆಗೆ ಪ್ರಯಾಣ ಬೆಳೆಸಲಿದ್ದಾರೆ. ಆ ಪ್ರಯುಕ್ತ ಮಾಲೆ ಧರಿಸಿದ್ದು, ಗುರುನರಸಿಂಹ ದೇವಳ ವಠಾರದಲ್ಲಿ ಫೆ. 9ರಂದು ಇರುಮುಡಿ ಕಟ್ಟುವ ಸೇವೆಯೊಂದಿಗೆ ಸಾರ್ವಜನಿಕ ಅನ್ನದಾನ ಸೇವೆ ಮಾಡುತ್ತಿದ್ದಾರೆ.

    ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ: ಚಿತ್ರಮಂದಿರಕ್ಕೆ ಹೋಗುವ ಮುನ್ನ ಇದನ್ನು ನೋಡಿ…

    ಮಕ್ಕಳಿಬ್ಬರು ನೀರುಪಾಲು! ಅಯ್ಯೋ ಮಕ್ಕಳೇ… ಎಂದು ಚೀರಾಡುತ್ತಾ ಬಂದ ಅಮ್ಮ-ಚಿಕ್ಕಮ್ಮನೂ ಬದುಕಲಿಲ್ಲ

    ಪಾಕಿಸ್ತಾನಕ್ಕೆ ಮರ್ಮಾಘಾತ! ನಡೆಯಿತು ಇನ್ನೊಂದು ಸರ್ಜಿಕಲ್​ ಸ್ಟ್ರೈಕ್​- ಉಗ್ರರ ನೆಲೆ ಮೇಲೆ ಯಶಸ್ವಿ ದಾಳಿ

    ಆಧಾರ್​ ಕಾರ್ಡ್​ನಲ್ಲಿ ಕಾಣಿಸಿಕೊಂಡ್ತು ಫಿಷ್​ ಫ್ರೈ, ಮಟನ್, ಚಿಕನ್​,​ ಪಾಪಡ್​, ಐಸ್​​ಕ್ರೀಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts