More

    ಮದ್ಯದಂಗಡಿ ಮುಚ್ಚಿದ್ದರೂ ರಸ್ತೆಬದಿ ಬಾಟಲಿ ರಾಶಿ!

    ಕುಂದಾಪುರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಾರ್ ಮತ್ತು ವೈನ್ ಶಾಪ್‌ಗಳು ಮುಚ್ಚಿದ್ದರೂ ಮದ್ದುಗುಡ್ಡೆ ಸಾಮಿಲ್ ಪರಿಸರದಲ್ಲಿ ಬೀರ್, ಬ್ರಾಂಡಿ ಬಾಟಲಿಗಳು ಧಾರಾಳವಾಗಿ ರಾಶಿಬಿದ್ದಿವೆ.

    ರಿಂಗ್ ರಸ್ತೆ, ಫೆರ‌್ರಿ ರಸ್ತೆಯ ಮೂರು ಕಡೆ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಲಾಕ್‌ಡೌನ್ ಸಂದರ್ಭ ವೈನ್ ಶಾಪ್, ಬಾರ್‌ಗಳಲ್ಲಿರುವ ಮದ್ಯದ ಸ್ಟಾಕ್‌ಲಿಸ್ಟ್ ಪಡೆಯದೆ ಸೀಲ್ ಮಾಡಿದ್ದು, ಪ್ರಸ್ತುತ ಈ ಬಾರ್‌ಗಳ ಒಳಗಿದ್ದ ಮದ್ಯದ ಬಾಟಲಿಗಳೇ ನಾಪತ್ತೆಯಾಗಿವೆ. ಬಾರ್ ಹಾಗೂ ವೈನ್ ಶಾಪ್ ಮಾಲೀಕರೇ ಒಳಗಿರುವ ಮದ್ಯದ ಬಾಟಲಿಗಳನ್ನು ದುಪ್ಪಟ್ಟು ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಬಕಾರಿ ಇಲಾಖೆ ಬಾರ್ ಹಾಗೂ ವೈನ್ ಶಾಪ್‌ಗಳ ಬಾಗಿಲು ತೆರೆಯುವ ಮುನ್ನ ಸ್ಟಾಕ್ ಚೆಕ್ ಮಾಡಿದರೆ ಎಲ್ಲವೂ ಬಯಲಾಗಲಿದೆ.

    ಸಾಮಾಜಿಕ ಅಂತರ ನಿರ್ಲಕ್ಷೃ: ಸಂಗಮ ಪರಿಸರದಲ್ಲಿ ಮೀನು, ಮೊಟ್ಟೆ, ಮಳಿ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದು, ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುಗಿಬಿದ್ದು ವ್ಯಾಪಾರ ನಡೆಸುತ್ತಿದ್ದಾರೆ.ಲಾಕ್ ಡೌನ್ ನಡುವೆಯೂ ಆಟೋ ರಿಕ್ಷಾಗಳು ಸ್ಟಾೃಂಡ್‌ನಲ್ಲಿ ನಿಂತು ಬಾಡಿಗೆಗೆ ತೆರಳಿದರೆ, ವಾಹನ ಹಾಗೂ ಜನ ದಟ್ಟಣೆ ಮಿತಿ ಮೀರಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕುಂದಾಪುರ ಶನಿವಾರ ಸಂತೆಯನ್ನು ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts