More

    ಮುಂಗಾರಿನಲ್ಲಿ ಆರೋಗ್ಯ ಜೋಪಾನ…

    ಜಗದೀಶ ಹೊಂಬಳಿ ಬೆಳಗಾವಿ

    ಕಲ್ಮಶ ಆಹಾರ, ನೀರು ಹಾಗೂ ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ನೆಗಡಿ, ಜ್ವರ, ವಾಂತಿ-ಬೇಧಿ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಒಂದು ವಾರದಿಂದ ಅಕಾಲಿಕ ಮಳೆಯಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅದರ ಜತೆಗೆ ಜಿಲ್ಲೆಯಲ್ಲಿ  ನಿಧಾನವಾಗಿ ಡೆಂೆ ಜ್ವರವೂ ಜನರನ್ನು ಬಾಧಿಸುತ್ತಿದೆ.

     ಜನವರಿಯಿಂದ ಏಪ್ರಿಲ್‌ವರೆಗೆ ಜಿಲ್ಲೆಯಲ್ಲಿ 56 ಡೆಂೆ ಪ್ರಕರಣಗಳು ದೃಢವಾಗಿವೆ. ರಾಮದುರ್ಗದಲ್ಲಿ 11, ಖಾನಾಪುರ 9, ಬೈಲಹೊಂಗಲ 7, ಬೆಳಗಾವಿ ನಗರ ಹಾಗೂ ಹುಕ್ಕೇರಿಯಲ್ಲಿ ತಲಾ 7, ಚಿಕ್ಕೋಡಿ ಹಾಗೂ ಗೋಕಾಕನಲ್ಲಿ ತಲಾ 5, ರಾಯಬಾಗ 3, ಬೆಳಗಾವಿ ಗ್ರಾಮೀಣದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ಜತೆಗೆ ಚಿಕೂನ್ ಗುನ್ಯ 121 ಪ್ರಕರಣಗಳು ಪತ್ತೆಯಾಗಿದ್ದು, ಡೆಂೆಯೊಂದಿಗೆ ಈ ರೋಗವು ಜನರನ್ನು ಬಾಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಆರೋಗ್ಯದತ್ತ ಕಾಳಜಿ ವಹಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಜಾಗೃತಿಯಲ್ಲಿ ತೊಡಗಿದೆ.

     ಜಿಲ್ಲೆಯಲ್ಲಿ 643 ಶಂಕಿತ ಡೆಂಘೆ:

     ಜಿಲ್ಲೆಯಲ್ಲಿ ಈಗಾಗಲೇ 56 ಡೆಂೆ ಪ್ರಕರಣಗಳು ದೃಢವಾಗಿದ್ದು, ಶಂಕಿತ 643 ಪ್ರಕರಣಗಳಿವೆ. ಇಂತಹ ರೋಗಿಗಳ ಮೇಲೆ ಇಲಾಖೆ ಸಿಬ್ಬಂದಿ ನಿಗಾ ವಹಿಸಿದೆ. ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿ ಜಿಲ್ಲೆಯಲ್ಲಿ ಒಟ್ಟು 12 ಲಕ್ಷ ಮನೆಗಳಿವೆ. ಪ್ರತಿ 15 ದಿನಕ್ಕೊಮ್ಮೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಡೆಂೆ ಮತ್ತು ಚಿಕೂನ್‌ಗುನ್ಯ ಪ್ರಕರಣಗಳ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ಯಾರಿಗಾದರೂ ಜ್ವರ ಬಂದ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ, ಡೆಂೆ ಜ್ವರ ಬಂದಿದೆಯೇ ಎಂಬುದನ್ನು ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸುತ್ತಿದ್ದಾರೆ. ಮನೆಗಳ ಸುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ತಿಳಿಸುತ್ತಿದ್ದಾರೆ. ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಪ್ರದೇಶದಲ್ಲಿ ಲಾರ್ವಾಗಳು ಬೆಳೆಯದಂತೆ ಕ್ಲಿನೋಪ್ಲಸ್ ರಾಸಾಯನಿಕ ಸಿಂಪಡಣೆ ಹಾಗೂ ಫಾಗಿಂಗ್ ಮಾಡಲಾಗುತ್ತಿದೆ. ಸಂಗ್ರಹಿಸಿದ ನೀರು ವಾರಕ್ಕೊಮ್ಮೆ ಖಾಲಿ ಮಾಡುವಂತೆ ತಿಳಿಸುತ್ತಿದ್ದಾರೆ. ಜಲಮೂಲ ಇರುವ ಕಡೆಗಳಲ್ಲಿ ಇಲಾಖೆ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದು, ರೋಗ ಉಲ್ಬಣಗೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

     2230 ಟೈಪಾಯ್ಡ್ ಪ್ರಕರಣ:

    ನೀರು, ಆಹಾರ, ಹವಾಮಾನ ವೈಪರೀತ್ಯದಿಂದಾಗಿ ಜನವರಿಯಿಂದ ಏಪ್ರಿಲ್‌ವರೆಗೆ 2,230 ಟೈಪಾಯ್ಡ ಬಾಧಿಸಿದೆ. 119 ಜನರು ವಾಂತಿಯಿಂದ ಬಳಲಿದ್ದಾರೆ. 1,083 ಟಿಬಿ ಪ್ರಕರಣಗಳು ದೃಢವಾಗಿವೆ. 67 ಹೆಪಟೈಟಿಸ್ ಪ್ರಕರಣಗಳಾಗಿವೆ. ಇಂತಹ ರೋಗಿಗಳು ಜಿಲ್ಲೆಯ 170 ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಕೆಲವರು ಪಡೆಯುತ್ತಿದ್ದಾರೆ. ಕಳೆದ 3-4 ದಿನಗಳಲ್ಲಿ ಅಕಾಲಿಕ ಮಳೆಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಜ್ವರ, ಬೇಧಿ, ಹೊಟ್ಟೆನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇಂತಹ ತೊಂದರೆಗಳನ್ನು ಅಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ತಪಾಸಣೆ ಮಾಡಿಸಿಕೊಂಡು ಗುಣಮುಖರಾಗಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

    ಡೆಂಘೆ ಅಥವಾ ವೈರಲ್ ಜ್ವರ ಪತ್ತೆ ಹೇಗೆ?:

     ಸಾಮಾನ್ಯ ಜ್ವರವನ್ನು ಡೆಂೆ ಜ್ವರ ಎಂದು ತಪ್ಪು ತಿಳಿದುಕೊಳ್ಳಬಾರದು. ವೈರಲ್ ಜ್ವರ ಎಂದರೆ 3ರಿಂದ 5 ದಿನಗಳ ಕಾಲ ಇರುವ ಜ್ವರ ಇದು. ಚಳಿ, ಮೈ ಕೈ ನೋವು ಸಾಮಾನ್ಯ. ಸೋಂಕಿತ ವ್ಯಕ್ತಿಯಿಂದ ತೇವಾಂಶದಿಂದ ತುಂಬಿದ ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಗೆ ಇದು ಹರಡುತ್ತದೆ. ಇನ್ನು ಡೆಂಘೆ ಎಂದರೆ ಸೊಳ್ಳೆ ಕಡಿತದಿಂದ ಬರಬಹುದಾದ ಜ್ವರ. ಈ ಸೊಳ್ಳೆಯನ್ನು ಅಛಿಛಿ ಅಛಿಜಠಿಜಿ ಎಂದು ಕರೆಯುತ್ತಾರೆ. ಕೆಲವೊಮ್ಮೆ ಈ ಸೊಳ್ಳೆಗಳಿಗೆ ಕಪ್ಪು ಹಾಗೂ ಹಳದಿ ಬಣ್ಣದ ಪಟ್ಟಿಗಳು ಸಹ ಇರಬಹುದು. ಬೆಳಗಿನ ಸಮಯದಲ್ಲಿ ಸಾಮಾನ್ಯವಾಗಿ ಈ ಸೊಳ್ಳೆ ಕಚ್ಚುತ್ತದೆ. ಆ ವೇಳೆ ಇದರಲ್ಲಿರುವ ವೈರಸ್ ನಮ್ಮ ದೇಹ ಸೇರಿಕೊಂಡು ಕೆಂಪು ರಕ್ತ ಕಣಗಳ ಮೂಲಕ ತಮ್ಮ ಸಂತತಿ ಹೆಚ್ಚು ಮಾಡಿಕೊಳ್ಳುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts