More

    ಸಾಂಕ್ರಾಮಿಕದ ನಂತರ, ನಿಮ್ಮ ಉದ್ಯಮ ಬೆಳವಣಿಗೆಗೆ ಪೆನೇಶಿಯಾ ನ್ಯಾಚುರಲ್​ ಪ್ರಾಡಕ್ಟ್ಸ್ ಎಕ್ಸ್​ಪೋ ಇಂಡಿಯಾದಲ್ಲಿ ಪಾಲ್ಗೊಳ್ಳಿ

    ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ಮಹಾಮಾರಿ ಕರೊನಾ ವೈರಸ್ ಸೃಷ್ಟಿಸಿದ ಅವಾಂತರಗಳಿಂದ ಜಾಗತಿಕ ಉದ್ಯಮ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಜಾಗತಿಕವಾಗಿ ಆರ್ಥಿಕತೆ ಕುಸಿದಿದ್ದು, ಅನೇಕ ಉದ್ಯಮಗಳು ಸಂಕಷ್ಟದಲ್ಲಿವೆ. ಇದರಿಂದ ಅನೇಕರು ಭರವಸೆಯನ್ನು ಕಳೆದುಕೊಂಡಿದ್ದಾರೆ. ಆದರೆ, ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಮತ್ತೆ ಉದ್ಯಮ ವಲಯಕ್ಕೆ ಉತ್ತೇಜನ ನೀಡಿ ಮರಳಿ ಯಶಸ್ಸಿನ ಹಾದಿಗೆ ತರುವ ಸಮಯ ಇದಾಗಿದೆ. ಇದಕ್ಕಾಗಿ ವೇದಿಕೆಯೊಂದು ಸಿದ್ಧವಾಗಿದೆ.

    ಹೌದು, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ (ಜಿಕೆವಿಕೆ) ಮೇ 6ರಿಂದ 8ರವರೆಗೆ 10ನೇ ಪೆನೇಶಿಯಾ ನ್ಯಾಚುರಲ್​ ಪ್ರಾಡಕ್ಟ್ಸ್ ಎಕ್ಸ್​ಪೋ ಇಂಡಿಯಾ ನಡೆಯಲಿದೆ. ನೈಸರ್ಗಿಕ, ಸಾವಯವ ಮತ್ತು ಆರೋಗ್ಯ ಉತ್ಪನ್ನಗಳ ಮೇಲಿನ ಭಾರತದ ಏಕೈಕ ವ್ಯಾಪಾರ ಪ್ರದರ್ಶನ ಇದಾಗಿದೆ. 20 ವರ್ಷಗಳಿಂದ ಮುಂಬೈಯಲ್ಲಿ ಆಯೋಜಿತವಾಗುತ್ತಿತ್ತು. ಈ ಬಾರಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದು, ದೇಶಾದ್ಯಂತ ನೈಸರ್ಗಿಕ ಮತ್ತು ಸಾವಯವ ವಿವಿಧ ವಲಯಗಳಲ್ಲಿ ವ್ಯವಹರಿಸುವ ಸಾವಿರಾರು ಉದ್ಯಮದ ಗೆಳೆಯರೊಂದಿಗೆ ನೆಟ್​ವರ್ಕ್​ ಮಾಡಲು ಮತ್ತು ಸಂವಹನ ನಡೆಸಲು ಇದೊಂದು ಉತ್ತಮ ವೇದಿಕೆಯಾಗಲಿದೆ. ಇದರಲ್ಲಿ ಭಾಗವಹಿಸಿ ಉದ್ಯಮ ಬೆಳವಣಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

    ಕಳೆದ ಎರಡು ವರ್ಷಗಳಲ್ಲಿ ಜಾಗತಿಕ ಉದ್ಯಮವು ಕೋವಿಡ್​ ಸಾಂಕ್ರಾಮಿಕದಿಂದಾಗಿ ಅನೇಕ ಸವಾಲುಗಳನ್ನು ಎದುರಿಸಿದೆ. ಬಹಳ ಎಚ್ಚರಿಕೆಯಿಂದ ಹಾಗೂ ನಿರ್ಣಾಯಕ ರೀತಿಯಲ್ಲಿ ಸಾಂಕ್ರಾಮಿಕದ ವಿರುದ್ಧ ಜಗತ್ತು ಹೆಜ್ಜೆ ಇಟ್ಟಿದೆ. ಇದೀಗ ಕೋವಿಡ್‌ನಿಂದ ಮುಕ್ತರಾಗಿ ನಾವೆಲ್ಲರೂ ಮುಂದಿನ ಹಂತಕ್ಕೆ ಹೋಗುತ್ತಿರುವ ಈ ಸಮಯದಲ್ಲಿ ಉದ್ಯಮದ ಸ್ಥಿರತೆ ಮತ್ತು ಆದಾಯವನ್ನು ಹೆಚ್ಚಿಸಲು ಅತ್ಯುತ್ತಮ ಅವಕಾಶವನ್ನು ಹುಡುಕುವ ಮತ್ತು ಬಳಸಿಕೊಳ್ಳುವ ಸಮಯ ಇದಾಗಿದೆ. ಹೀಗಾಗಿ ಪೆನೇಶಿಯಾ ನ್ಯಾಚುರಲ್​ ಪ್ರಾಡಕ್ಟ್ಸ್ ಎಕ್ಸ್​ಪೋ ಇಂಡಿಯಾವು ನಿಮಗಾಗಿ ಈ ಸುವರ್ಣಾವಕಾಶವನ್ನು ಒದಗಿಸಿಕೊಡಲಿದೆ. ನಿಮ್ಮ ವ್ಯವಹಾರವನ್ನು ಸ್ವಾಭಾವಿಕವಾಗಿ ಬೆಳೆಸಲು, ನಿಜವಾದ ಉದ್ಯಮ ಗೆಳೆಯರೊಂದಿಗೆ ನೆಟ್‌ವರ್ಕ್ ಮಾಡಲು ಮತ್ತು ಹೊಸ ವ್ಯವಹಾರಗಳನ್ನು ಸೃಷ್ಟಿಸಲು ಅತ್ಯುತ್ತಮ ವೇದಿಕೆಯನ್ನು ಒದಗಿಸಲಿದೆ.

    ಕಳೆದ 20 ವರ್ಷಗಳಲ್ಲಿ ದಕ್ಷಿಣ ಏಷ್ಯಾದ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಅನ್ವೇಷಿಸಲು ಮತ್ತು ಬಲಪಡಿಸಲು ಎಲ್ಲಾ ನೈಸರ್ಗಿಕ ಉತ್ಪನ್ನ ಕಂಪನಿಗಳಿಗೆ ಪೆನೇಶಿಯಾ ಏಕೈಕ ಮಹತ್ವದ ವೇದಿಕೆಯಾಗಿ ಉಳಿದಿದೆ. ಇಂದು ನಾವು ಯಶಸ್ವಿಯಾಗಿ ನೆಟ್‌ವರ್ಕ್ ಹೊಂದಿರುವ ನೈಸರ್ಗಿಕ ಮತ್ತು ಸಾವಯವ ಉತ್ಪನ್ನಗಳ ಜಾಗತಿಕ ಸಮುದಾಯವನ್ನು ಸ್ಥಾಪಿಸಿದ್ದೇವೆ. ಪೆನೇಶಿಯಾ ನ್ಯಾಚುರಲ್​ ಪ್ರಾಡಕ್ಟ್ಸ್ ಎಕ್ಸ್​ಪೋ ಆಯೋಜಿಸುವ Seishido ಕಮ್ಯುನಿಕೇಷನ್ಸ್, ದೇಶದ ವಿವಿಧ ಪ್ರದೇಶಗಳಲ್ಲಿ ವ್ಯವಹರಿಸುವ ಸಣ್ಣ ಮತ್ತು ಮಧ್ಯಮ ಕಂಪನಿಗಳು, ಎಫ್​ಪಿಒಗಳು, ರೈತ ಸಹಕಾರಿಗಳು, ಬುಡಕಟ್ಟು, ಅರಣ್ಯ ಮತ್ತು ಸಣ್ಣ ಉತ್ಪನ್ನ ತಯಾರಕರು, ಎಸ್​ಎಚ್​ಜಿ ಕಂಪನಿಗಳನ್ನು ಉತ್ತೇಜಿಸಲು ಮತ್ತು ಮಾರಾಟಕ್ಕೆ ಅನುಕೂಲಕರ ವೇದಿಕೆ ಸೃಷ್ಟಿಸಲು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ಆಮದು ಮತ್ತು ರಫ್ತು ಎರಡನ್ನೂ ಸುಗಮಗೊಳಿಸಲು ಮತ್ತು ವ್ಯಾಪಾರದ ಪ್ರಮಾಣ ಮತ್ತು ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುವುದು ಪೆನೇಶಿಯಾದ ಪ್ರಮುಖ ಉದ್ದೇಶವಾಗಿದೆ.

    ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪೆನೇಶಿಯಾ ನ್ಯಾಚುರಲ್​ ಪ್ರಾಡಕ್ಟ್ಸ್ ಎಕ್ಸ್​ಪೋ ಇಂಡಿಯಾ ಈ ಕೆಳಕಂಡ ಎಲ್ಲಾ ನೈಸರ್ಗಿಕ ಮತ್ತು ಸಾವಯವ ವಲಯಗಳಿಗೆ ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತದೆ.

    ಕೃಷಿ ಉತ್ಪನ್ನ: ಧಾನ್ಯಗಳು, ರಾಗಿ, ಏಕದಳ ಮತ್ತು ದ್ವಿದಳ ಧಾನ್ಯಗಳು, ಮಸಾಲೆಗಳು ಮತ್ತು ರುಚಿಕಾರಕಗಳು, ಬೆಲ್ಲ ಮತ್ತು ಇತರ ಸಿಹಿಕಾರಕಗಳು, ತೆಂಗಿನಕಾಯಿ ಉತ್ಪನ್ನ, ಬೀಜಗಳು ಮತ್ತು ಪ್ರಾಣಿಗಳ ನ್ಯೂಟ್ರಿಷನ್​ ಆಹಾರ, ಸಾಗರ ಉತ್ಪನ್ನಗಳು ಮತ್ತು ಜಾನುವಾರು, ಸಲಕರಣೆಗಳು ಮತ್ತು ಯಂತ್ರೋಪಕರಣಗಳು.

    ಆಹಾರ ಮತ್ತು ಪಾನೀಯಗಳು: ನೈಸರ್ಗಿಕ ಮತ್ತು ಸಾವಯವ ಆಹಾರಗಳು, ಆಹಾರ ಪದಾರ್ಥಗಳು, ಬಣ್ಣಗಳು ಮತ್ತು ರುಚಿಕಾರಕಗಳು, ಪೌಷ್ಟಿಕ ಪಾನೀಯಗಳು, ನಿರ್ಜಲೀಕರಣ ಮತ್ತು ಡ್ರೈಫ್ರೂಟ್ಸ್​, ಒಣ ಪದಾರ್ಥಗಳು, ಜೇನು ಮತ್ತು ಜೇನುಸಾಕಣೆ ಉತ್ಪನ್ನಗಳು ಮತ್ತು ಹಾಲು ಉತ್ಪನ್ನಗಳು, ಡೇರಿ ಪ್ರಾಡಕ್ಟ್ಸ್​.

    ಆರೋಗ್ಯ ಮತ್ತು ಪೋಷಣೆ: ಗಿಡಮೂಲಿಕೆಗಳ ಸಾರಗಳು, ಪೌಷ್ಟಿಕ ಆಹಾರ ಮತ್ತು ಡಯೆಟರಿ ಸಪ್ಲಿಮೆಂಟ್ಸ್, ಕಚ್ಚಾ ಗಿಡಮೂಲಿಕೆಗಳು, ಓಲಿಯೊರೆಸಿನ್ಸ್, ಫೈಟೊಕೆಮಿಕಲ್ಸ್, ಅಗತ್ಯ ಮತ್ತು ಮಸಾಲೆಯುಕ್ತ ತೈಲಗಳು, ಪ್ರಿಬಯಾಟಿಕ್‌ಗಳು ಮತ್ತು ಪ್ರೋಬಯಾಟಿಕ್‌ಗಳು, ಕ್ಲಿನಿಕಲ್ ಸಂಶೋಧನೆ ಹಾಗೂ ಎನ್ಕ್ಯಾಪ್ಸುಲೇಶನ್.

    ವೈಯಕ್ತಿಕ ಕಾಳಜಿ: ಸೌಂದರ್ಯವರ್ಧಕಗಳು, ನ್ಯೂಟ್ರಿಕೋಸ್ಮೆಟಿಕ್ಸ್, ಹರ್ಬಲ್​ ಕಾಸ್ಮೆಟಿಕ್ಸ್​, ನೈಸರ್ಗಿಕ ಸಾಬೂನುಗಳು ಮತ್ತು ಇತರ ಸ್ನಾನದ ಉತ್ಪನ್ನಗಳು, ತ್ವಚೆ ಮತ್ತು ಕೂದಲಿನ ರಕ್ಷಣೆ, ಸ್ಪಾ ಮತ್ತು ಮಸಾಜ್​ ಉತ್ಪನ್ನಗಳು, ಅರೋಮಾಥೆರಪಿ ಮತ್ತು ಸುಗಂಧ ದ್ರವ್ಯ ಹಾಗೂ ಸಂಬಂಧಿತ ಉತ್ಪನ್ನಗಳು.

    ಪರಿಸರ ಸ್ನೇಹಿ ಉತ್ಪನ್ನಗಳು: ನೈಸರ್ಗಿಕ ಬೆಳೆ ಆರೈಕೆ, ಬಿದಿರು ಉತ್ಪನ್ನಗಳು, ತಾಳೆ ಉತ್ಪನ್ನಗಳು, ಹೋಮ್‌ಕೇರ್ ಮತ್ತು ನೈರ್ಮಲ್ಯ ಉತ್ಪನ್ನಗಳು, ನೈಸರ್ಗಿಕ ಕುಡಿಯುವ ಸ್ಟ್ರಾಗಳು, ಕರಕುಶಲ ಉತ್ಪನ್ನಗಳು, ನೈಸರ್ಗಿಕ ಫೈಬರ್ ಉತ್ಪನ್ನಗಳು, ಪರಿಸರ ಸ್ನೇಹಿ ಪ್ಯಾಕೇಜಿಂಗ್ ವಸ್ತುಗಳು.

    ಯಾವುದೇ ಕಾರಣಕ್ಕೂ ಪೆನೇಶಿಯಾ 2022 ನ್ಯಾಚುರಲ್​ ಪ್ರಾಡಕ್ಟ್ಸ್ ಎಕ್ಸ್​ಪೋ ಇಂಡಿಯಾವನ್ನು ಮಿಸ್​ ಮಾಡ್ಕೋಬೇಡಿ, ಏಕೆಂದರೆ, ಎಲ್ಲ ನೈಸರ್ಗಿಕ, ಸಾವಯವ ಮತ್ತು ಆರೋಗ್ಯ ಉತ್ಪನ್ನಗಳ ಉದ್ಯಮದ ಏಕೈಕ ದೊಡ್ಡ ವ್ಯವಹಾರದ ಅವಕಾಶ ಇದಾಗಿದೆ. ನಿಮ್ಮ ಭವಿಷ್ಯವೇ ಬದಲಾಗುವ ವೇದಿಕೆ ಇದಾಗಿದೆ.

    ಮಳಿಗೆ ಬುಕಿಂಗ್​ ಮತ್ತು ಸಂದರ್ಶಕರ ನೋಂದಣಿಗಾಗಿ 9819512127 / 9869333310 / 8850528191 ಈ ನಂಬರ್​ಗೆ ಕರೆ ಮಾಡಿ ಅಥವಾ [email protected] ಮೇಲ್​ ಮಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts