More

    ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಐಪಿಎಲ್​; ರಾಜ್ಯ ಕ್ರಿಕೆಟ್​ ಮಂಡಳಿಗಳಿಗೆ ಗಂಗೂಲಿ ಪತ್ರ

    ಮುಂಬೈ: ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಿಸುವುದು ಸೇರಿ ಈ ವರ್ಷ ಇಂಡಿಯನ್​ ಪ್ರಿಮಿಯರ್​ ಲೀಗ್​ (ಐಪಿಎಲ್​) ಆಯೋಜನೆಗೆ ಲಭ್ಯವಿರುವ ಅವಕಾಶಗಳ ಬಗ್ಗೆಯೂ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಚರ್ಚೆ ನಡೆಸಿದೆ.

    ಅಕ್ಟೋಬರ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಟಿ-20 ವಿಶ್ವಕಪ್​ ಆಯೋಜನೆಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿರುವ ಮಧ್ಯೆಯೂ ಬಿಸಿಸಿಐ ಇಂಥದ್ದೊಂದು ಚಿಂತನೆ ನಡೆಸಿದೆ. ರಾಜ್ಯ ಕ್ರಿಕೆಟ್​ ಮಂಡಳಿಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಬರೆದಿರುವ ಪತ್ರದಲ್ಲಿ ಈ ಅಂಶಗಳ್ನು ಪ್ರಸ್ತಾಪಿಸಲಾಗಿದೆ.

    ಇದನ್ನೂ ಓದಿ; ನಾವಷ್ಟೇ ಅಲ್ಲ, ಅಂಡಾಣು ಕೂಡ ಹುಡುಕುತ್ತೆ ಸಂಗಾತಿ, ಗರ್ಭಾಶಯದಲ್ಲೂ ನಡೆಯುತ್ತೆ ಪರಸಂಗ…! 

    ಐಪಿಎಲ್​ ಆಯೋಜಿಸಲು ಬಿಸಿಸಿಐ ಉತ್ಸುಕವಾಗಿದೆ. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ. ಮಂಡಳಿಯ ಆದಾಯದ ದೃಷ್ಟಿಯಿಂದಲೂ ಖಾಲಿ ಕ್ರೀಡಾಂಗಣದಲ್ಲಾದರೂ ಐಪಿಎಲ್​ ಆಯೋಜಿಸಬೇಕಾದುದು ಅಗತ್ಯವಾಗಿದೆ. ಹೀಗಾಗಿ ಪಂದ್ಯಾವಳಿ ಹಮ್ಮಿಕೊಳ್ಳಲು ಎಲ್ಲ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವುದಾಗಿ ಗಂಗೂಲಿ ಹೇಳಿದ್ದಾರೆ.

    ಅಭಿಮಾನಿಗಳು, ಫ್ರಾಂಚೈಸಿಗಳು, ಆಟಗಾರರು, ಪ್ರಾಯೋಜಕರು ಹಾಗೂ ಪ್ರಸಾರಗಾರರು ಐಪಿಎಲ್​ ಆಯೋಜನೆ ಬಗ್ಗೆ ಅತ್ಯಂತ ಕುತೂಹಲದಿಂದ ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.

    ಇದನ್ನೂ ಓದಿ; ಈ 9 ರಾಷ್ಟ್ರಗಳಿಂದ ಕರೊನಾ ನಾಪತ್ತೆಯಾಗಿದೆ…!

    ಭಾರತ ಹಾಗೂ ವಿದೇಶದ ಆಟಗಾರರು ಸಹ ಐಪಿಎಲ್​ ಆಯೋಜನೆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಿಸಿಸಿಐ ಈ ಬಗ್ಗೆ ಅತ್ಯಂತ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ಗಂಗೂಲಿ ಹೇಳಿದ್ದಾರೆ. ಹೀಗಾಗಿ ಅಕ್ಟೋಬರ್​ನಲ್ಲಿ ಖಾಲಿ ಕ್ರೀಡಾಂಗಣಗಳಲ್ಲಿ ಐಪಿಎಲ್​ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗುತ್ತಿದೆ.

    80 ವರ್ಷಗಳಲ್ಲಿ ಆಗದ್ದು ಮೂರೇ ತಿಂಗಳಲ್ಲಿ ಸಾಧ್ಯವಾಯ್ತು; ಎಲ್ಲವೂ ಲಾಕ್​ಡೌನ್​ ಮಹಿಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts