More

    ರಾಜಕಾಲುವೆ ನುಂಗಿ ಮನೆ ಕಟ್ಟಿದವರಿಗೆ ಜೆಸಿಬಿ ಮೂಲಕ ಬಿಸಿ ಮುಟ್ಟಿಸುತ್ತಿರುವ ಬಿಬಿಎಂಪಿ

    ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಮ್ಮೆ ಜೆಸಿಬಿಗಳ ಘರ್ಜನೆ ಶುರುವಾಗಿದ್ದು ರಾಜಧಾನಿಯಲ್ಲಿ ರಾಜಕಾಲುವೆ ನುಂಗಿದವರಿಗೆ ಬಿಬಿಎಂಪಿಯಿಂದ ಶಾಕ್ ನೀಡಿದೆ.

    ಇವರೆಲ್ಲರೂ ಅನಧಿಕೃತವಾಗಿ ರಾಜಕಾಲುವೆಯನ್ನು ನುಂಗಿ ಮನೆ ಕಟ್ಟಿದ್ದರು. ಹೀಗಾಗಿ ಈಗ ಇವರ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಬಿಬಿಎಂಪಿ ಮಾಡುತ್ತಿದೆ. ಮಹದೇವಪುರ ವಲಯದ ಅಧಿಕಾರಿಗಳ ನೇತೃತ್ವದಲ್ಲಿ ರಾಜಕಾಲುವೆಯನ್ನು ಆಪೋಶನ ಪಡೆದಿದ್ದ ಮಾಲೀಕರ ಮೇಲೆ ಬಿಬಿಎಂಪಿ ದಾಳಿ ನಡೆಸಿದೆ. ಮಹದೇವಪುರ ವಲಯದಲ್ಲಿ ರಾಜಕಾಲುವೆ ಮೇಲೆ ಮನೆ ಕಟ್ಟಿದ್ದವರಿಗೆ ಈ ಮೂಲಕ ಬಿಬಿಎಂಪಿ ಬಿಸಿ ಮುಟ್ಟಿಸಿದೆ.

    ಜೆಸಿಬಿಗಳ ಮೂಲಕ ತಡೆಗೋಡೆ ಹಾಗು ಮನೆಗಳನ್ನು ತೆರವು ಮಾಡಲಾಗುತ್ತಿದ್ದು ಚಿನ್ನಪ್ಪನಹಳ್ಳಿ ಹಾಗೂ ಸಾದರಮಂಗಳ ಸೇರಿದಂತೆ ಒಟ್ಟು 4 ಒತ್ತುವರಿಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ದೊಡ್ಡಾನೆಕುಂದಿ ವಾರ್ಡ್‌ನ ಚಿನ್ನಪ್ಪನಹಳ್ಳಿ ವ್ಯಾಪ್ತಿಯಲ್ಲಿ ರಾಜಕಾಲುವೆಯ ಮೇಲೆ ನಿರ್ಮಿಸಿದ್ದ 3 ಕಟ್ಟಡಗಳನ್ನು ಈಗ ಪಾಲಿಕೆ ನೆಲ ಸಮಗೊಳಿಸುತ್ತಿದೆ.

    ಕಳೆದ ಮೂರು ದಿನಗಳಿಂದ ಕಟ್ಟಡಗಳನ್ನ ತೆರವು ಮಾಡುವ ಕಾರ್ಯ ಪ್ರಗತಿಯಲ್ಲಿದ್ದು ಹೂಡಿ ವಾರ್ಡ್ ಸಾದರ ಮಂಗಳ ವ್ಯಾಪ್ತಿಯಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಲಾಗಿತ್ತು. ಒತ್ತುವರಿ ಮಾಡಿದ್ದ ಸುಮಾರು 8 ಮೀಟರ್ ಉದ್ದದ ಕಾಂಪೌಂಡ್ ಗೋಡೆಯನ್ನು ಇದೀಗ ಪಾಲಿಕೆ ತೆರವು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts