More

    ಕೇಂದ್ರದ ಬಜೆಟ್​ನಲ್ಲಿ ರಾಜ್ಯದ ಭದ್ರಾ ಯೋಜನೆಗೆ 5300 ಕೋಟಿ ರೂ. ಮೀಸಲು: ಸಚಿವ ಗೋವಿಂದ ಕಾರಜೋಳ

    ಬಾಗಲಕೋಟೆ: ಕೇಂದ್ರ ಬಜೆಟ್​ ಪ್ರತೀ ಬಾರಿಯಂತೆ ಈ ಬಾರಿಯೂ ಜನರನ್ನು ಕುತೂಹಲದಿಂದ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಈ ಬಾರಿ ರಾಜ್ಯಕ್ಕೆ ಏನೇನು ಸಿಗಲಿದೆ ಎನ್ನುವ ವಿಚಾರ ಕುತೂಹಲಕಾರಿ ವಿಚಾರಗಳಲ್ಲಿ ಒಂದು. ಈ ಬಗ್ಗೆ ಕರ್ನಾಟಕದ ಸಚಿವರು ಮಾಹಿತಿ ನೀಡಲು ಆರಂಭಿಸಿದ್ದು ಈ ಬಾರಿ ಭದ್ರಾ ಯೋಜನೆಗೆ 5300 ಕೋಟಿ ರೂ. ಮೀಸಲು ಇರಿಸಲಾಗಿದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.

    ಕೇಂದ್ರ ಬಜೆಟ್​ನಲ್ಲಿ ರಾಜ್ಯದ ಭದ್ರಾ ಯೋಜನೆಗೆ 5300 ಕೋಟಿ ರೂ.ಯನ್ನು ನೀಡಲಾಗಿದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದು ‘ಈ ಅನುದಾನ ಬರಪೀಡಿತ ಜಿಲ್ಲೆಗಳ ಕೃಷಿಕರಿಗೆ, ಕುಡಿಯುವ ನೀರಿನ‌ ಪರದಾಡುವ ಜಿಲ್ಲೆಗಳಿಗೆ ಸಹಕಾರಿ ಆಗಲಿದೆ.

    ಸಕಾಲದಲ್ಲಿ ಯೋಜನೆ ಪೂರ್ಣಗೊಳಿಸಲು ಕೇಂದ್ರದಿಂದ ಸಿಕ್ಕ ದೊಡ್ಡ ಆರ್ಥಿಕ‌ ಇದು. ಬಹುಶಃ ದೇಶದಲ್ಲಿ ಒಂದು ರಾಜ್ಯಕ್ಕೆ ರಾಷ್ಟ್ರೀಯ ಯೋಜನೆ ಅಡಿಯಲ್ಲಿ ಇಷ್ಟೊಂದು ದೊಡ್ಡಮಟ್ಟದ ಮೊತ್ತವನ್ನು ಕೇಂದ್ರ ಕೊಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಟರ್ ರಿಸೋರ್ಸ್ ಮಂತ್ರಿ ಗಜೇಂದ್ರ ಶೇಖಾವತ್ ಅವರಿಗೂ ರಾಜ್ಯದ ಜನತೆ ಪರವಾಗಿ ವಿಶೇಷ ಕೃತಜ್ಞತೆ ಸಲ್ಲಿಸುವೆ’ ಎಂದು ಈ ಭದ್ರಾ ಯೋಜನೆಗೆ ನೀಡಲಾದ ಮೊತ್ತದ ಬಗ್ಗೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts