More

    ಶುದ್ಧ ಇಂಧನಕ್ಕೆ ಪೂರ್ಣ ಪ್ರಮಾಣದಲ್ಲಿ ಶಿಫ್ಟ್​ ಆಗಲು 35 ಸಾವಿರ ಕೋಟಿ ಮೀಸಲಿಟ್ಟ ವಿತ್ತ ಸಚಿವೆ…

    ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಾಲಿನ್ಯ ಉಂಟು ಮಾಡುವ ಇಂಧನದಿಂದ ಶುದ್ಧ ಇಂಧನದ ಕಡೆಗೆ ಪರಿವರ್ತನೆ ಹೊಂದಲು ಮತ್ತು ಶೂನ್ಯ ಮಾಲಿನ್ಯವನ್ನು ಸಾಧಿಸಲು ₹ 35,000 ಕೋಟಿ ರೂ. ಗಳನ್ನು ಒದಗಿಸಿದ್ದಾರೆ. ಶುದ್ಧ ಇಂಧನ, ಸರ್ಕಾರದ ಏಳು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.

    ಈ ಬಗ್ಗೆ ಸದನದಲ್ಲಿ ಮಾತನಾಡಿದ ವಿತ್ತ ಸಚಿವೆ “ಪ್ರಧಾನ ಮಂತ್ರಿಗಳು ಪರಿಸರಕ್ಕಾಗಿ ಜೀವನಶೈಲಿ ಎನ್ನುವ ದೃಷ್ಟಿ ಹೊಂದಿದ್ದಾರೆ. ಪರಿಸರ ಪ್ರಜ್ಞೆಯನ್ನು ಹೊಂದಿರುವ ಜೀವನಶೈಲಿಯನ್ನು ಸೃಷ್ಟಿಸಲು ಭಾರತ 2070 ರ ವೇಳೆಗೆ ನಿವ್ವಳವಾಗಿ ಶೂನ್ಯ ಇಂಗಾಲದ ಹೊರಸೂಸುವಿಕೆ, ಹಸಿರು ಕೈಗಾರಿಕಾ ಮತ್ತು ಆರ್ಥಿಕ ಮಾರ್ಪಾಡಿಗೆ ನಾಂದಿ ಹಾಡಿದ್ದಾರೆ. ಈ ಬಜೆಟ್​ನಲ್ಲಿ ನಮ್ಮ ಗಮನ ಹಸಿರು ಬೆಳವಣಿಗೆಯ ಮೇಲಿದೆ’ ಎಂದು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.

    ‘ಶುದ್ಧ ಇಂಧನದ ಕಡೆಗೆ ಪರಿವರ್ತನೆ ಆಗಲು, ಈ ಬಜೆಟ್ ಇಂಧನ ಪರಿವರ್ತನೆ ಮತ್ತು ನಿವ್ವಳ ಶೂನ್ಯ ಇಂಗಾಲದ ಎಮಿಷನ್​ ಉದ್ದೇಶಗಳ ಕಡೆಗೆ ಆದ್ಯತೆಯನ್ನು ನೀಡಿದ್ದು ಇದಕ್ಕಾಗಿ ಬಂಡವಾಳ ಹೂಡಿಕೆಗಾಗಿ ₹ 35,000 ಕೋಟಿಗಳನ್ನು ಒದಗಿಸುತ್ತದೆ. ಜೊತೆಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಿಂದ ಇಂಧನ ಭದ್ರತೆಯನ್ನು ಒದಗಿಸುತ್ತದೆ ಎಂದು ಅವರು ಸದನಕ್ಕೆ ತಿಳಿಸಿದರು .

    2021 ರ ನವೆಂಬರ್‌ನಲ್ಲಿ, ಯುನೈಟೆಡ್ ಕಿಂಗ್‌ಡಂನ ಗ್ಲಾಸ್ಗೋದಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ COP26 ನಲ್ಲಿ ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ 2070 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಎಮಿಷನ್​ಅನ್ನು ಸಾಧಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾನ ಮಾಡಿದ್ದರು.

    ಗ್ಲಾಸ್ಗೋ ಶೃಂಗಸಭೆಯಲ್ಲಿ ಭಾರತದ ರಾಷ್ಟ್ರೀಯ ಹೇಳಿಕೆಯನ್ನು ಮಂಡಿಸಿದ್ದ ಪ್ರಧಾನಿ ಮೋದಿ, ಹವಾಮಾನ ಬದಲಾವಣೆಯನ್ನು ಎದುರಿಸಲು ಭಾರತದ ಐದು ಬದ್ಧತೆಗಳನ್ನು ಪಟ್ಟಿ ಮಾಡಿದ್ದರು. ಅವರು 2030 ರ ವೇಳೆಗೆ 450 ಗಿಗಾ ವ್ಯಾಟ್ ಪೆಟ್ರೋಲಿಯಂ ರಹಿತ ಶಕ್ತಿ ಸಾಮರ್ಥ್ಯವನ್ನು 500 ಗಿಗಾ ವ್ಯಾಟ್‌ಗೆ ಸಾಧಿಸುವ ರಾಷ್ಟ್ರ ಭಾರತವಾಗಲಿದೆ ಎಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts