More

    ರಕ್ತ ಬಂದ್ರೂ ಡೋಂಟ್ ಕೇರ್‌, ಸ್ನೇಹಿತರಾಗಿದ್ದ ಸಂಗೀತಾ, ತನಿಷಾ, ಕಾರ್ತಿಕ್‌ ನಡುವೆ ಗೆಲ್ಲೋ ಗುರಿ ಮಾತ್ರ..!

    ಬಿಗ್​​ ಬಾಸ್​​ ಮನೆಯಲ್ಲಿ ಇತ್ತೀಚೆಗೆ ಜಗಳ, ಗಲಾಟೆಗಳು ಹೆಚ್ಚಾಗಿದೆ. ಹಿತರಾಗಿದ್ದ ಸಂಗೀತಾ, ತನಿಷಾ, ಕಾರ್ತಿಕ್‌ ಈಗ ಬೇರೆ ಬೇರೆ ಆಗಿದ್ದಾರೆ.
    ಇನ್ನು ಕೀ ಪಡೆದು ನಾಮಿನೇಷನ್‌ ಮಾಡುವ ಟಾಸ್ಕ್‌ನಲ್ಲಿ ಸಂಗೀತಾ ತನಿಷಾ ಇಬ್ಬರ ಕೈಯಲ್ಲೂ ರಕ್ತ ಬಂದಿದೆ. ಸದ್ಯ ಇವರಿಬ್ಬರೂ ಹೀಗೆ ವರ್ತಿಸಿರೋದು ಎಷ್ಟು ಸರಿ ಎಂದು ಜನರು ಪ್ರಶ್ನಿಸೋಕೆ ಪ್ರಾರಂಭಿಸಿದ್ದಾರೆ.

    ಸದ್ಯ ಆರು ವಾರಗಳನ್ನು ಕಳೆದು ಏಳನೇ ವಾರದಲ್ಲಿರುವ ಬಿಗ್‌ಬಾಸ್‌ ಮನೆಯಲ್ಲಿ ‘ಕಾಂಪಿಟೇಷನ್‌ ಹೀಟ್‌’ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಪರ್ಧಿಗಳ ತಲೆಬೋಳಿಸಿಕೊಳ್ಳುವವರೆಗೂ ಮುಟ್ಟಿದೆ. ಈ ಟಾಸ್ಕ್‌ ನೀಡಿದ ಸಂಗೀತಾ ಮೇಲೆ ಸದ್ಯ ತನಿಷಾ ಮುನಿಸಿಕೊಂಡಿದ್ದಾರೆ.


    ಸಂಗೀತಾ ಮತ್ತು ಕಾರ್ತಿಕ್​​ ಒಬ್ಬರಿಗೊಬ್ಬರು ನಾಮಿನೇಷನ್​ ಅಧಿಕಾರವನ್ನ ಕೊಟ್ಟುಕೊಂಡಿದ್ದು, . ಕಾರ್ತಿಕ್ ಜೊತೆಗೆ ಇಷ್ಟು ಸ್ನೇಹದಿಂದ ಇದ್ದ ಸಂಗೀತಾ ಅವರೇ ಕಾರ್ತಿಕ್‌ಗೆ ತಲೆಬೋಳಿಸಿಕೊಳ್ಳುವ ಸವಾಲ್ ಹಾಕಿದ್ದಾರೆ. ಕಾರ್ತಿಕ್ ಇದನ್ನು ಸ್ವೀಕರಿಸಿದ್ದಾರೆ ಕೂಡ.


    ಸದ್ಯ ಟಾಸ್ಕಾಗಿ ನಾನು ಎನ್ನನ್ನಾದರೂ ಮಾಡೋಕೆ ಸಿದ್ಧ ಅಂತ್ಹೇಳಿ ಕಾರ್ತಿಕ್​ ಕೂಡಾ ತಲೆ ಬೋಳಿಸಿಕೊಂಡು ಕುಳಿತಿದ್ದಾರೆ. ಇನ್ನು ಈ ಎಲ್ಲಾ ವಿಚಾರವನ್ನು ಬ್ರಹ್ಮಾಂಡ ಗುರೂಜಿ ಸಹ ನೋಡಿಕೊಂಡು ಕುಳಿತಿರುವ ಪ್ರೋಮೋ ಸದ್ಯ ವೈರಲ್​ ಆಗಿದೆ.


    ಸ್ಪರ್ಧಿಗಳ ನಡುವೆ ಗೆಲ್ಲುವ ಹಟ ಮತ್ತೊಂದು ಹಂತಕ್ಕೆ ತಲುಪಿದ್ದು, ಸದ್ಯ ಮುಂದಿನ ದಿನಗಳಲ್ಲಿ ಕಾಂಪಿಟೇಷನ್​ ಮತ್ತಷ್ಟು ಟಫ್​​ ಆಗುವಂತಹ ಎಲ್ಲಾ ನಿರೀಕ್ಷೆಗಳೂ ಇದೆ.

    ಬೆಸ್ಟ್​ ಫ್ರೆಂಡ್ಸ್​​ ಆಗಿದ್ದ ಮೂವರು ಇದೀಗ ವೈರಿಗಳಂತೆ ವರ್ತಿಸುತ್ತಿರೋದು ಎಷ್ಟು ಸರಿ ಎಂದು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts