More

    ಕೌಟುಂಬಿಕ ಪ್ರಕರಣದಲ್ಲಿ ಮಹಿಳೆಗೆ 15 ಸಾವಿರ ದಂಡ ವಿಧಿಸಿದ ಹೈಕೋರ್ಟ್ : ಆಧಾರ ರಹಿತ ಆರೋಪವೂ ಅಪರಾಧ

    ಜಗನ್ ರಮೇಶ್

    ಬೆಂಗಳೂರು: ಕೌಟುಂಬಿಕ ಪ್ರಕರಣಗಳಲ್ಲಿ ಮಾಡಲಾಗುವ ಆಧಾರರಹಿತ ಆರೋಪಗಳೂ ಕ್ರಿಮಿನಲ್ ಮಾನಹಾನಿ ಎನಿಸಿಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಪ್ರಕರಣವೊಂದರಲ್ಲಿ ಪತಿಯ ಘನತೆಗೆ ಧಕ್ಕೆ ತಂದಿದ್ದ ಮಹಿಳೆಯೊಬ್ಬರಿಗೆ 15 ಸಾವಿರ ರೂ. ದಂಡ ವಿಧಿಸಿದೆ.

    ಪತ್ನಿಯೊಂದಿಗಿನ ವೈವಾಹಿಕ ಸಂಬಂಧ ಮರುಸ್ಥಾಪಿಸುವಂತೆ ಕೋರಿ ವ್ಯಕ್ತಿಯೊಬ್ಬರು 2001ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪತ್ನಿ, ಗಂಡ ಪ್ರತಿದಿನ ಕುಡಿದು ಬಂದು ನನ್ನ ಮೇಲೆ ಹಲ್ಲೆ ಮಾಡುತ್ತಾನೆ. ಸ್ನೇಹಿತರ ಮುಂದೆ ಬೆತ್ತಲೆಯಾಗಿ ನೃತ್ಯ ಮಾಡುವಂತೆ ಒತ್ತಾಯಿಸುತ್ತಾನೆ. ಅವರೊಂದಿಗೆ ಮಲಗುವಂತೆ ಬಲವಂತ ಮಾಡಿ, ಪಿಂಪ್ ರೀತಿ ವರ್ತಿಸುತ್ತಾನೆ. ಆತನಿಗೆ ಅನೈತಿಕ ಸಂಬಂಧವಿದೆ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ, ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಒದಗಿಸದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ 2005ರ ಏ.11ರಂದು ಪತಿಯ ಪರವಾಗಿ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಪತ್ನಿ ಮೇಲ್ಮನವಿ ಸಲ್ಲಿಸಿದ್ದರು.

    ಇದನ್ನೂ ಓದಿ: ನವರಾತ್ರಿ ಉತ್ಸವ: ದುರ್ಗಾ ಪೆಂಡಾಲ್​ಗೆ ನಿಯಮ ಸಡಿಲಿಸಿದ ಕೋರ್ಟ್​

    ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ : ಈ ಮಧ್ಯೆ, ಕೌಟುಂಬಿಕ ಕೋರ್ಟ್​ಗೆ ಸಲ್ಲಿಸಿದ್ದ ಆಕ್ಷೇಪಣೆ ಪ್ರತಿಯನ್ನು ಪತ್ನಿ ಕುಟುಂಬ ಸದಸ್ಯರಿಗೆ ಹಂಚಿದ್ದಾಳೆ. ಆಧಾರರಹಿತ ಆರೋಪಗಳಿಂದ ತನ್ನ ಮರ್ಯಾದೆಗೆ ಧಕ್ಕೆಯಾಗಿದ್ದು, ಸಮಾಜದಲ್ಲಿ ತಲೆ ಎತ್ತಿ ತಿರುಗದಂತಾಗಿದೆ ಎಂದು ಆರೋಪಿಸಿ ಪತ್ನಿ ವಿರುದ್ಧ ಪತಿ 2006ರಲ್ಲಿ 6ನೇ ಎಸಿಎಂಎಂ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪತ್ನಿಯ ನಡೆ ಕ್ರಿಮಿನಲ್ ಮಾನಹಾನಿ ಎನಿಸಿಕೊಳ್ಳುತ್ತದೆ ಎಂದು ಅಭಿಪ್ರಾಯ ಪಟ್ಟು ಮಹಿಳೆಗೆ 1 ತಿಂಗಳು ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ 2010ರ ಅ.25ರಂದು ಆದೇಶಿಸಿತ್ತು.

    ಇದನ್ನೂ ಓದಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪೂರ್ವಜರ ಆಸ್ತಿ ನವೆಂಬರ್ 10ಕ್ಕೆ ಹರಾಜು

    ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ: ಶಿಕ್ಷೆ ರದ್ದುಕೋರಿ ಮಹಿಳೆ ಹೈಕೋರ್ಟ್​ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ ಪತಿ ಸಹ ಪತ್ನಿಗೆ ವಿಧಿಸಿರುವ ಶಿಕ್ಷೆ ಪ್ರಮಾಣ ಹೆಚ್ಚಿಸುವಂತೆ ಕೋರಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳನ್ನು ಹೈಕೋರ್ಟ್ ಒಟ್ಟಾಗಿ ವಿಚಾರಣೆ ನಡೆಸಿತ್ತು. ಈ ವೇಳೆ ಪತಿ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಹೊರಗೆಲ್ಲೂ ಪ್ರಕಟಿಸಲಾಗಿಲ್ಲ ಎಂದು ಮಹಿಳೆಯ ವಾದವಾಗಿದ್ದರೂ, ಪಾಟೀ ಸವಾಲಿನ ವೇಳೆ ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಆಕ್ಷೇಪಣೆಯಲ್ಲಿನ ಅಂಶಗಳನ್ನು ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಗೆ ತಿಳಿಸಿರುವುದಾಗಿ ಮಹಿಳೆಯೇ ಒಪ್ಪಿಕೊಂಡಿದ್ದಾರೆ. ಇದು ಅವರ ವಿರುದ್ಧದ ಆರೋಪವನ್ನು ಸಾಬೀತುಪಡಿಸುತ್ತದೆ. ಆದ್ದರಿಂದ, ಆಕೆಯ ನಡೆ ಕ್ರಿಮಿನಲ್ ಮಾನಹಾನಿ ಎನಿಸಿಕೊಳ್ಳಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ 1 ತಿಂಗಳು ಜೈಲು ಶಿಕ್ಷೆ ರದ್ದುಪಡಿಸಿದೆಯಾದರೂ, ದಂಡದ ಮೊತ್ತವನ್ನು 5 ಸಾವಿರ ರೂ. ಗಳಿಂದ 15 ಸಾವಿರ ರೂ. ಗೆ ಹೆಚ್ಚಳ ಮಾಡಿ ಆದೇಶಿಸಿದೆ.

    ಆಂಧ್ರಪ್ರದೇಶದಲ್ಲಿ ನವೆಂಬರ್ 2 ರಿಂದಲೇ ಶಾಲೆ ಶುರು ಮಾಡ್ತಾರಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts