More

    ತಂತ್ರಜ್ಞಾನ ಅಳವಡಿಕೆ ಅವಶ್ಯ

    ಧಾರವಾಡ: ಬದಲಾದ ಪರಿಸ್ಥಿತಿಯಲ್ಲಿ ವಕೀಲರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ನ್ಯಾಯಾಂಗದೊಂದಿಗೆ ಸಹಕರಿಸಬೇಕು ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಸಲಹೆ ನೀಡಿದರು.
    ನಗರದ ಹೈಕೋರ್ಟ್ ಪೀಠದಲ್ಲಿ ವಕೀಲರ ಸಂಘದಿಂದ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
    ಇ- ಫೈಲಿಂಗ್, ದೃಶ್ಯ ಸಂವಾದ ಮುಂತಾದವು ಮುಂಬರುವ ದಿನಗಳಲ್ಲಿ ಮುನ್ನೆಲೆಗೆ ಬರಲಿವೆ. ಕಾಲಕ್ಕೆ ತಕ್ಕಂತೆ ಇವೆಲ್ಲ ಅನಿವಾರ್ಯ. ಉತ್ತರ ಪ್ರದೇಶದಿಂದ ಬಂದ ನನಗೆ ಕನ್ನಡ ನಾಡಿನ ವಾತಾವರಣ ಹಿಡಿಸಿದೆ. ಕರ್ನಾಟಕ ಹೈಕೋರ್ಟ್ ದೇಶದ ಅತ್ಯುತ್ತಮ ಹೈಕೋರ್ಟ್​ಗಳಲ್ಲಿ ಒಂದಾಗಿದೆ. ಇಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತಿರುವುದು ಅಪಾರ ಸಂತೋಷ ಉಂಟು ಮಾಡಿದೆ ಎಂದರು.
    ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಡಾ. ಎಚ್.ಬಿ. ಪ್ರಭಾಕರ ಶಾಸ್ತ್ರಿ, ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ, ಬಿ.ಎಂ. ಶ್ಯಾಮಪ್ರಸಾದ್, ಮೊಹಮ್ಮದ ನವಾಜ್, ಸಚಿನ್ ಮುಗದುಮ್ ನಟರಾಜ್ ರಂಗಸ್ವಾಮಿ, ಎಂ. ನಾಗಪ್ರಸನ್ನ, ವಿಶ್ವಜಿತ್ ಶೆಟ್ಟಿ, ಅನಂತ ಹೆಗಡೆ, ಎಸ್. ರಾಚಯ್ಯ, ವಕೀಲರ ಸಂಘದ ಅಧ್ಯಕ್ಷ ಸುರೇಶ ಹುಡೇದಗಡ್ಡಿ, ಉಪಾಧ್ಯಕ್ಷ ಹರೀಶ ಮೈಗೂರ, ಸಂಘದ ಪದಾಧಿಕಾರಿಗಳಾದ ರಾಜಶೇಖರ ಹಳ್ಳಿ, ಎ.ಎಂ. ಮಾಲಿಪಾಟೀಲ, ಶಿವಾನಂದ ಮಾಳಶೆಟ್ಟಿ, ವೀರೇಶ ಗಡಾದ, ಲಕ್ಷ್ಮಣ ಕುರಹಟ್ಟಿ, ಇತರರಿದ್ದರು.
    ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಾಧಿಕ ಗೂಢವಾಲಾ ಸ್ವಾಗತಿಸಿದರು. ಮಹಿಳಾ ಪ್ರತಿನಿಧಿ ನಿರ್ಮಲಾ ಬಾನಿ ಪರಿಚಯಿಸಿದರು. ಆಡಳಿತ ಮಂಡಳಿ ಸದಸ್ಯೆ ದೀಪಿಕಾ ಹೊಳೆಯಣ್ಣವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts