More

    ಪರಿವರ್ತನೆಯ ಬೆಳಕು ಮೂಡಿಸಿದ ಧೀಮಂತ: ಸಿಎಂ ಬಿ.ಎಸ್​.ಯಡಿಯೂರಪ್ಪ

    ಹನ್ನೆರಡನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಚಳವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ತಮ್ಮ ವಚನಗಳ ಮೂಲಕ ಕಾಯಕ, ಸಮಾನತೆಯ ಮಹತ್ವವನ್ನು ಸಾರಿದವರು. ಅವರ ಜೀವನ-ಬೋಧನೆಗಳು ಹೇಗೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂಬುದನ್ನು ನಾಡಿನ ಅನೇಕ ಮಠಾಧೀಶರು, ಗಣ್ಯರು ‘ಬಸವ ಜಯಂತಿ’ಯ ಈ ಶುಭ ಸಂದರ್ಭದಲ್ಲಿ ವಿವರಿಸಿದ್ದಾರೆ.

    ಪರಿವರ್ತನೆಯ ಬೆಳಕು ಮೂಡಿಸಿದ ಧೀಮಂತ

    ಹನ್ನೆರಡನೆಯ ಶತಮಾನ ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಹಾಗೂ ಸಾಹಿತ್ಯಕ ಪರಂಪರೆಯಲ್ಲಿ ಕ್ರಾಂತಿಕಾರಕ ಪರಿವರ್ತನೆಗೆ ನಾಂದಿ ಹಾಡಿದ ಮಹತ್ವದ ಕಾಲಘಟ್ಟ. ಬಿಜ್ಜಳನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿದ್ದ ಬಸವಣ್ಣನವರು, ಕೇವಲ ಬಿಜ್ಜಳನ ಮಂತ್ರಿಯಾಗಿ ಮಾತ್ರ ಕೆಲಸ ನಿರ್ವಹಿಸಲಿಲ್ಲ. ವರ್ಣಾಶ್ರಮ ಧರ್ಮದಿಂದ ನಲುಗಿಹೋಗಿದ್ದ ಸಮಾಜದಲ್ಲಿ ಪರಿವರ್ತನೆಯ ಬೆಳಕು ಮೂಡಲು ಕಾರಣೀಭೂತರಾದರು. ಮೂಢನಂಬಿಕೆ, ಅಂಧಶ್ರದ್ಧೆ-ಅಜ್ಞಾನವನ್ನು ತೊಡೆದು ಹಾಕಲು ಶ್ರಮಿಸಿದ್ದರು. ಕಾಯಕವೇ ಪೂಜೆ. ಇದರಲ್ಲಿ ಮೇಲು-ಕೀಳು ಎನ್ನುವುದಿಲ್ಲ. ಸಂಪಾದನೆಯ ಒಂದು ಭಾಗವನ್ನು ಸಮಾಜಕ್ಕೆ ಹಂಚುವುದೇ ದಾಸೋಹ ಎನ್ನುವ ಅದ್ಭುತ ಚಿಂತನೆಯನ್ನು ಸಮಾಜಕ್ಕೆ ನೀಡಿದವರು ಬಸವಣ್ಣ. ಕರೊನಾ ಮಹಾಮಾರಿ ಸೃಷ್ಟಿಸಿರುವ ಆತಂಕದ ನಡುವೆಯೇ ಬಸವ ಜಯಂತಿ ಪುಣ್ಯದಿನ, ನಮ್ಮೆಲ್ಲರ ತಪ್ಪು-ಒಪ್ಪುಗಳ ಬಗ್ಗೆ ಅರಿವು ಮೂಡಿಸುವ ಎಚ್ಚರಿಕೆಯ ಗಂಟೆಯಾಗಲಿ. ಬಸವಣ್ಣನವರ ಜೀವನ ಸಿದ್ಧಾಂತ ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶಿ ಆಗಲಿ. ಬಸವ ಜಯಂತಿ ಕರ್ನಾಟಕವು ಸೇರಿದಂತೆ ಜಗತ್ತಿನ ಎಲ್ಲರ ಬದುಕಿನಲ್ಲಿ ವೈಚಾರಿಕ ಚಿಂತನೆಗೆ ಪ್ರೇರಣೆ ಅಗಲಿ.

    | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

    ಬಸವಣ್ಣನವರ ಧೀಶಕ್ತಿ ನಮ್ಮೆಲ್ಲರದಾಗಲಿ: ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts