More

    ಸಮ ಸಮಾಜದ ನಿರ್ಮಾಣದಲ್ಲಿ ಬಸವಣ್ಣನವರ ಪಾತ್ರ ಅನನ್ಯ

    ಎನ್.ಆರ್.ಪುರ: 12ನೇ ಶತಮಾನದಲ್ಲಿದ್ದ ಜಾತೀಯತೆ, ಮೇಲು, ಕೀಳು, ಮೂಢನಂಬಿಕೆ, ಕಂದಾಚಾರಗಳನ್ನು ನಿರ್ಮೂಲನೆ ಮಾಡಿ ಸಮ ಸಮಾಜ ನಿರ್ಮಾಣದಲ್ಲಿ ವಿಶ್ವಗುರು ಬಸವಣ್ಣನವರ ಪಾತ್ರ ಅನನ್ಯಎಂದು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಹೇಳಿದರು.
    ಪಪಂ ಸಭಾಂಗಣದಲ್ಲಿ ಬಸವಣ್ಣರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿ, 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ತಳ ಸಮುದಾಯವರಿಗೆ ಅವಕಾಶ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ವಚನಗಳ ಮೂಲಕ ಸಮಾಜದ ಅಂಕು,ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು. ಬಸವಣ್ಣನವರ ತತ್ವ, ಆದರ್ಶ ಇಂದಿಗೂ ಮಾದರಿ ಎಂದರು.
    ತಹಸೀಲ್ದಾರ್ ತನುಜಾ.ಟಿ.ಸವದತ್ತಿ ಮಾತನಾಡಿ, ಪ್ರಸ್ತುತ ಭಾರತದ ಸಂವಿಧಾನದಲ್ಲಿರುವ ಬಹುತೇಕ ಆಶಯಗಳನ್ನು ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಸಾರಿದ್ದರು. ಮನುಷ್ಯ ಜಾತಿ ಒಂದೇ ಎಂದು ಸಾರಿದರು. ಕಾಯಕವೇ ಕೈಲಾಸ ಎಂದು ಕಾಯಕಕ್ಕೆ ಆದ್ಯತೆ ನೀಡಿದ್ದರು. ವಚನಗಳ ಮೂಲಕ ಸಮಾಜ ಜಾಗೃತಿಗೊಳಿಸಿದ ಶರಣ ಶ್ರೇಷ್ಠ ಆದರ್ಶ ಗುರು ಬಸವೇಶ್ವರರು ಎಂದರು.
    ಪಪಂ ಸದಸ್ಯೆ ಜುಬೇದಾ ಮಾತನಾಡಿ, ಬಸವಣ್ಣನವರು ಮಹಾನ್ ಮಾನವತಾವಾದಿಯಾಗಿದ್ದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
    ಪಪಂ ಸದಸ್ಯರಾದ ಸುರಯ್ಯಬಾನು, ಶೋಭಾ, ಕುಮಾರ ಸ್ವಾಮಿ, ಸೈಯದ್ ವಸೀಂ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಛಲವಾದಿ ಸಮಾಜದ ಅಧ್ಯಕ್ಷ ಡಿ.ರಾಮು, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಬಾಳೆಹೊನ್ನೂರು ನಾಗರಾಜ್, ಪಪಂ ಸಿಬ್ಬಂದಿ ಲಕ್ಷ್ಮಣಗೌಡ, ಉಷಾ, ವಿಜಯಕುಮಾರ್, ಮಮತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts