More

    ಬಸವಣ್ಣನವರ ಧೀಶಕ್ತಿ ನಮ್ಮೆಲ್ಲರದಾಗಲಿ: ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು

    ಹನ್ನೆರಡನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಚಳವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ತಮ್ಮ ವಚನಗಳ ಮೂಲಕ ಕಾಯಕ, ಸಮಾನತೆಯ ಮಹತ್ವವನ್ನು ಸಾರಿದವರು. ಅವರ ಜೀವನ-ಬೋಧನೆಗಳು ಹೇಗೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂಬುದನ್ನು ನಾಡಿನ ಅನೇಕ ಮಠಾಧೀಶರು, ಗಣ್ಯರು ‘ಬಸವ ಜಯಂತಿ’ಯ ಈ ಶುಭ ಸಂದರ್ಭದಲ್ಲಿ ವಿವರಿಸಿದ್ದಾರೆ.

    ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು,; ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ,; ಉಂಬ ಜಂಗಮ ಬಂದರೆ ನಡೆಯೆಂಬರು,
    ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರು,; ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದರೆ ಕಲ್ಲತಾಗಿದ ಮಿಟ್ಟಿಯಂತಪ್ಪರಯ್ಯ.

    | ಬಸವಣ್ಣ

    ಬಸವಣ್ಣನವರ ಧೀಶಕ್ತಿ ನಮ್ಮೆಲ್ಲರದಾಗಲಿ

    ಅಗಮ್ಯ, ಅಗೋಚರನೆನಿಸಿದ ಕೂಡಲಸಂಗಮನನ್ನು ಇಷ್ಟಲಿಂಗ ರೂಪದಲ್ಲಿ ಕಂಡು ತನ್ನೊಳಗೆ ಆವಾಹಿಸಿಕೊಂಡು ಮತ್ತೊಬ್ಬರ ಕಷ್ಟಕ್ಕೆ, ತನು ಮುಟ್ಟಿ ಮನ ಮುಟ್ಟಿ ಮಾಡುವ ಸೇವೆಯೇ ನಿಜದ ಪೂಜೆ ಎಂದು ಭಾವಿಸಿ ಬದುಕಿದ ಬಸವಣ್ಣನವರ ಜಯಂತಿಯನ್ನು ಒಂದು ವೈರಾಣುವಿನ ದೆಸೆಯಿಂದ ಜಗತ್ತೇ ತತ್ತರಿಸಿರುವ ಸಂದರ್ಭದಲ್ಲಿ ಸರಳವಾಗಿ ಆಚರಿಸುವುದು ಅನಿವಾರ್ಯವಾಗಿದೆ. ಬಸವಣ್ಣನವರು ಸ್ವತಃ ಅಂತರಂಗ ವೀಕ್ಷಣೆಯ ಮೂಲಕ ಆತ್ಮಶೋಧ ಮಾಡಿಕೊಂಡು ಸಮಾಜವನ್ನು ಶುದ್ಧೀಕರಿಸಲು ಪ್ರಯತ್ನಿಸಿದರು. ಅಂತಹ ಒಂದು ಮಹತ್ತರ ಕಾರ್ಯ ಈಗ ಇಡೀ ಮನುಕುಲದ ಜವಾಬ್ದಾರಿಯಾಗಬೇಕಿದೆ. ಸಲಕರನ್ನೂ ತನ್ನ ಆತ್ಮ ಬಂಧುಗಳು ಎಂದೇ ಭಾವಿಸಿ ಯಾರನ್ನೂ ‘ಇವನಾರವ’ ಎನ್ನದೆ ಅಪ್ಪಿಕೊಂಡ ಮಹಾಮಹಿಮರ ಜಯಂತಿಯ ದಿನಮಾನಗಳಲ್ಲಿ, ಸ್ವಂತ ರಕ್ತಸಂಬಂಧಿಗಳನ್ನೂ ಅನ್ಯರೆಂದೇ ಪರಿಗಣಿಸುವ ಮೂಲಕ ಪರಿತಪಿಸುವ ಮಾನಸಿಕ ಸ್ಥಿತಿಯನ್ನು ಅದಕ್ಕೆ ಕಾರಣವಾದ ನಾಗರಿಕ ಬದುಕಿನ ಅಸಹಾಯಕ ನಡೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜಾತಸ್ಯ ಮರಣಂ ಧ್ರುವಂ ಎಂದು ಸಾವಿಗೇ ಸವಾಲು ಹಾಕಿದ ಬಸವಣ್ಣನವರ ಧೀಶಕ್ತಿಯನ್ನು ಎಲ್ಲರೂ ತಮ್ಮದಾಗಿಸಿಕೊಳ್ಳಬೇಕಿದೆ. ಮನೆಯೊಳಗೇ ಇದ್ದು ಮನೆಯೊಡೆಯನಾದ ಚಿದ್ಘನನನ್ನು ಕಂಡುಕೊಳ್ಳುವ ಸದಕಾಶ ಒದಗಿಬಂದಿದೆ. ಬಸವ ಜಯಂತಿಯ ಸರಳ ಆಚರಣೆ ಎಲ್ಲರಿಗೂ ಒಂದು ದೊಡ್ಡ ಸಂದೇಶವಾಗಬೇಕಿದೆ. ಎಲ್ಲರೂ ಬಹುಬೇಗ ಶಾಂತಿ ಸಮಾಧಾನದ ದಿನಗಳನ್ನು ಕಾಣುವಂತಾಗಲಿ.

    | ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸುತ್ತೂರು ಮಠ

    ಕಾಯಕನಿಷ್ಠೆಯಿಂದ ಯಶಸ್ಸು ಖಚಿತ: ವಿಆರ್​ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ. ವಿಜಯ ಸಂಕೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts