More

    ಮೊದಲ ಸಂಸತ್ತನ್ನು ರೂಪಿಸಿದ ದಾರ್ಶನಿಕ: ಪ್ರಧಾನಿ ನರೇಂದ್ರ ಮೋದಿ

    ಹನ್ನೆರಡನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಚಳವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ತಮ್ಮ ವಚನಗಳ ಮೂಲಕ ಕಾಯಕ, ಸಮಾನತೆಯ ಮಹತ್ವವನ್ನು ಸಾರಿದವರು. ಅವರ ಜೀವನ-ಬೋಧನೆಗಳು ಹೇಗೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂಬುದನ್ನು ನಾಡಿನ ಅನೇಕ ಮಠಾಧೀಶರು, ಗಣ್ಯರು ‘ಬಸವ ಜಯಂತಿ’ಯ ಈ ಶುಭ ಸಂದರ್ಭದಲ್ಲಿ ವಿವರಿಸಿದ್ದಾರೆ.

    ಇವನಾರವ ಇವನಾರವ
    ಇವನಾರವನೆಂದೆನಿಸದಿರಯ್ಯಾ
    ಇವ ನಮ್ಮವ
    ಇವ ನಮ್ಮವ
    ಇವ ನಮ್ಮವನೆಂದೆನಿಸಯ್ಯಾ
    ಕೂಡಲಸಂಗಮದೇವಾ
    ನಿಮ್ಮ ಮನೆಯ ಮಗನೆಂದೆನಿಸಯ್ಯಾ

    | ಬಸವಣ್ಣ

    ಮೊದಲ ಸಂಸತ್ತನ್ನು ರೂಪಿಸಿದ ದಾರ್ಶನಿಕ

    ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಪ್ರಜಾಪ್ರಭುತ್ವವನ್ನು ರೂಪಿಸಿದವರೆಂದರೆ ಜಗಜ್ಯೋತಿ ಬಸವೇಶ್ವರರು. 850 ವರ್ಷಗಳಷ್ಟು ಹಿಂದೆಯೇ ಬಸವಣ್ಣನವರು ಈಗಿನ ಸಂಸತ್ತಿನ ಸ್ವರೂಪವನ್ನು ಹೋಲುವಂತಿದ್ದ ‘ಅನುಭವ ಮಂಟಪ’ವನ್ನು ರೂಪಿಸಿ ಪ್ರಜಾತಂತ್ರವನ್ನು ಆಚರಣೆಗೆ ತಂದಿದ್ದರು. ಈಗಿನ ಸಂದರ್ಭದಲ್ಲಿ ಇಡೀ ಜಗತ್ತಿಗೆ ಕಂಟಕವಾಗಿರುವ ಭಯೋತ್ಪಾದನೆಗೂ ಬಸವಣ್ಣನವರ ತತ್ವ-ಸಿದ್ಧಾಂತಗಳಲ್ಲಿ ಪರಿಹಾರವಿದೆ. ಮಾನವೀಯ ಮೌಲ್ಯಗಳನ್ನು ಕಟ್ಟಿಕೊಟ್ಟ, ವಿಶ್ವ ಮಾನವತೆಯನ್ನು ಸಾರಿದ ವಚನಗಳು ಈಗಿನ ಜಗತ್ತಿಗೆ ಹಿಂದೆಂದಿಗಿಂತಲೂ ಪ್ರಸ್ತುತವಾಗಿವೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ, ದುಡಿಮೆಯ ಸಂಸ್ಕೃತಿ ಮುಂತಾದ ವಿಷಯಗಳು ಬಂದಾಗಲೆಲ್ಲ ಪಾಶ್ಚಿಮಾತ್ಯ ರಾಷ್ಟ್ರಗಳನ್ನೇ ಉಲ್ಲೇಖಿಸುವುದು ಸಾಮಾನ್ಯ. ಆದರೆ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲೇ ಈ ಸಂಸ್ಕೃತಿಯನ್ನು ಪರಿಚಯಿಸಿ, ಅನುಷ್ಠಾನಕ್ಕೆ ತಂದಿದ್ದರು ಎನ್ನುವುದು ವಿಶ್ವದ ಅನೇಕ ನಾಯಕರಿಗೆ ತಿಳಿದಿಲ್ಲ. ಕಾಯಕವೇ ಕೈಲಾಸ, ಮಹಿಳಾ ಸಬಲೀಕರಣ, ಸಾಮಾಜಿಕ ಸಮಾನತೆ ಮುಂತಾದ ಕೊಡುಗೆಗಳನ್ನು ವಿಶ್ವಕ್ಕೆ ನೀಡಿದ ಮಹಾದಾರ್ಶನಿಕ ಬಸವಣ್ಣನವರು. ಅವರ ವಿಚಾರಗಳನ್ನು ಆಚರಣೆಗೆ ತರುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.

    | ನರೇಂದ್ರ ಮೋದಿ ಪ್ರಧಾನಿ

    ಇಂದು ಅಕ್ಷಯ ತೃತೀಯ; ಅಕ್ಷಯ ತದಿಗೆಗೆ ಮಹತ್ವ ಬಂದಿದ್ದು ಹೇಗೆ? ಈ ಕತೆ ಓದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts