More

    ಬೆಳೆ ಸಮೀಕ್ಷೆಗೆ ರೈತ ಸಂಘ ಒತ್ತಾಯ

    ಬಸವನಬಾಗೇವಾಡಿ: ಕುಂಭದ್ರೋಣ ಮಳೆಯಿಂದಾಗಿ ರೈತರು ಬೆಳೆದ ವಿವಿಧ ಬೆಳೆಗಳು ಕೊಳೆತುಹೋಗಿದ್ದು, ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸರ್ಕಾರಕ್ಕೆ ಒತ್ತಾಯಿಸಿದರು.

    ಭಾನುವಾರ ತಾಲೂಕಿನ ಸಾತಿಹಾಳ ಗ್ರಾಮದ ರೈತರ ಜಮೀನಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ಪ್ರತಿ ವರ್ಷವು ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಹಾಳಾಗಿ ರೈತರು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ. ರೈತರು ಬೆಳೆದ ಬೆಳೆಗಳು ಕೆಲವೊಮ್ಮೆ ಅತಿವೃಷ್ಟಿ ಕೆಲವೊಮ್ಮೆ ಅನಾವೃಷ್ಟಿಯಿಂದ ಹಾಳಾಗುತ್ತಿವೆ. ಇತ್ತೀಚೆಗೆ ಸುರಿದ ಅತಿವೃಷ್ಟಿಗೆ ಈರುಳ್ಳಿ, ತೊಗರಿ, ಮೆಕ್ಕೆಜೋಳ, ಶೇಂಗಾ, ಸಜ್ಜೆ ಕೊಳೆತು ಹೋಗಿದದು, ಬಿತ್ತಿದ ಬೆಳೆಗಳು ಕೈಗೆ ಬಾರದೇ ಇರುವುದರಿಂದ ರೈತರು ಸಾಲಗಾರರಾಗುತ್ತಿದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯವರು ಸಮೀಕ್ಷೆ ಮಾಡಿ ರೈತರಿಂದ ಮಾಹಿತಿ ಪಡೆದುಕೊಂಡು ಜಿಲ್ಲಾಡಳಿತಕ್ಕೆ ಸರಿಯಾದ ಮಾಹಿತಿ ಕಳುಹಿಸಿ. ಕೂಡಲೇ ಹಾನಿಗೊಳಗಾದ ಬೆಳಗೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

    ತಾಲೂಕಾಧ್ಯಕ್ಷ ಸಿದ್ರಾಮ ಅಂಗಡಗೇರಿ, ಚಂದ್ರಾಮ ತೆಗ್ಗಿ, ರಾಚಪ್ಪ ಬೀಳಗಿ, ಬಸವರಾಜ ಭೈರವಾಡಗಿ, ಫೂಲಸಿಂಗ್ ಪವಾರ, ರಾಮಪ್ಪ ಯರನಾಳ, ರಾಜು ಚಳಗೇರಿ, ಪ್ರಭುಲಿಂಗ ಕುಂದರಗಿ, ಲಕ್ಷ್ಮಿಬಾಯಿ ಪವಾರ ಇದ್ದರು.

    ಕುಂಭದ್ರೋಣ ಮಳೆಯಿಂದಾಗಿ ರೈತರು ಬೆಳೆದ ವಿವಿಧ ಬೆಳೆಗಳು ಕೊಳೆತುಹೋಗಿದ್ದು, ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸರ್ಕಾರಕ್ಕೆ ಒತ್ತಾಯಿಸಿದರು.

    ಭಾನುವಾರ ತಾಲೂಕಿನ ಸಾತಿಹಾಳ ಗ್ರಾಮದ ರೈತರ ಜಮೀನಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ಪ್ರತಿ ವರ್ಷವು ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಹಾಳಾಗಿ ರೈತರು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ. ರೈತರು ಬೆಳೆದ ಬೆಳೆಗಳು ಕೆಲವೊಮ್ಮೆ ಅತಿವೃಷ್ಟಿ ಕೆಲವೊಮ್ಮೆ ಅನಾವೃಷ್ಟಿಯಿಂದ ಹಾಳಾಗುತ್ತಿವೆ. ಇತ್ತೀಚೆಗೆ ಸುರಿದ ಅತಿವೃಷ್ಟಿಗೆ ಈರುಳ್ಳಿ, ತೊಗರಿ, ಮೆಕ್ಕೆಜೋಳ, ಶೇಂಗಾ, ಸಜ್ಜೆ ಕೊಳೆತು ಹೋಗಿದದು, ಬಿತ್ತಿದ ಬೆಳೆಗಳು ಕೈಗೆ ಬಾರದೇ ಇರುವುದರಿಂದ ರೈತರು ಸಾಲಗಾರರಾಗುತ್ತಿದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯವರು ಸಮೀಕ್ಷೆ ಮಾಡಿ ರೈತರಿಂದ ಮಾಹಿತಿ ಪಡೆದುಕೊಂಡು ಜಿಲ್ಲಾಡಳಿತಕ್ಕೆ ಸರಿಯಾದ ಮಾಹಿತಿ ಕಳುಹಿಸಿ. ಕೂಡಲೇ ಹಾನಿಗೊಳಗಾದ ಬೆಳಗೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

    ತಾಲೂಕಾಧ್ಯಕ್ಷ ಸಿದ್ರಾಮ ಅಂಗಡಗೇರಿ, ಚಂದ್ರಾಮ ತೆಗ್ಗಿ, ರಾಚಪ್ಪ ಬೀಳಗಿ, ಬಸವರಾಜ ಭೈರವಾಡಗಿ, ಫೂಲಸಿಂಗ್ ಪವಾರ, ರಾಮಪ್ಪ ಯರನಾಳ, ರಾಜು ಚಳಗೇರಿ, ಪ್ರಭುಲಿಂಗ ಕುಂದರಗಿ, ಲಕ್ಷ್ಮಿಬಾಯಿ ಪವಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts