More

    ಹೋರಾಟ ಫಲಿಸಿದೆ, ಗ್ರಾಮಗಳಲ್ಲಿ ವಿಜಯೋತ್ಸವಕ್ಕೆ ನಿರ್ಧಾರ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮಧ್ಯಪ್ರವೇಶ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬೊಮ್ಮಾಯಿ‌ ದಿಟ್ಟ ನಿರ್ಧಾರದಿಂದ ಪಂಚಮಸಾಲಿ ಸಮುದಾಯದ ಹೋರಾಟ ಫಲಿಸಿದೆ. ಗ್ರಾಮಗಳಲ್ಲಿ ವಿಜಯೋತ್ಸವ ಆಚರಿಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಪತಿ ಶ್ರೀ ಜಯ ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ‌ ಅವರಿಂದ ವೀರಶೈವ-ಲಿಂಗಾಯತ ಸಮುದಾಯವನ್ನು 2ಡಿಗೆ ಸೇರಿಸಿ ಶೇಕಡ 7ರಷ್ಟು ಮೀಸಲಾತಿ ಕಲ್ಪಿಸಿದ ಅಧಿಕೃತ ಆದೇಶದ ಪ್ರತಿ ಪಡೆದು, ಸಿಎಂ ಬೊಮ್ಮಾಯಿ‌ಗೆ ಸನ್ಮಾನಿಸಿ ಗೌರವಿಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

    ಹೋರಾಟ ಫಲಿಸಿದೆ, ಗ್ರಾಮಗಳಲ್ಲಿ ವಿಜಯೋತ್ಸವಕ್ಕೆ ನಿರ್ಧಾರ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಇದನ್ನೂ ಓದಿ: ವರುಣಾದಲ್ಲೂ ಸಿದ್ದರಾಮಯ್ಯ ಗೆಲುವು ಕಷ್ಟಕರ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭವಿಷ್ಯ

    2ಎ ದಲ್ಲಿರುವ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂದು ಪ್ರತ್ಯೇಕವಾಗಿ 2ಡಿ ಸೃಷ್ಟಿಸಿರುವುದು, ಈ ವರ್ಗದಲ್ಲಿ ವಿವಿಧ ಸಮುದಾಯಗಳ ಸೇರ್ಪಡೆ ಸಮಂಜಸವಾಗಿದೆ. ಚುನಾವಣೆ ಮುಗಿದ ನಂತರ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಒತ್ತಾಯಿಸಿ ಎರಡನೇ ಹಂತದ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.

    ಒಕ್ಕಲಿಗರು ಹಾಗೂ ಲಿಂಗಾಯತರಿಗೆ ನೀಡಿರುವ ಮೀಸಲು ಹೆಚ್ಚಳ ರದ್ದುಪಡಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿರುವುದನ್ನು ಆಕ್ಷೇಪಿಸುತ್ತೇವೆ. ಎರಡೂ ಸಮುದಾಯಗಳಿಗೆ ಅನ್ಯಾಯ ಮಾಡುತ್ತೇವೆ ಎಂಬ ಸಂದೇಶ ರವಾನಿಸಿದಂತಾಗುತ್ತದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts