More

    ಮೋದಿ ಉಪನಾಮ ವಿವಾದ; ರಾಹುಲ್​ ಗಾಂಧಿ ವಿರುದ್ದ ದೂರು ದಾಖಲಿಸುವೆ ಎಂದ ಲಲಿತ್​ ಮೋದಿ

    ನವದೆಹಲಿ: 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮೋದಿ ಉಪನಾಮ ಕುರಿತು ವ್ಯಂಗ್ಯವಾಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಬ್ರಿಟನ್​ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಐಪಿಎಲ್​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಲಲಿತ್​ ರಾಹುಲ್​ ಗಾಂಧಿ ಮತ್ತು ಸಹಚರರು ನಾನು ಕಾನೂನಿನಿಂದ ತಪ್ಪಿಸಿಕೊಂಡು ದೇಶ ಬಿಟ್ಟು ಪರಾರಿಯಾದವನು ಎಂದು ಹೇಳುತ್ತಿದ್ದಾರೆ. ನನ್ನ ವಿರುದ್ದ ಮಾಡಿರುವ ಆರೋಪಗಳು ಸಾಬೀತಾಗಿವೆಯೇ ವಿರೋಧ ಪಕ್ಷದ ಎಲ್ಲಾ ನಾಯಕರಿಗೂ ತಪ್ಪು ಮಾಹಿತಿ ನೀಡಲಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಕಿಡಿಕಾರಿದ್ಧಾರೆ.

    ರಾಹುಲ್​ ಗಾಂಧಿ ಇರುವರೆಗೂ ಮಾಡಿರುವ ಆರೋಪಗಳ ಬಗ್ಗೆ ನಾನು ಬ್ರಿಟನ್​ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸುತ್ತಿದ್ಧೇನೆ. ದಾಖಲೆಗಳೊಂದಿಗೆ ರಾಹುಲ್​ ಬ್ರಿಟನ್​ ನ್ಯಾಯಾಲಯಕ್ಕೆ ಹಾಜರಾಗಬೇಕು. ಗಾಂಧಿ ಕುಟುಂಬಕ್ಕಿಂತ ನನ್ನ ಕುಟುಂಬವು ಭಾರತ ದೇಶಕ್ಕೆ ಹೆಚ್ಚಿನದನ್ನು ಮಾಡಿದೆ ಎಂದು ಹೇಳಿದ್ದಾರೆ.

    ತಮ್ಮ ಟ್ವೀಟ್​ನಲ್ಲಿ ಹಲವು ಕಾಂಗ್ರೆಸ್​​ ನಾಯಕರ ಹೆಸರನ್ನು ಪ್ರಸ್ತಾಪಿಸಿರುವ ಲಲಿತ್​​ ಇವರೆಲ್ಲರೂ ವಿದೇಶಗಳಲ್ಲಿ ಆಸ್ತಿ ಹೊಂದಿದ್ದಾರೆ. ಅವುಗಳ ಚಿತ್ರ ಹಾಗೂ ವಿಳಾಸಗಳನ್ನು ಕೊಡುತ್ತೇನೆ. ನಿಜವಾದ ಕಳ್ಳರು ಯಾರೆಂದು ತಿಳಿಯುತ್ತದೆ. ನಿಮ್ಮ ಹೇಳಿಕೆಗಳ ಮೂಲಕ ದೇಶದ ಜನರನ್ನು ಮೂರ್ಖರನ್ನಾಗಿಸುವುದು ಬೇಡ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಭಾರತದಲ್ಲಿ ಪಾಕ್​ ಸರ್ಕಾರದ ಅಧಿಕೃತ ಟ್ವಿಟರ್ ಖಾತೆ ಬ್ಯಾನ್

    ಕಾಂಗ್ರೆಸ್​​ ನಾಯಕರು ಮಾಡಿರುವ ವಂಚನೆಗಳನ್ನು ತಡೆಯಲು ಕಠಿಣ ಕಾನೂನು ಕ್ರಮವನ್ನು ಜರುಗಿಸಿದರೆ ತಕ್ಷಣ ಭಾರತಕ್ಕೆ ಮರಳುತ್ತೇನೆ. ಕಳೆದ 15 ವರ್ಷಗಳಿಂದ ನನ್ನ ಮೇಲೆ ಮಾಡಿರುವ ಆರೋಪಗಳು ಯಾವುದು ಸಾಬೀತಾಗಿಲ್ಲ. 1950ರ ದಶಕದಲ್ಲಿ ಮೋದಿ ಹೆಸರಿನ ಕುಟುಂಬಗಳು ದೇಶಕ್ಕಾಗಿ ಮಾಡಿರುವ ಕೆಲಸವನ್ನು ಕಾಂಗ್ರೆಸ್ಸಿಗರು ಮರೆಯಬಾರದು ಎಂದು ಟ್ವೀಟ್​ ಮೂಲಕ ರಾಹುಲ್​ ಗಾಂಧಿ ವಿರುದ್ದ ಲಲಿತ್​ ಮೋದಿ ಹರಿಹಾಯ್ದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts