More

    ಬಿಎಸ್​ವೈ ನಮ್ಮ ಸಿಎಂ ಅಷ್ಟೇ, ನನ್ನ ನಾಯಕರು ವಾಜಪೇಯಿ, ಪ್ರಧಾನಿ ಮೋದಿ: ಬಸನಗೌಡ ಪಾಟೀಲ್​ ಯತ್ನಾಳ್

    ಬೆಂಗಳೂರು: ಬಿ.ಎಸ್​.ಯಡಿಯೂರಪ್ಪನವರು ನಮ್ಮ ಮುಖ್ಯಮಂತ್ರಿಯಷ್ಟೇ, ನನ್ನ ನಾಯಕರು ಅಟಲ್​ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ. ಇವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ನೀಡಿರುವ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಬಿಜೆಪಿಯಲ್ಲಿ ಭಿನ್ನಮತ ಹೊಗೆಯಾಡುವಂತಾಗಿದೆ.

    ಇದನ್ನೂ ಓದಿ: ಬಿಜೆಪಿಯಲ್ಲಿನ ಭಿನ್ನಮತ‌ ವಿಚಾರ ಸಿಎಂ ಬಿಎಸ್​ವೈ ಹೇಳಿದ್ದು ಹೀಗೆ…

    ಷಡ್ಯಂತ್ರ ನಡೆಸಿಲ್ಲ
    ಭಿನ್ನಮತ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉತ್ತರ ಕರ್ನಾಟಕ ಜನರಿಗೆ ರೊಟ್ಟಿ ತಿನ್ನುವ ಆಸೆ. ಅದಕ್ಕೆ ನಿರಾಣಿಯವರ ಮನೆಯಲ್ಲಿ ಊಟ ಮಾಡಿದ್ದೇವೆ. ಈ ವೇಳೆ ಲೋಕಭಿರಾಮವಾಗಿ ಮಾತಾಡಿದ್ದೇವೆ. ಅದನ್ನು ಬಿಟ್ಟು ಯಡಿಯೂರಪ್ಪ ವಿರುದ್ಧ ಯಾವುದೇ ಷಡ್ಯಂತ್ರ ನಡೆಸಿಲ್ಲ. ವಿಧಾನ ಪರಿಷತ್ ಸ್ಥಾನ, ರಾಜ್ಯ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ. ನಮ್ಮದು ಶಿಸ್ತಿನ ಪಕ್ಷ. ಯಾವುದೇ ರೀತಿಯ ಬಂಡಾಯದ ಮುನ್ಸೂಚನೆ ಇಲ್ಲ. ನಮ್ಮ ಹೈಕಮಾಂಡ್ ಹಾಗೂ ಸಿಎಂ ಯಡಿಯೂರಪ್ಪ ಅವರು ಸ್ಟ್ರಾಂಗ್ ಇದ್ದಾರೆ ಎಂದು ತಿಳಿಸಿದರು.

    ಬಂಡಾಯದ ಪ್ರಶ್ನೆಯೇ ಇಲ್ಲ
    ನಮ್ಮ ಸಭೆ ನಾಯಕತ್ವದ ವಿರುದ್ಧದ ಸಭೆ ಅಲ್ಲ. ಎಲ್ಲಾ ನಾಯಕರು ಕೂತಾಗ ಕೆಲವೊಂದು ವಿಚಾರ ಚರ್ಚೆ ಮಾಡಿದ್ದೇವೆ. ಉಮೇಶ್ ಕತ್ತಿಯವರನ್ನು ಸಚಿವ ಮಾಡ್ತೇವೆ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ಬಂಡಾಯದ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

    ಇದನ್ನೂ ಓದಿ: ಸಂಸದ ಗೌತಮ್​ ಗಂಭೀರ್​ ತಂದೆಯ ಎಸ್​ಯುವಿ ಕಾರನ್ನೇ ಎಗರಿಸಿದ ಖದೀಮರು!

    ನನ್ನ ಕ್ಷೇತ್ರದ ಕೆಲಸ ಆಗಿಲ್ಲವೆಂಬ ನೋವಿದೆ
    ಶನಿವಾರ ಯಡಿಯೂರಪ್ಪನವರು ಸಭೆ ಕರೆದಿದ್ದರು. ನಾನು ಹೋಗಲಿಲ್ಲ. ನನ್ನ ಕ್ಷೇತ್ರದ ಕೆಲಸ ಆಗಬೇಕಿದೆ. ಎಷ್ಟು ಸಾರಿ ಪದೇ ಪದೇ ಹೋಗಿ ಕೇಳಬೇಕು ನೀವೇ ಹೇಳಿ. ನಾನು ಅಭಿವೃದ್ಧಿ ಕೆಲಸದ ಬಗ್ಗೆ ಕೇಳೋಕೆ ಹೋಗಿದ್ದು, ಯಾವುದೇ ಗಣಿಗಾರಿಕೆ, ಕಂದಾಯ ಭೂಮಿಯನ್ನು ಅಕ್ರಮದಿಂದ ಸಕ್ರಮ ಮಾಡಿ ಅಂತ ಕೇಳಿಲ್ಲ. ನಾನು ಇನ್ಮೇಲೆ ಬರುವುದಿಲ್ಲ. ನಾನು ಹೇಳಿದ ಕೆಲಸ ಆಗಲ್ಲ. ಕೋವಿಡ್ ಮುಗಿದ ಮೇಲೆ ಬರುತ್ತೇನೆಂದು ಸಿಎಂಗೆ ಹೇಳಿದ್ದೇನೆ. ಹೀಗಾಗಿ ಶನಿವಾರ ಕರೆದ ಸಭೆಗೆ ಹೋಗಲಿಲ್ಲ. ನನ್ನ ಕ್ಷೇತ್ರದ ಕೆಲಸ ಆಗಿಲ್ಲವೆಂಬ ನೋವಿದೆ. ಹಾಗಾಂತ ಸಿಎಂ ವಿರುದ್ಧ ಬಂಡಾಯ ಏಳೋದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

    ಸಭೆ ಕರೆದ್ರೆ ಯಾವುದೇ ಕಾರಣಕ್ಕೂ ಹೋಗಲ್ಲ
    ಸುಮ್ಮನೆ ಅಲ್ಲಿ ಹೋಗಿ ಅವರ ಮುಂದೆ ಕೈ ಕಟ್ಟಿ ನಿಲ್ಲೋ ಜಾಯಮಾನ ಅಲ್ಲ. ಸಿಎಂ ಸಭೆ ಕರೆದ್ರೆ ಯಾವುದೇ ಕಾರಣಕ್ಕೂ ಹೋಗಲ್ಲ. ನಮ್ಮ ಕ್ಷೇತ್ರದ ಕೆಲಸ ಆಗಿಲ್ಲ ಅಂದಮೇಲೆ ಏಕೆ ಹೋಗಬೇಕು. ನನ್ನ ನಾಯಕರು ವಾಜಪೇಯಿ ಮತ್ತು ಪ್ರಧಾನಿ ಮೋದಿಯವರು. ಇವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ. ಬಿಎಸ್​ವೈ ನಮ್ಮ ಸಿಎಂ ಅಷ್ಟೇ ಎಂದರು.

    ಇದನ್ನೂ ಓದಿ: VIDEO| ದೇಶದ ಅರ್ಧಕ್ಕರ್ಧ ಜನ್ರಿಗೆ ಕರೊನಾ ಗ್ಯಾರೆಂಟಿ ಎನ್ನುತ್ತಿದೆ ವರದಿ: ಆದ್ರೂ ಗುಡ್​ ನ್ಯೂಸ್​ ಸಹ ಇದೆ!

    ಸರ್ಕಾರ ಬೀಳಿಸುವ ರಾಜಕೀಯವಲ್ಲ
    ಅಭಿವೃದ್ದಿ ಕೆಲಸಕ್ಕೆ ಹಣ ಬಿಡುಗಡೆಗೆ ಸಿಎಂ ಪತ್ರದಲ್ಲಿ ಬರೆದಿದ್ದರು. ಆದರೂ ಬಿಡುಗಡೆ ಆಗಿಲ್ಲ. ಮತ್ತೆ ಕರೆ ಮಾಡಿ ಪತ್ರ ಕೊಡಿ ಅಂತ ಹೇಳಿದ್ರು. ಪದೇ ಪದೇ ಕೊಡಲ್ಲ ಅಂತ ಸುಮ್ಮನಾಗಿದ್ದೇನೆ. ಇದು ಬರೀ ಅಭಿವೃದ್ಧಿ ಪೊಲಿಟಿಕ್ಸ್ ಹೊರತು ಸರ್ಕಾರ ಬೀಳಿಸುವ ರಾಜಕೀಯವಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಕರ್ನಾಟಕಕ್ಕೂ ಮಿಡತೆಗಳು ದಾಂಗುಡಿ ಇಡುವುದು ಖಚಿತ: ಕೇಂದ್ರದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts