More

    ಚುನಾವಣೆ ಹಿನ್ನೆಲೆ ವಾಹನ ತಪಾಸಣೆ ಮಾಡದೇ ಸುಮ್ಮನೆ ಕೂತಿರುವ ಪೊಲೀಸರ ಮೇಲೆ ಕಮಿಷನರ್ ಗರಂ!

    ಬೆಂಗಳೂರು: ಚುನಾವಣೆ ಹಿನ್ನಲೆ ಸರಿಯಾಗಿ ವಾಹನ ತಪಾಸಣೆ ಆಗುತ್ತಿಲ್ಲ ಎಂದು ಕಮೀಷನರ್ ಸಿಟ್ಟಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಒಂದೊಂದು ದಿನ ಒಂದೊಂದು ಡಿವಿಷನ್​ನ‌ ಪೊಲೀಸರು, ಆಯಾ ವಿಭಾಗದ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್​ಗಳ ಜತೆ ಸಭೆ ನಡೆಸುತ್ತಿದ್ದಾರೆ.

    “ವಾಹನಗಳು ಹೋದ್ರೂ ಸುಮ್ಮನೆ ಚೆಕ್​ಪೋಸ್ಟ್​ನಲ್ಲಿ ಕೂತಿರುತ್ತೀರಾ” 

    ಚುನಾವಣೆಯ ವೇಳೆ ನಗರದಲ್ಲಿ ದಿನದ ಸಮಯದಲ್ಲಿ ಸರಿಯಾಗಿ ವಾಹನ ತಪಾಸಣೆ ಮಾಡದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯ ವೈಖರಿ ಮೇಲೆ ಕಮಿಷನರ್​ ಸಿಟ್ಟಾಗಿದ್ದು “ಸುಮ್ಮನೆ ವಾಹನಗಳು ಹೋದ್ರೂ ಚೆಕ್ ಪೋಸ್ಟ್ ನಲ್ಲಿ ಕೂತಿರ್ತೀರ, ಇನ್ಮೇಲೆ ಆ ರೀತಿ ಆಗಬಾರದು. ಆದಷ್ಟು ವಾಹನಗಳ ತಪಾಸಣೆ ಆಗಬೇಕು. ಅನುಮಾನ ಬಂದ ಯಾವುದೇ ವಾಹನ ಆಗಲಿ ತಪಾಸಣೆ ಮಾಡಬೇಕು. ಹಣ, ಸೀರೆ, ಕುಕ್ಕರ್ ತವಾ ಹೀಗೆ ಯಾವುದೇ ವಸ್ತುಗಳು ಇದ್ರು ಸೀಜ್ ಮಾಡಬೇಕು. ಜೊತೆಗೆ ಪ್ರತಿಯೊಂದು ಚೆಕ್ ಪೋಸ್ಟ್​ನಲ್ಲಿಯೂ ಮೂರು ಕಡೆ ಕಾಣೋ ಹಾಗೆ ಸಿಸಿ ಕ್ಯಾಮರಾ ಇರಬೇಕು.

    ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್​ ವಾರ್ನಿಂಗ್​

    ವಾಹನ ತಡೆಯೋದ್ರಿಂದ ಹಿಡಿದು, ತಪಾಸಣೆ ಮಾಡಿ ವಾಹನ ಹೋಗೋವರೆಗೂ ರೆಕಾರ್ಡ್ ಆಗಬೇಕು. ಒಂದು ವೇಳೆ ತಪಾಸಣೆ ವೇಳೆ ನಿರ್ಲಕ್ಷ್ಯ ತೋರಿದ್ರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು” ಎಂದು ನಗರದ ಎಲ್ಲಾ ಪೊಲೀಸರಿಗೂ ಸಭೆಯಲ್ಲಿ ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts