More

    ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ಮಹಿಳೆಗೆ ವೆಜ್​ ಬಿರಿಯಾನಿಯಲ್ಲಿ ಸಿಕ್ತು ಮಾಂಸದ ತುಂಡು!

    ನವದೆಹಲಿ: ನಮ್ಮಲ್ಲಿ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ಸಸ್ಯಾಹಾರಿಗಳಾಗಿ ಜೀವನ ನಡೆಸುತ್ತಿರುವ ಸಾವಿರಾರು ಜನರಿದ್ದಾರೆ. ಈ ಪ್ರಕರಣದಲ್ಲಿ ಓರ್ವ ಮಹಿಳೆಗೆ ಆನ್​ಲೈನ್​ ಆ್ಯಪ್​ ಮೂಲಕ ಸಸ್ಯಾಹಾರಿ ಆಹಾರಕ್ಕೆ ಆರ್ಡರ್​ ನೀಡಿ ಮಾಂಸಾಹಾರ ಸಿಕ್ಕದೆ. ಬಂದ ಡೆಲಿವರಿಯನ್ನು ಸಸ್ಯಾಹಾರಿ ಎಂದೇ ನಂಬಿ ಮೆಲ್ಲುತ್ತಿರುವಾಗ ಮೂಳೆಯ ತುಂಡು ಸಿಕ್ಕರೆ ಹೇಗಾಗಬಹುದು?

    ವೆಜ್ ಬಿರಿಯಾನಿಯಲ್ಲಿ ಮೂಳೆ!

    ಹೌದು! ಅಂತಹದೇ ಘಟನೆ ಈ ಪ್ರಕರಣದಲ್ಲಿ ನಡೆದಿದೆ. ನತಾಷಾ ಭಾರದ್ವಾಜ್​ ಎಂಬ ಮಹಿಳೆ ಸ್ವಿಗ್ಗಿಯಲ್ಲಿ ವೆಜ್​ ಬಿರಿಯಾನಿ ಆರ್ಡರ್​ ಮಾಡಿದ್ದರು. ಆದರೆ ಅವರಿಗೆ ಬಂದಿದ್ದು ಮಾತ್ರ ನಾನ್​ವೆಜ್​ ಬಿರಿಯಾನಿ. ಅದನ್ನು ತಿಳಿಯದೇ ತಿನ್ನುತ್ತಿರುವಾಗ ಅವರಿಗೆ ಮೂಳೆಯ ತುಂಡೊಂದು ಸಿಕ್ಕಿದೆ. ಇದರಿಂದ ಆಘಾತಕ್ಕೊಳಗಾದ ಅವರು ತಕ್ಷಣ ಸ್ವಿಗ್ಗಿಗೆ ದೂರನ್ನು ನೀಡಿದ್ದಾರೆ. ಹಣವನ್ನು ಮರುಪಾವತಿ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಅಲ್ಲಿನ ಕಸ್ಟಮರ್​ ಕೇರ್​ ವಿಭಾಗದವರು ಮಾತ್ರ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ.

    ಇದನ್ನೂ ಓದಿ: ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!

    ಆಹಾರವನ್ನು ತಯಾರಿಸಿದ ಹೋಟೇಲಿನವರು ಹಣ ಮರುಪಾವತಿ ಮಾಡುವುದಕ್ಕೆ ಒಪ್ಪದ ಕಾರಣ ಅದನ್ನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಅದಲ್ಲದೇ ನಿಮಗಾದ ಅನುಭವದ ಫೀಡ್​ಬ್ಯಾಕ್​ ನೀಡಿದರೆ ನಾವು ಹೋಟೇಲಿಗೆ ಅದನ್ನು ಫಾರ್ವರ್ಡ್​ ಮಾಡುತ್ತೇವೆ ಎಂದಿದ್ದಾರೆ. ಆದರೆ ಈ ಮಹಿಳೆ ಮಾತ್ರ “ಮಾಂಸಾಹಾರ ತಿಂದು ನನಗಾದ ಮಾನಸಿಕ ಆಘಾತ ಫೀಡ್​ಬ್ಯಾಕ್​ ನೀಡದರೆ ಸರಿಯಾಗುತ್ತದೆಯೇ” ಎಂದು ಸಿಟ್ಟಾಗಿ ಪ್ರಶ್ನಿಸಿದ್ದಾರೆ.

    ನಂತರ ಮಹಿಳೆ ಕೋರ್ಟ್​ಗೆ ಹೋಗುವುದಾಗಿ ಹೇಳಿದ ಮೇಲೂ ಹಿಂದೆ ನೀಡಿದ್ದ ರೀತಿಯಲ್ಲೇ ಅವರು ಉತ್ತರಿಸಿದ್ದಾರೆ. ಇದರಿಂದಾಗಿ ಸಿಟ್ಟಿಗೆದ್ದ ಮಹಿಳೆ ಟ್ವೀಟ್​ ಮಾಡಿದ್ದಾರೆ. ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಸಿಟ್ಟಾಗಿರುವ ಮಹಿಳೆ ಬಹು ಗಂಭೀರವಾಗಿ ಟ್ವೀಟ್​ ಮಾಡಿದ್ದು ಅಗತ್ಯ ದಾಖಲೆಗಳನ್ನು ಜತೆಗೆ ಲಗತ್ತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts