More

    ರಾತ್ರಿ ಬರ್ತಡೇ ಪಾರ್ಟಿ ಮುಗಿಸಿ ಬರ್ತಿದ್ದ ದಂಪತಿ ತಡೆದು ಹಣ ವಸೂಲಿ: ಇಬ್ಬರು ಹೊಯ್ಸಳ ಪೊಲೀಸರು ಸಸ್ಪೆಂಡ್​

    ಬೆಂಗಳೂರು: ನಿನ್ನೆ (ಡಿ.10) ಮಧ್ಯರಾತ್ರಿ ನಗರದ ಮಾನ್ಯತಾ ಟೆಕ್​ ಪಾರ್ಕ್​ ಬಳಿ ದಂಪತಿಯನ್ನು ತಡೆದು ಹಣ ವಸೂಲಿ ಮಾಡಿರುವ ಆರೋಪ ಹೊಯ್ಸಳ ಪೊಲೀಸರ ವಿರುದ್ಧ ಕೇಳಿಬಂದಿದ್ದು, ಮೇಲ್ನೋಟಕ್ಕೆ ಆರೋಪ ಸಾಬೀತಾದ ಬೆನ್ನಲ್ಲೇ ಇಬ್ಬರು ಪೊಲೀಸ್​ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

    ಪೊಲೀಸರು ಕೊಟ್ಟ ಹಿಂಸೆಯನ್ನು ಸಂತ್ರಸ್ತ ವ್ಯಕ್ತಿ ಟ್ವಿಟರ್​ನಲ್ಲಿ ವಿವರಿಸಿ, ಬೆಂಗಳೂರು ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಸ್ನೇಹಿತರ ಪಾರ್ಟಿ ಮುಗಿಸಿ ಕಾರ್ತಿಕ್ ಪೆತ್ರಿ ಮತ್ತು ಅವರ ಪತ್ನಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ದಂಪತಿಯನ್ನು ತಡೆದ ಹೊಯ್ಸಳ ಸಿಬ್ಬಂದಿ 3000 ರೂಪಾಯಿ ಬೇಡಿಕೆ ಇಟ್ಟಿದ್ದಾರೆ.

    ದಂಪತಿ ಹಣ ಕೊಡುವುದಿಲ್ಲ ಎಂದಾಗ ಪೊಲೀಸರು ಬೆದರಿಸಿದ್ದಾರೆ. ಬಳಿಕ ದಂಪತಿ 1000 ರೂ. ಡಿಜಿಟಲ್ ಪೇಮೆಂಟ್​ ಮಾಡಿದಾಗ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ ದಂಪತಿ ಬಳಿ ಪೊಲೀಸರು ಏಕೆ ಹಣ ಪಡೆದಿದ್ದಾರೆ ಅನ್ನೋದು ಗೊತ್ತಿಲ್ಲ. ಇದರಿಂದ ನೊಂದ ಕಾರ್ತಿಕ್​ ಟ್ವೀಟ್ ಮೂಲಕ ಬೇಸರ ಹೊರ ಹಾಕಿದ್ದಾರೆ.

    ನಿನ್ನೆ ನಡೆದ ಘಟನೆಯಿಂದ ನಮಗೆ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ ಅಥವಾ ಮರುದಿನ ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ಇಡೀ ಘಟನೆ ನಮ್ಮ ಮನಸ್ಸಿನಲ್ಲಿ ಆಳವಾದ ಗಾಯವನ್ನು ಉಂಟುಮಾಡಿದೆ. ಇದು ಕಾನೂನು ಜಾರಿ ಸಂಸ್ಥೆಗಳ ಮೇಲಿನ ನಮ್ಮ ನಂಬಿಕೆಯನ್ನು ಅಲ್ಲಾಡಿಸಿದೆ. ಇದು ಭಯೋತ್ಪಾದನೆ ಅಲ್ಲವೇ? ಇದು ಕಾನೂನುಬದ್ಧ ಚಿತ್ರಹಿಂಸೆ ಅಲ್ಲವೇ? ಈ ನೆಲದ ಪ್ರಾಮಾಣಿಕ, ಕೆಳಮಟ್ಟದ ನಾಗರಿಕರನ್ನು ಹೀಗೆ ನಡೆಸಿಕೊಳ್ಳಬೇಕೆ? ಎಂದು ಬೆಂಗಳೂರು ಪೊಲೀಸರು ಪ್ರಶ್ನಿಸಿದ್ದಾರೆ.

    ಘಟನೆ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ, ಟ್ವಿಟರ್ ಮೂಲಕ ನಮಗೆ ಒಂದು ಮಾಹಿತಿ ಬಂದಿತ್ತು. ಹೊಯ್ಸಳ ಪೊಲೀಸರು ಬೀಟ್ ನಲ್ಲಿದ್ದಾಗ ದಂಪತಿಗಳ ಬಳಿ ಹಣ ಪಡೆದಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಸಂತ್ರಸ್ತರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೇಲ್ನೋಟಕ್ಕೆ ಹೊಯ್ಸಳದಲ್ಲಿದ್ದ ಸಿಬ್ಬಂದಿ ಕ್ಯೂ ಆರ್ ಕೋಡ್ ಮೂಲಕ 1000 ರೂ. ಹಣ ಪಡೆದಿದ್ದಾರೆ. ಆ ಸಿಬ್ಬಂದಿಯನ್ನು ಎಚ್​.ಸಿ ರಾಜೇಶ್ ಹಾಗೂ ನಾಗೇಶ್ ಎಂದು ಗುರುತಿಸಲಾಗಿದೆ.

    ದಂಪತಿಗಳಿಬ್ಬರು ಮನೆ ಪಕ್ಕ ಸ್ನೇಹಿತರ ಬರ್ತಡೇ ಇರೋದ್ರಿಂದ ಅಲ್ಲಿಗೆ ಹೋಗಿದ್ದರು. ಬರ್ತಡೇ ಪಾರ್ಟಿ ಮುಗಿಸಿ ಬರುವಾಗ ಪೊಲೀಸರು ಮಾಹಿತಿ ಕೇಳಿದ್ದಾರೆ. ಈ ವೇಳೆ ಅವರ ಬಳಿ ಒಂದು ಸಾವಿರ ಹಣ ಪಡೆದಿರೋದು ಗೊತ್ತಾಗಿದೆ. ಹೀಗಾಗಿ ಇಬ್ಬರನ್ನು ಅಮಾನತ್ತಿನಲ್ಲಿಟ್ಟಿದೇವೆ. 11 ಗಂಟೆಗೆ ಓಡಾಡ ಬಾರದು ಅಂತ ತಡೆ ಇಲ್ಲ. ಅನುಮಾನ ಬಂದಾಗ ಮಾಹಿತಿ ಕಲೆ ಹಾಕಬೇಕಾಗತ್ತದೆ. ಅವರನ್ನ ಪರಿಶೀಲಿಸಿ ಕಳುಹಿಸಬೇಕಾಗುತ್ತದೆ. ಆದರೆ ಸಿಬ್ಬಂದಿ ಹಣ ಪಡೆದಿರೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಅನೂಪ್​ ಶೆಟ್ಟಿ ಮಾಹಿತಿ ನೀಡಿದರು. (ದಿಗ್ವಿಜಯ ನ್ಯೂಸ್​)

    ಮಾಡೆಲ್ ಅವಿವಾ ಬಿದ್ದಪ್ಪ ಜತೆ ಅಂಬಿ ಪುತ್ರನ ನಿಶ್ಚಿತಾರ್ಥ: ಶೀಘ್ರದಲ್ಲೇ ವೈವಾಜಿಕ ಜೀವನಕ್ಕೆ ಕಾಲಿಡಲಿದ್ದಾರೆ ಅಭಿ

    ಒಂದೇ ಕುಟುಂಬದ ಐವರ ಸಾವನ್ನು ಬಂಡವಾಳ ಮಾಡಿಕೊಂಡ ಸ್ವಯಂಘೋಷಿತ ದೇವಮಹಿಳೆಯಿಂದ ನೀಚ ಕೃತ್ಯ!

    ಕೇವಲ 16ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಹೊಸ ಇತಿಹಾಸ ಬರೆದ ಬಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts