More

    ಸಾಯುವುದು ಹೇಗೆಂದು ಗೂಗಲ್​ ಸರ್ಚ್​ ಮಾಡಿ ನೇಣಿಗೆ ಕೊರಳೊಡ್ಡಿದ ಎಂಬಿಬಿಎಸ್​ ವಿದ್ಯಾರ್ಥಿ

    ಬೆಂಗಳೂರು: ವೈದ್ಯನಾಗುವ ಕನಸು ಕಟ್ಟಿಕೊಂಡು ದೂರದ ರಾಯಚೂರಿನಿಂದ ಬೆಂಗಳೂರಿಗೆ ಬಂದು ಇಲ್ಲಿನ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಎಂಬಿಬಿಎಸ್​ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ ಮಾನಸಿಕ ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ರಾಯಚೂರು ಮೂಲದ ಪಿ.ನವೀನ್ (20) ಮೃತ ವಿದ್ಯಾರ್ಥಿ. ಕೆ.ಆರ್.ರಸ್ತೆಯಲ್ಲಿ ಇರುವ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜ್​ ಹಾಸ್ಟೇಲ್‌ನಲ್ಲಿ 5ನೇ ಮಹಡಿಯಲ್ಲಿ ನೆಲೆಸಿದ್ದ. ಕೊಠಡಿಯಲ್ಲಿ ನೆಲೆಸಿದ್ದ ಸಹಪಾಠಿಗಳ ಜತೆ ಪ್ರತಿದಿನ ಮಧ್ಯಾಹ್ನದ ಊಟ ಮಾಡಿ ಓದಲು ಗ್ರಂಥಾಲಯಕ್ಕೆ ಹೋಗುತ್ತಿದ್ದ. ಆದರೆ ಭಾನುವಾರ ಮಧ್ಯಾಹ್ನ 2.30ರ ಹೊತ್ತಿಗೆ ಊಟ ಮಾಡಿದ ಬಳಿಕ ತನ್ನ ಇಬ್ಬರು ಸ್ನೇಹಿತರು ಗ್ರಂಥಾಲಯಕ್ಕೆ ಕಳುಹಿಸಿ ವಾಪಸ್ ಕೊಠಡಿಗೆ ಬಂದಿದ್ದಾನೆ. ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಹಪಾಠಿಗಳು ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ವಿಷಯ ತಿಳಿದ ವಿವಿಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಪಾಲಕರಿಗೆ ಹಸ್ತಾಂತರ ಮಾಡಲಾಗಿದೆ. ನವೀನ್ ತಂದೆ, ರಾಯಚೂರಿನಲ್ಲಿ ಸಹಕಾರ ಬ್ಯಾಂಕ್‌ನಲ್ಲಿ ಉನ್ನತ್ತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗೂಗಲ್‌ನಲ್ಲಿ ಸರ್ಚ್ :
    ಸಾಯುವ ಮುನ್ನ ನವೀನ್, ತನ್ನ ಮೊಬೈಲ್ ಬಳಸಿ ಗೂಗಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ. ಕಟ್ಟಡದಿಂದ ಬಿದ್ದರೇ ಎಷ್ಟು ನೋವು ಆಗುತ್ತದೆ? ನೇಣು ಬಿಗಿದುಕೊಂಡರೇ ಎಷ್ಟು ಸಮಯಕ್ಕೆ ಸಾವು ಬರುತ್ತದೆ? ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು ಹೇಗೆ? ಎಂದು ಹುಡುಕಾಟ ನಡೆಸಿದ್ದ. ಈ ಹಿನ್ನೆಲೆಯಲ್ಲಿ ನವೀನ್ ಸಾವು ಆತ್ಮಹತ್ಯೆ ಎಂದು ನಿರ್ಧರಿಸಲಾಗಿದೆ. ಸೋಮವಾರ ಪರೀಕ್ಷೆಯಿತ್ತು, ಅದೇ ಒತ್ತಡದಿಂದ ಆತ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನುವ ಅನುಮಾನಗಳು ವ್ಯಕ್ತವಾಗಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಯಡಿಯೂರಪ್ಪ ಅವರ ಬಜೆಟ್ ಬಗ್ಗೆ ಸಿದ್ದರಾಮಯ್ಯ ಏನಂದ್ರು?

    ‘ಲವ್​ ಜಿಹಾದ್’​ ತಡೆಗಟ್ಟಲು ಮತಾಂತರ ವಿರೋಧಿ ಕಾನೂನು ಅಂಗೀಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts