More

    ಬೆಂಗಳೂರಿಗರಿಗೆ ಕರೊನಾ ಶಾಕ್​! ನಗರದಲ್ಲಿ ಒಂದೇ ದಿನ 2,900ಕ್ಕೂ ಅಧಿಕ ಪ್ರಕರಣ ಪತ್ತೆ, 18 ಸಾವು!

    ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ಸೋಂಕಿನ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ ಕಂಡುಬರುತ್ತಿದೆ. ಅದರಲ್ಲೂ ಬೆಂಗಳೂರು ಕರೊನಾ ಹಬ್​ ಆಗಿ ಕಾಣಿಸಿಕೊಳ್ಳುತ್ತಿದ್ದು, ನಗರದಲ್ಲಿ ಅಘಾತಕಾರಿ ಪ್ರಮಾಣದಲ್ಲಿ ಕರೊನಾ ಹೆಚ್ಚಲಾರಂಭಿಸಿದೆ. ಬುಧವಾರ ಒಂದೇ ದಿನದಲ್ಲಿ 2,900ಕ್ಕೂ ಹೆಚ್ಚು ಪ್ರಕರಣಗಳು ನಗರದಲ್ಲಿ ಪತ್ತೆಯಾಗಿವೆ.

    ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರವೊಂದರಲ್ಲೇ ಸುಮಾರು 2,928 ಮಂದಿಯಲ್ಲಿ ಕರೊನಾ ಸೋಂಕು ದೃಢವಾಗಿದೆ. ರಾಜ್ಯದ್ಯಂತ ಒಟ್ಟು 4,225 ಪ್ರಕರಣಗಳು ವರದಿಯಾಗಿದೆ. ರಾಜಧಾನಿಯಲ್ಲೇ 18 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ಹೊರೆತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಇಂದು ಎಂಟು ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

    ರಾಜ್ಯಾದ್ಯಂತ ಈವರೆಗೆ ಒಟ್ಟು 9,97,004 ಜನರಲ್ಲಿ ಕರೊನಾ ಸೋಂಕು ದೃಢವಾಗಿದೆ. ಅದರಲ್ಲಿ ಇಂದು 1,492 ಮಂದಿ ಸೇರಿ ಒಟ್ಟು 9,56,170 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 28,248 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಅದರಲ್ಲಿ 266 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 12,567 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. (ಏಜೆನ್ಸೀಸ್​)

    ಐಎಎಸ್​ ಅಧಿಕಾರಿಗಳ ವರ್ಗಾವಣೆ: ಬಿಬಿಎಂಪಿ ಹೊಣೆ ರಾಕೇಶ್ ಸಿಂಗ್‌ಗೆ, ಕಂದಾಯಕ್ಕೆ ಮಂಜುನಾಥ್ ಪ್ರಸಾದ್

    ಮತ್ತೆ ಭಾರತದೊಂದಿಗೆ ವ್ಯಾಪಾರಕ್ಕೆ ಮುಂದಾದ ಪಾಕ್​; ಸಕ್ಕರೆ, ಹತ್ತಿಗಾಗಿ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts