More

    ರಾಮೇಶ್ವರ ದೇಗುಲಕ್ಕೆ ರವಿಶಂಕರ ಗುರೂಜಿ ಭೇಟಿ

    ತೀರ್ಥಹಳ್ಳಿ: ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್​ನ ರವಿಶಂಕರ್ ಗುರೂಜಿ ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಈಚೆಗೆ ನಡೆದ ದೇವಸ್ಥಾನದ ಜೀಣೋದ್ಧಾರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಮಾತೃಹತ್ಯಾ ದೋಷ ಪರಿಹರಿಸಿದ ಪುರಾಣ ಪ್ರಸಿದ್ಧವಾದ ಈ ಸ್ಥಳ ಅತ್ಯಂತ ಪುಣ್ಯ ಮತ್ತು ಪವಿತ್ರ ಕ್ಷೇತ್ರ. ಇಲ್ಲಿ ನೆಲೆಸಿರುವ ರಾಮೇಶ್ವರನ ಸನ್ನಿಧಿಯೂ ಅಷ್ಟೇ ಪ್ರಾಮುಖ್ಯತೆ ಹೊಂದಿದೆ. ಪೌರಾಣಿಕ ಹಿನ್ನೆಲೆಯ ಈ ದೇಗುಲದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಜೀಣೋದ್ಧಾರ ಮಾಡಿರುವುದು ಸಂತಸದ ಸಂಗತಿ. ಇಂತಹ ಐತಿಹ್ಯ ಇರುವ ಧಾರ್ವಿುಕ ಕೇಂದ್ರಗಳ ಪಾರಂಪರಿಕ ಮಹತ್ವ ಮತ್ತು ಧಾರ್ವಿುಕ ಹಿನ್ನೆಲೆಯ ದೃಷ್ಟಿಯಿಂದಲೂ ಮೂಲಸ್ವರೂಪ ಉಳಿಸುವುದು ಅಗತ್ಯ ಎಂದರು.

    ಕಮಲಶಿಲೆಯಿಂದ ತಮ್ಮ ಶಿಷ್ಯರೊಂದಿಗೆ ಶಿವಮೊಗ್ಗಕ್ಕೆ ಹೋಗುವ ಮಾರ್ಗ ಮಧ್ಯೆ ಕೆಲ ಹೊತ್ತು ತಂಗಿದ್ದ ಅವರು ರಾಮೇಶ್ವರ ದೇವಸ್ಥಾನಕ್ಕೆ ಭೇಡಿ ನೀಡಿದ ನಂತರ ತುಂಗಾ ನದಿಯ ರಾಮ ಮಂಟಪದ ಬಳಿ ನದಿಯ ನಡುವೆ ಇರುವ ಬಂಡೆಯ ಮೇಲೆ ಅರ್ಧ ತಾಸು ಧ್ಯಾನಾಸಕ್ತರಾದರು. ರಾಮೇಶ್ವರ ದೇವಸ್ಥಾನ ಜೀಣೋದ್ಧಾರ ಸಮಿತಿಯಿಂದ ಶ್ರೀಗಳನ್ನು ಗೌರವಿಸಲಾಯಿತು. ನಂತರ ಉದ್ಯಮಿ ಬಾಳಗಾರು ಶ್ರೀಧರ ಶೆಟ್ಟಿ ಕುಟುಂಬದವರ ಆತಿಥ್ಯ ಸ್ವೀಕರಿಸಿ ಶಿವಮೊಗ್ಗಕ್ಕೆ ತೆರಳಿದರು.

    ತಹಸೀಲ್ದಾರ್ ಡಾ. ಶ್ರೀಪಾದ, ಮುಖ್ಯ ಅರ್ಚಕ ರಾಜಶೇಖರ ಭಟ್, ರಾಕೇಶ್ ಭಟ್, ಜೀಣೋದ್ಧಾರ ಸಮಿತಿಯ ಸೊಪ್ಪುಗುಡ್ಡೆ ರಾಘವೇಂದ್ರ, ಎಚ್.ಪಾಂಡುರಂಗಪ್ಪ, ರಾಜಸ್ವ ನಿರೀಕ್ಷಕ ಮಂಜುನಾಥ್, ಪಿಎಸ್​ಐ ಎಲ್ಲಪ್ಪ, ಸುರಭಿ ಕಿಶೋರ್, ಅನಿಲ್​ಕುಮಾರ್, ವಸಂತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts