More

  VIDEO| ರೈಲು ಟಿಕೆಟ್​ಗಳಿಗೆ ನಕಲಿ ದಾಖಲೆ; ಪಾಕಿಸ್ತಾನ ಮೂಲದ ಡಾರ್ಕ್ ನೆಟ್ ಬಳಸಿ ಹ್ಯಾಕಿಂಗ್, ಇಸ್ರೋ ಮಾಹಿತಿ ಸಂಗ್ರಹ 

  ಬೆಂಗಳೂರು: ರೈಲ್ವೇ ನಕಲಿ ಟಿಕೆಟ್​ ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿ ಬಳಿಕ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಶಂಕೆ ವ್ಯಕ್ತವಾಗಿದೆ.

  ಗುಲಾಮ ಮುಸ್ತಾಪ್ ಬಂಧಿತ ಆರೋಪಿ, ಎಎನ್​ಎಂಎಸ್​ ಸಾಫ್ಟ್​ವೇರ್ ಹ್ಯಾಕ್ ಮಾಡಿ 563 ನಕಲಿ ಐಡಿ ಸಿದ್ಧಪಡಿಸಿಕೊಂಡಿದ್ದ. ನಕಲಿ ಐಡಿಗಳಿಂದ ರೈಲ್ವೆ ಇಲಾಖೆಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾನೆ.

  ಪಾಕಿಸ್ತಾನ ಮೂಲದ ಡಾರ್ಕ್ ನೆಟ್ ಬಳಸಿ ಹ್ಯಾಕಿಂಗ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದ ವೆಬ್​ಸೈಟ್ ವಿವರ, ಬ್ಯಾಂಕ್ ಖಾತೆಗಳ ವಿವರ ಮತ್ತು ಇನ್ನಿತರ ಸಾಫ್ಟ್​ವೇರ್​ಗಳ ಮಾಹಿತಿಯನ್ನು ಕಾಪಿ ಮಾಡಿ ಇಟ್ಟುಕೊಂಡಿದ್ದಾನೆ. ನಿಷೇಧಿತ ಜಾಲತಾಣಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪಿ, ಮುಸ್ತಾಫಾ, ಜಾರ್ಖಂಡ್​ನ ಡಾಲಾಂಗಿ ಮೂಲದವನು.

  ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಹತ್ತು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

  ಆರೋಪಿ ಮುಸ್ತಾಫ ಬಳಿಯಿದ್ದ ಲ್ಯಾಪ್​ಟಾಪ್​ನಲ್ಲಿ ಡಾರ್ಕ್ ನೆಟ್ ವೆಬ್ ಸೈಟ್ ಪತ್ತೆಯಾಗಿದೆ. ಪತ್ತೆಯಾದ ವೆಬ್​ಸೈಟ್ ಮುಖಾಂತರ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳ ಜತೆ ಸಂಪರ್ಕ ಹೊಂದಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

  ಕೇಂದ್ರ ಸರ್ಕಾರದ ಕೆಲ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಿದ್ದು, ಈ ಮೂಲಕ ಸೈಬರ್ ಉಗ್ರ ಕೃತ್ಯದಲ್ಲಿ ಮುಂದಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಸರ್ಕಾರಿ ವೆಬ್​ಸೈಟ್ ಹ್ಯಾಕ್ ಮಾಡಿ, ಉಗ್ರರಿಗೆ ಮಾಹಿತಿ ಹಂಚಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಡಿಜಿಟಲ್ ಫುಟ್​​ಪ್ರಿಂಟ್​​ಗಳನ್ನು ಸೈಬರ್​ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.

  ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಒಡಿಶಾದ ಜಿಲ್ಲೆಗಳಲ್ಲಿ ವಿದ್ವಂಸಕ ಕೃತ್ಯಗಳ ಎಸಗಿದವರ ಜತೆ ಸಂಪರ್ಕ ಹೊಂದಿರುವ ಬಗ್ಗೆಯೂ ತನಿಖೆ ಮನಡೆಸಲಾಗುತ್ತಿದೆ. ಇದೇ ವೇಳೆ ಲ್ಯಾಪ್​ಟಾಪ್​ನಲ್ಲಿ ಇಸ್ರೋ ನ ಕೆಲ ಮಾಹಿತಿಗಳು ಪತ್ತೆಯಾಗಿವೆ. ಕಾರ್ಟೋ ಸ್ಯಾಟನ್ ಬಗ್ಗೆ ಸರ್ಚ್ ಮಾಡಿದ್ದ ಆರೋಪಿ, ಕೆಲ ಮಾಹಿತಿ ಡೌನ್ ಲೋಡ್ ಮಾಡಿಕೊಂಡಿದ್ದ. ಅಲ್ಲದೆ, ಹಲವು ಮದರಸಾಗಳಿಗೆ ಭೇಟಿ ನೀಡಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. (ದಿಗ್ವಿಜಯ ನ್ಯೂಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts