More

    ಹಿಜಾಬ್ ಕುರಿತ ಹೈಕೋರ್ಟ್​ ತೀರ್ಪು; ಭಟ್ಕಳದಲ್ಲಿ ನಾಳೆಯೂ ಬಂದ್ ನಡೆಸುವಂತೆ ಕರೆ

    ಉತ್ತರಕನ್ನಡ: ಹಿಜಾಬ್ ವಿವಾದ ಕುರಿತಂತೆ ಹೈಕೋರ್ಟ್ ಇಂದು ನೀಡಿರುವ ತೀರ್ಪಿಗೆ ಸಂಬಂಧಿಸಿದಂತೆ ಭಟ್ಕಳದ ಕೆಲವು ವರ್ತಕರು ಇವತ್ತು ಸ್ವಯಂಪ್ರೇರಿತರಾಗಿ ಬಂದ್ ನಡೆಸಿದ್ದು, ನಾಳೆಯೂ ಬಂದ್ ಮಾಡುವಂತೆ ಸಂಘಟನೆಯೊಂದು ಕರೆ ನೀಡಿದೆ.

    ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ಕೋರಿದ್ದನ್ನು ನಿರಾಕರಿಸಿದ್ದ ಹೈಕೋರ್ಟ್​, ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಎಂದು ಸರ್ಕಾರ ನೀಡಿದ್ದ ಆದೇಶವನ್ನೇ ಎತ್ತಿಹಿಡಿದು ತೀರ್ಪು ನೀಡಿತ್ತು. ಆದರೆ ಈ ಬಗ್ಗೆ ಭಟ್ಕಳದಲ್ಲಿ ಇಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು ಬೆನ್ನಿಗೇ ಭಟ್ಕಳದಲ್ಲಿ ಬಂದ್!

    ಮಾತ್ರವಲ್ಲ, ಮುಸ್ಲಿಂ ಸಮುದಾಯದ ಕೆಲವು ವರ್ತಕರು ಭಟ್ಕಳದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ತೀರ್ಪು ಕುರಿತಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ತಂಜೀಮ್ ಎಂಬ ಸಂಘಟನೆಯೊಂದರ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರ ಸಭೆ ಕೂಡ ನಡೆದಿತ್ತು.

    ಇದನ್ನೂ ಓದಿ: 52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ಸಂದೇಶವಿದು..

    ಹೈಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ನಾಳೆಯೂ ಭಟ್ಕಳದಲ್ಲಿ ಸ್ವಯಂಪ್ರೇರಿತರಾಗಿ ಬಂದ್ ನಡೆಸಬೇಕು ಎಂದು ತಂಜೀಮ್ ಸಂಘಟನೆ ಮುಸ್ಲಿಂ ಸಮುದಾಯದ ವರ್ತಕರಿಗೆ ಕರೆ ನೀಡಿದೆ. ತಂಜೀಮ್​ ಕಾರ್ಯನಿರ್ವಾಹಕ ಮಂಡಳಿ ಸಭೆ ಬಳಿಕ ಮುಸ್ಲಿಂ ಸಮುದಾಯದ ವಿವಿಧ ಸಂಸ್ಥೆಗಳ ಬಂದ್​ಗೂ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಗಂಡನ ಕತ್ತನ್ನು ಕತ್ತರಿಸಿದ ಹೆಂಡತಿ; ರುಂಡ ಚೀಲದಲ್ಲಿರಿಸಿ ದೇವಸ್ಥಾನದಲ್ಲಿಟ್ಟಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts