More

    18 ವರ್ಷಕ್ಕಿಂತ ಕಿರಿಯ ಕ್ರಿಕೆಟಿಗರಿಗೆ ಬೌನ್ಸರ್ ಎಸೆತ ನಿಷೇಧ?

    ಲಂಡನ್: ದೀರ್ಘಕಾಲಿಕ ಸಮಸ್ಯೆಗಳು ಎದುರಾಗುವುದನ್ನು ತಪ್ಪಿಸುವ ಸಲುವಾಗಿ 18 ವರ್ಷಕ್ಕಿಂತ ಕೆಳಗಿನ ಕ್ರಿಕೆಟಿಗರಿಗೆ ಬೌನ್ಸರ್ ಎಸೆಯುವುದನ್ನು ನಿಷೇಧಿಸಬೇಕೆಂದು ಕ್ರಿಕೆಟ್ ಆಡಳಿತಗಾರರಿಗೆ ಕನ್‌ಕಷನ್ ತಜ್ಞರೊಬ್ಬರು ಸಲಹೆ ನೀಡಿದ್ದಾರೆ.

    ಕ್ರಿಕೆಟ್ ನಿಯಮಗಳ ಮಹಾಪೋಷಕರಾದ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ), ಶಾರ್ಟ್ ಪಿಚ್ ಎಸೆತಗಳ ಬಗ್ಗೆ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕನ್‌ಕಷನ್ (ಮಿದುಳು ಗಾಯ) ಮತ್ತು ತಲೆ ಗಾಯದ ಸಂಶೋಧನಾ ಫೌಂಡೇಷನ್‌ನ ಮಾಧ್ಯಮ ನಿರ್ದೇಶಕ ಮೈಕೆಲ್ ಟರ್ನರ್, ‘ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವಾಗ ತಲೆಗೆ ಗಾಯವಾಗುವುದನ್ನು ತಪ್ಪಿಸಬೇಕು. ಇದಕ್ಕಾಗಿ ವಯೋಮಿತಿ ಕ್ರಿಕೆಟ್‌ನಲ್ಲಿ ನಿಯಮಗಳನ್ನು ಬದಲಾಯಿಸಬೇಕಾಗಿದೆ. ಜೂನಿಯರ್ ಕ್ರಿಕೆಟ್‌ನಲ್ಲಿ ಶಾರ್ಟ್ ಪಿಚ್ ಎಸೆತಗಳನ್ನು ನಿರ್ಬಂಧಿಸಬೇಕು. ಕ್ರಿಕೆಟ್ ಆಡಳಿತಾಧಿಕಾರಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಬೇಕು’ ಎಂದು ಹೇಳಿದ್ದಾರೆ. ಹೆಲ್ಮೆಟ್ ಬಳಕೆಯಿಂದ ತಲೆಬುರುಡೆಯ ಮುರಿತವನ್ನಷ್ಟೇ ತಡೆಯಬಹುದು, ಕನ್‌ಕಷನ್ ತಡೆಯಲಾಗದು ಎಂದೂ ಅವರು ಹೇಳಿದ್ದಾರೆ.

    ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಂದು ಬಾಲ್ ಬಾಯ್, ಇಂದು ಪಾಕ್ ತಂಡದ ನಾಯಕ!

    18 ವರ್ಷಕ್ಕಿಂತ ಕೆಳಗಿನ ಕ್ರಿಕೆಟಿಗರು ಚೆಂಡಿನಿಂದ ತಲೆಗೆ ಏಟು ತಿಂದರೆ ದೀರ್ಘಕಾಲಿಕ ಸಮಸ್ಯೆಗಳನ್ನು ಎದುರಿಸಲಿದ್ದಾರೆ ಎಂದು ಎಚ್ಚರಿಸಿರುವ ಮೈಕೆಲ್ ಟರ್ನರ್, 20ನೇ ವಯಸ್ಸಿನವರೆಗೂ ಮಿದುಳು ಬೆಳೆಯುತ್ತಿರುತ್ತದೆ. ಹೀಗಾಗಿ ಈ ಹಂತದಲ್ಲಿ ಕನ್‌ಕಷನ್ ಆದರೆ, ಅದರ ಪರಿಣಾಮ ವಯಸ್ಕರಿಗಿಂತ ಬಹಳ ಕೆಟ್ಟದಾಗಿರುತ್ತದೆ ಎಂದಿದ್ದಾರೆ.

    ಟೀಮ್ ಇಂಡಿಯಾದ ಈ ಕ್ರಿಕೆಟಿಗನ ಅಕ್ಕ ಕೂಡ ವೃತ್ತಿಪರ ಕ್ರಿಕೆಟರ್, ತಮ್ಮನ ಯಶಸ್ಸಿಗೂ ನೆರವು!

    ಟೀಮ್ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ಈಗ ಶಾರ್ದೂಲ್ಕರ್!

    ಆಸೀಸ್ ನೆಲದ ಯಶಸ್ಸಿನ ಗುಟ್ಟು ಬಿಚ್ಚಿಡುತ್ತಿದ್ದಾರೆ ಟೀಮ್ ಇಂಡಿಯಾ ಕ್ರಿಕೆಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts