More

    ಅತ್ತೂರು ಬೆಸಿಲಿಕದಲ್ಲಿ ಗಾಯನ ಬಲಿಪೂಜೆ ಸಂಭ್ರಮ

    ಕಾರ್ಕಳ: ಶಸ್ತ್ರ ಚಿಕಿತ್ಸೆ, ತಂತ್ರಜ್ಞಾನ ಕೆಲಸಮಾಡದಿದ್ದರೂ ಮೊಣಕಾಲೂರಿ ಪ್ರಾರ್ಥಿಸಿದರೆ ಫಲ ದೊರೆಯುತ್ತದೆ. ಪ್ರಾರ್ಥನೆ ರೀತಿ ನಿಯಮಗಳನ್ನು ಪಾಲಿಸಿದರೆ ಮಾತ್ರ ವರದಾನ ಲಭಿಸುತ್ತದೆ ಎಂದು ಶಿವಮೊಗ್ಗದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಎಸ್.ಜೆ. ಹೇಳಿದರು.
    ಅವರು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ, ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಎರಡನೇಯ ದಿನ ಗಾಯನ ಬಲಿಪೂಜೆ ನೆರವೇರಿಸಿ ಎಡೆಬಿಡದೆ ಪ್ರಾರ್ಥಿಸೋಣ ಎಂಬ ವಿಷಯದಲ್ಲಿ ಆಶಿರ್ವಚನ ನೀಡಿದರು.

    ಪವಾಡ ಮೂರ್ತಿ ಸಂಪುಟ ಪ್ರದರ್ಶನ

    ಭಕ್ತಜನಸಾಗರ ಎಂದಿನಂತೆ ಬಸಿಲಿಕದ ವಠಾರದಲ್ಲಿ ಒಂದುಗೂಡಿ ತಮ್ಮ ಭಕ್ತಿಕಾರ್ಯಗಳಲ್ಲಿ ಮಗ್ನರಾಗಿ ಪ್ರಾರ್ಥಿಸಿದರು. ಪುಣ್ಯಕ್ಷೇತ್ರದ ಸಂತ ಲಾರೆನ್ಸರ ಪವಿತ್ರ ಅವಶೇಷ ಹಾಗೂ ಪವಾಡ ಮೂರ್ತಿಯ ಸಂಪುಟವನ್ನು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಭಕ್ತಜನರು ಸಂಪುಟದ ದಿವ್ಯದರ್ಶನ ಹಾಗೂ ಆಶೀರ್ವಾದಕ್ಕಾಗಿ ಭಕ್ತಿ ಪರವಶತೆಯಿಂದ ಪಾಲ್ಗೊಂಡರು.
    ದಿನದ ಇತರ ಬಲಿಪೂಜೆಗಳನ್ನು ಜೋಯ್ ಜೊಲ್ಸನ್ ಅಂದ್ರಾದೆ, ಕಲ್ಯಾಣ್‌ಪುರ್, ಜೆ.ಬಿ.ಸಲ್ಡಾನ್ಹ ಬಿಜೈ ಮಂಗಳೂರು, ಉಡುಪಿ ಧರ್ಮಕ್ಷೇತ್ರದ ಕುಲಪತಿ ಡಾ.ರೋಷನ್ ಡಿಸೋಜ ಕುಲಪತಿ, ವಿಜಯ್ ಡಿಸೋಜ ಪಾಂಗ್ಳಾ, ಬೊನವೆಂಚರ್ ನಜ್ರೆತ್ ಮಿಲಾಗ್ರಿಸ್ ಮಂಗಳೂರು, ಕಾರ್ಕಳ ವಲಯಾಧಿಕಾರಿ ಪೌಲ್ ರೇಗೊ ನೆರವೇರಿಸಿದರು. ಸಂತ ಲಾರೆನ್ಸರ ಬಸಿಲಿಕ ಧರ್ಮಗುರು ಅಲ್ಬನ್ ಡಿಸೋಜಾ ಉಪಸ್ಥಿತರಿದ್ದರು.

    ಹರಕೆ ಮೊಂಬತ್ತಿ ಸಲ್ಲಿಕೆ

    ಭಕ್ತರು ತಮ್ಮ ಹರಕೆಯ ಮೊಂಬತ್ತಿಯನ್ನು ಬೆಳಗಿಸಿ, ದಿವ್ಯ ತೈಲವನ್ನು ಸ್ವೀಕರಿಸಿ, ಪವಿತ್ರ ಪುಷ್ಕರಣಿಯ ಸನ್ನಿಧಿ ಧಾವಿಸಿ, ಪುಣ್ಯಕ್ಷೇತ್ರದ ಪುಣ್ಯ ತೀರ್ಥವನ್ನು ಪಡೆದು, ಜಪ ತಪ ಪ್ರಾರ್ಥನೆ ಹಾಗೂ ಬಸಿಲಿಕದ ಶ್ರೇಷ್ಠ ಪಾಲಕ ಸಂತ ಲಾರೆನ್ಸರ ದಿವ್ಯ ಸಾನಿಧ್ಯ ಬಳಿ ಧಾವಿಸಿ ಪ್ರಾರ್ಥಿಸಿ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts