More

    ಬಾಲಯ್ಯ ಸಂಭಾವನೆ ಎಷ್ಟು ಗೊತ್ತಾ? ಹೊಸ ಚಿತ್ರಕ್ಕೆ ಪಡೆಯಲಿದ್ದಾರೆ ಕೋಟಿ ಕೋಟಿ ರೂ.!

    ‘ಅಖಂಡ’, ‘ವೀರಸಿಂಹ ರೆಡ್ಡಿ’ ಮತ್ತು ಕೆಲ ದಿನಗಳ ಹಿಂದಷ್ಟೆ ರಿಲೀಸ್ ಆದ ‘ಭಗವಂತ್ ಕೇಸರಿ’ ಚಿತ್ರಗಳ ಮೂಲಕ ಹ್ಯಾಟ್ರಿಕ್ ಹಿಟ್ ಚಿತ್ರಗಳನ್ನು ನೀಡಿರುವ ತೆಲುಗು ನಟ ಬಾಲಕೃಷ್ಣ, ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. 2021ರಲ್ಲಿ ತೆರೆಗೆ ಬಂದ ‘ಅಖಂಡ’ ಚಿತ್ರಕ್ಕಾಗಿ 10 ಕೋಟಿ ರೂ. ಪಡೆದಿದ್ದರಂತೆ ಬಾಲಯ್ಯ. ನಂತರ ಕಳೆದ ವರ್ಷ ಬಿಡುಗಡೆಯಾದ ‘ವೀರಸಿಂಹ ರೆಡ್ಡಿ’ ಚಿತ್ರಕ್ಕೆ 4 ಕೋಟಿ ರೂ. ಸಂಭಾವನೆ ಹೆಚ್ಚಿಸಿಕೊಂಡು, 14 ಕೋಟಿ ರೂ. ಪಡೆದಿದ್ದರು ಎನ್ನಲಾಗಿದೆ.

    ಇದನ್ನೂ ಓದಿ : ಮದುವೆ ಬಳಿಕ ಮತ್ತೆ ಕ್ಯಾಮೆರಾ ಮುಂದೆ ಬರಲು ಹರ್ಷಿಕಾ ಪೂಣಚ್ಚ ರೆಡಿ..!

    ಬಾಲಯ್ಯ ಸಂಭಾವನೆ ಎಷ್ಟು ಗೊತ್ತಾ? ಹೊಸ ಚಿತ್ರಕ್ಕೆ ಪಡೆಯಲಿದ್ದಾರೆ ಕೋಟಿ ಕೋಟಿ ರೂ.!

    ಕಳೆದ ಅ. 14ರಂದು ತೆರೆಗೆ ಬಂದ ‘ಭಗವಂತ್ ಕೇಸರಿ’ ಚಿತ್ರಕ್ಕೆ ಬಾಲಯ್ಯ 18 ಕೋಟಿ ರೂ. ಸಂಭಾವನೆ ಪಡೆದಿದ್ದರಂತೆ. ಈ ಮೂರು ಚಿತ್ರಗಳೂ ಥಿಯೇಟರ್ ಗಳಿಕೆ, ಒಟಿಟಿ, ಟಿವಿ ಹಕ್ಕುಗಳ ಮಾರಾಟದಿಂದ 150 ಕೋಟಿ ರೂ.ಗಿಂತ ಹೆಚ್ಚು ಲಾಭ ಮಾಡಿಕೊಟ್ಟಿರುವ ಕಾರಣ 62 ವರ್ಷದ ಬಾಲಯ್ಯ, 110ನೇ ಸಿನಿಮಾಗಾಗಿ ಬರೋಬ್ಬರಿ 10 ಕೋಟಿ ರೂ. ರೆಮ್ಯುನರೇಷನ್ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ : ಮುಂದಕ್ಕೆ ಹೋಯ್ತು ಬ್ಯುಸಿ ಹೀರೋಯಿನ್​ ಶ್ರೀಲೀಲಾ ನಟನೆಯ ಸಿನಿಮಾ!

    ಬಾಲಯ್ಯ ಸಂಭಾವನೆ ಎಷ್ಟು ಗೊತ್ತಾ? ಹೊಸ ಚಿತ್ರಕ್ಕೆ ಪಡೆಯಲಿದ್ದಾರೆ ಕೋಟಿ ಕೋಟಿ ರೂ.!

    ಅದೇನಾದರೂ ನಿಜವಾದಲ್ಲಿ ಬಾಬಿ ನಿರ್ದೇಶನದಲ್ಲಿ ಮೂಡಿಬರಲಿರುವ ಮುಂದಿನ ಚಿತ್ರಕ್ಕೆ ಬಾಲಯ್ಯ 28 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts