More

    ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ಶ್ರೀಲೀಲಾ … ನಾಯಕಿಯೋ? ತಂಗಿಯೋ?

    ಹೈದರಾಬಾದ್​: ಶ್ರೀಲೀಲಾ ಅಭಿನಯದ ಮೊದಲ ತೆಲುಗು ಚಿತ್ರ ‘ಪೆಳ್ಳಿ ಸಂದಡಿ’ ಅಷ್ಟೇ ದೊಡ್ಡ ಹಿಟ್​ ಆಗಲಿಲ್ಲ. ಆದರೂ ಶ್ರೀಲೀಲಾಗೆ ಟಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಿದ್ದು, ಆಕೆ ಬ್ಯಾಕ್​ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

    ಇದನ್ನೂ ಓದಿ: ದುಬೈನಲ್ಲಿ ನರೇಶ್​-ಪವಿತ್ರಾ ಲೋಕೇಶ್​ ಮೋಜು ಮಸ್ತಿ: ಹನಿಮೂನ್ ಮುಗಿಸಿ ಬಂದ್ರಾ ಸ್ಟಾರ್​ ಜೋಡಿ​?

    ಈಗಾಗಲೇ ಮಹೇಶ್​ ಬಾಬು ಅಭಿನಯದ ‘ಎಸ್​ಎಸ್​ಎಂಬಿ 28’ ಮತ್ತು ‘ಅನಗನಗಾ ಒಕ ರೋಜು’ ಚಿತ್ರಗಳಲ್ಲಿ ನಟಿಸುತ್ತಿರುವ ಶ್ರೀಲೀಲಾ, ಈಗ ಟಾಲಿವುಡ್​ನ ಇನ್ನೊಂದು ದೊಡ್ಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಅಭಿನಯದ 108ನೇ ಚಿತ್ರಕ್ಕೆ ಶ್ರೀಲೀಲಾ ಆಯ್ಕೆಯಾಗಿದ್ದು, ಈಗಾಗಲೇ ಹೈದರಾಬಾದ್​ನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಶ್ರೀಲೀಲಾ ಭಾಗವಹಿಸಿದ್ದಾರೆ.

    ನಂದಮೂರಿ ಬಾಲಕೃಷ್ಣಗೆ ಶ್ರೀಲೀಲಾ ನಾಯಕಿಯಾ ಎಂಬ ಪ್ರಶ್ನೆ ಎದುರಾಗಬಹುದು. ಏಕೆಂದರೆ, ಬಾಲಕೃಷ್ಣ ಅವರಿಗೆ ಈಗ 61 ವಯಸ್ಸು. ಶ್ರೀಲೀಲಾಗೆ 22 ಅಷ್ಟೇ. ಅವರಿಬ್ಬರ ಮಧ್ಯೆ ವಯಸ್ಸಿನ ಅಂತರ ಬಹಳ ದೊಡ್ಡದು. ಹಾಗಾಗಿ, ಅವರಿಬ್ಬರು ನಾಯಕ-ನಾಯಕಿಯಾಗಿ ನಟಿಸುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ನಾಯಕಿಯೋ ಅಥವಾ ತಂಗಿಯ ಪಾತ್ರವೋ ಗೊತ್ತಿಲ್ಲ. ಚಿತ್ರತಂಡದವರು ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ಶ್ರೀಲೀಲಾ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಂತೂ ಕಾಣಿಸಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಕೋಮಲ್ ಅಭಿನಯದ ಹೊಸ ಚಿತ್ರಕ್ಕೆ ‘ಯಲಾ ಕುನ್ನಿ’ ಎಂದು ನಾಮಕರಣ …

    ಎನ್​ಬಿಕೆ108 ಚಿತ್ರವನ್ನು ಅನಿಲ್​ ರಾವಿಪುಡಿ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಚಿತ್ರ ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಹಾಲಿವುಡ್​ಗೆ ರಾಮ್​ಚರಣ್​ ತೇಜ … ಸದ್ಯದಲ್ಲೇ ಅಭಿಮಾನಿಗಳಿಗೆ ಗುಡ್​ ನ್ಯೂಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts