More

    ಸರ್ವಾಂಗೀಣ ಅಭಿವೃದ್ಧಿಗೆ ಪಣ

    ಬಾಗಲಕೋಟೆ: ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಬಾಗಲಕೋಟೆ ಪಟ್ಟಣದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಶಾಸಕ ವೀರಣ್ಣ ಚರಂತಿಮಠ, ಸದಸ್ಯರಾಗಿ ನ್ಯಾಯವಾದಿ ಶಿವಾನಂದ ಟವಳಿ, ಎಂ.ಪಿ. ನಾಡಗೌಡ, ಕುಮಾರ ಯಳ್ಳಿಗುತ್ತಿ ಬುಧವಾರ ಅಧಿಕಾರ ಸ್ವೀಕರಿಸಿದರು.

    ಕರೊನಾ ಹಿನ್ನೆಲೆಯಲ್ಲಿ ನಗರದ ಬಿಟಿಡಿಎ ಕಚೇರಿ ಆವರಣದಲ್ಲಿ ಸರಳವಾಗಿ ಆಯ್ದ ಕಾರ್ಯಕರ್ತರು, ಪಕ್ಷದ ಮುಖಂಡರ ಸಮ್ಮುಖದಲ್ಲಿ ಅಧಿಕಾರಿ ಸ್ವೀಕರಿಸಿದ ನೂತನ ಆಡಳಿತ ಮಂಡಳಿ ಸದಸ್ಯರಿಗೆ ಬಿಟಿಡಿಎ ಮುಖ್ಯ ಇಂಜಿನಿಯರ್ ಅಶೋಕ ವಾಸನದ ಹೂಗುಚ್ಛ ನೀಡಿ ಸ್ವಾಗತಿಸಿದರು.

    ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಾಗಲಕೋಟೆಯ ನಗರದ ಮುಳುಗಡೆ ಸಂತ್ರಸ್ತರ ಸರ್ವಾಂಗೀನ ಅಭಿವೃದ್ಧಿ ದೃಷ್ಟಿಯಿಂದ ಈ ಹುದ್ದೆ ಒಪ್ಪಿಕೊಂಡಿದ್ದೇನೆ. ನಮ್ಮ ಅವಧಿಯಲ್ಲಿ ಯಾವುದೇ ರೀತಿಯ ಅವ್ಯವಹಾರಕ್ಕೆ ಆಸ್ಪದ ನೀಡುವುದಿಲ್ಲ. ಅತಿಕ್ರಮಣಗಳನ್ನು ಕೂಡ ಸಹಿಸುವುದಿಲ್ಲ. ಫುಟ್‌ಪಾತ್ ಕೇವಲ ಫುಟ್‌ಪಾತ್ ಆಗಿರಬೇಕೆ ವಿನಾ ಯಾವುದೇ ಗೂಡಂಗಡಿ ತಾಣವಾಗಿರಬಾರದು. ಬಿಟಿಡಿಎ ಕಚೇರಿಯಲ್ಲಿ ಈಗಿರುವ ಎಲ್ಲ ಅನೈತಿಕ ಹಾಗೂ ಮಧ್ಯವರ್ತಿಗಳ ವ್ಯವಹಾರಗಳಿಗೆ ಕಡಿವಾಣ ಹಾಕಲಾಗುವುದು. ಈಗಾಗಲೇ ಅನವಶ್ಯಕವಾಗಿ ಬ್ಲಾಕ್ ಮಾಡಿದ ಸೈಟ್‌ಗಳನ್ನು ತೆರವುಗೊಳಿಸಿ, ಎಲ್ಲ ಸಂತಸ್ತರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.

    ಸಂತ್ರಸ್ತರಿಗೆ ತಮ್ಮ ನಿವೇಶನದಲ್ಲಿ ಕಟ್ಟಡ ಕಟ್ಟಲು ಪರವಾನಗಿ, ವಿದ್ಯುತ್ ಸೌಕರ್ಯ, ಕುಡಿಯುವ ನೀರು, ಸ್ವಚ್ಛ ಒಳಚರಂಡಿ ವ್ಯವಸ್ಥೆ ಒದಗಿಸಲಾಗುವುದು. ನಗರದ ಸಾರ್ವಜನಿಕರ ಅನಗತ್ಯವಾಗಿ ಕಚೇರಿಗೆ ಅಲೆದಾಡಬಾಡಬಾರದು. ಮುಂದಿನ ಎರಡೂವರೆ ವರ್ಷದಲ್ಲಿ ಬಾಗಲಕೋಟೆ ಮಾದರಿ ನಗರವನ್ನಾಗಿ ಮಾಡಲು ಗುರಿ ಹೊಂದಲಾಗಿದೆ. ಬಿಟಿಡಿಎ ಅಧಿಕಾರಿಗಳು, ಸಿಬ್ಬಂದಿ ತ್ವರಿತಗತಿಯಲ್ಲಿ ಕೆಲಸ ಮಾಡಬೇಕು. ಸಬೂಬು ಹೇಳುವಂತಿಲ್ಲ ಎಂದು ತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts