ಹಿನ್ನೆಲೆ ಗಾಯಕಿ ಡಾ.ಪ್ರಿಯದರ್ಶಿನಿಗೆ ಬೆಳ್ಳಿ ಪರದೆ ಮಹಿಳಾ ಸಾಧಕಿ ಪ್ರಶಸ್ತಿ 

Priyadarshini

ಬೆಂಗಳೂರು: ಯೂನಿವರ್ಸಲ್ ಫಿಲಂ ಮೇಕರ್ಸ್ ಕೌನ್ಸಿಲ್ ಹಾಗೂ ನವ ಕರ್ನಾಟಕ ಫಿಲಂ ಅಕಾಡೆಮಿ ಸಹಯೋಗದಲ್ಲಿ ನಿನ್ನೆ ಬೆಂಗಳೂರಿನ ಟೌನ್ ಹಾಲ್ ಸಭಾಂಗಣದಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರಿಗೆ “ಬೆಳ್ಳಿ ಪರದೆ ಮಹಿಳಾ ಸಾಧಕಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

100 ವರ್ಷಗಳ ಚಲನಚಿತ್ರ ಸಂಗೀತದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದ ಭಾರತದ ಮೊದಲ ಹಿನ್ನೆಲೆ ಗಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಡಾ ಪ್ರಿಯದರ್ಶಿನಿಗೆ 2023ರ “ಬೆಳ್ಳಿ ಪರದೆ ಮಹಿಳಾ ಸಾಧಕಿ ಪ್ರಶಸ್ತಿ”ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: ಬೆಡ್‌ರೂಂನಲ್ಲಿ ಮಲಗಿ ಬುಸುಗುಟ್ಟಿದ 6 ಅಡಿ ಉದ್ದ ವಿಷಕಾರಿ ಹಾವು!
ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ 180ಕ್ಕೂ ಹೆಚ್ಚು ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಕಂಠದಾನ ಮಾಡಿರುವ ಪ್ರಿಯದರ್ಶಿನಿ 10 ಭಾಷೆಗಳಲ್ಲಿ ಖಾಸಗಿ ಆಲ್ಬಂಗಳಿಗಾಗಿ 800ಕ್ಕೂ ಹೆಚ್ಚು ಹಾಡುಗಳಿಗೆ ಹಾಡಿದ್ದಾರೆ. ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, “ನನ್ನ ಕೆಲಸಕ್ಕಾಗಿ ನಾನು ಗುರುತಿಸಿಕೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ ಮತ್ತು ಈ ಪ್ರಶಸ್ತಿಯು ನನ್ನನ್ನು ಇನ್ನಷ್ಟು ಶ್ರಮಿಸಲು ಪ್ರೇರೇಪಿಸುತ್ತದೆ. ನನ್ನ ಸಂಗೀತ ಪಯಣದಲ್ಲಿ ನನ್ನನ್ನು ಪ್ರೋತ್ಸಾಹಿಸುತ್ತಿರುವ ನನ್ನ ತಂದೆ, ತಾಯಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಮತ್ತು ಚಿತ್ರರಂಗಕ್ಕೆ ನನ್ನ ಕೊಡುಗೆಯನ್ನು ಗುರುತಿಸಿ ನನಗೆ ಈ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಚಿತ್ರರಂಗದ ಎಲ್ಲಾ ಸಂಗೀತ ನಿರ್ದೇಶಕರು ಮತ್ತು ಡಾ. ಮುಮ್ಮಿಗಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನಟಿ ವಿಜಯಲಕ್ಷ್ಮಿ ಸಿಂಗ್, ರಾಧಿಕಾ ರಾಮಚಂದ್ರ, ಜಯಶ್ರೀ, ಅದ್ವಿತಿ ಶೆಟ್ಟಿ, ಪದ್ಮಾ ವಾಸಂತಿ, ಜ್ಯೋತಿ, ಗಾಯಕಿ ಅರ್ಚನಾ ಉಡುಪ ಸಹ ಪ್ರಶಸ್ತಿಯನ್ನು ಸ್ವೀಕರಿಸಿದರು. ಅತಿಥಿಗಳಾಗಿ ಶಿವಕುಮಾರ್, ಸಂಗೀತ ನಿರ್ದೇಶಕ ಮಹೇಶ್ ಮಹದೇವ್, ಹಿರಿಯ ನಟಿ ಭವ್ಯಾ, ಮಲೇಷ್ಯಾದ ಅನುಷಾ ಸಂತಿರಸ್ಥಿಪಮ್, ಸಂಭ್ರಮ್ ಗ್ರೂಪ್ ಅಧ್ಯಕ್ಷ ಡಾ.ವಿ.ನಾಗರಾಜ್, ಸಿನಿ ಕಲಾವಿದ ಎಸ್.ಕೆ.ಅನಂತ, ಶಿವಶಕ್ತಿ ಗ್ರೂಪ್ ನ ಸುನೀಲ್ ಮಹದೇವ್, ಡಾ.ನಿರ್ಮಲಾ, ತೆಲುಗು ಚಿತ್ರ ನಿರ್ಮಾಪಕ ಲಯನ್ ಸಾಯಿ ವೆಂಕಟ್ ಉಪಸ್ಥಿತರಿದ್ದರು.

ಇದನ್ನೂ ಓದಿ: 9 ತಿಂಗಳ ಕಾಲ ಬಾಣಂತಿಯೆಂದು ಸುಳ್ಳು ಹೇಳಿದಳು; ಸರ್ಕಾರದ ಪ್ರಯೋಜನ ಪಡೆಯಲು ಮಾಸ್ಟರ್​ ಪ್ಲ್ಯಾನ್​​!
ಇದೇ ಸಂದರ್ಭದಲ್ಲಿ ವಿವಿಧ ಭಾಷೆಗಳಲ್ಲಿ 700 ಚಿತ್ರಗಳನ್ನು ಯಶಸ್ವಿಯಾಗಿ ಪೂರೈಸಿದ ಖ್ಯಾತ ನಟ ಸುಮನ್ ತಲ್ವಾರ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್, ಲಹರಿ ವೇಲು, ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಮುಮ್ಮಿಗಟ್ಟಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ನನ್ನ ಹೆಂಡ್ತಿಗೆ ಸೊಳ್ಳೆಗಳು ಕಚ್ಚುತ್ತಿವೆ ಕಾಪಾಡಿ.. ಕೆಲವೇ ಕ್ಷಣದಲ್ಲಿ ಸೊಳ್ಳೆ ಬತ್ತಿ ಕೊಟ್ಟ ಪೊಲೀಸ್!

Share This Article

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…

ಕಣ್ಣಿನಪೊರೆ ಸಮಸ್ಯೆಗೆ ಪರಿಹಾರ ಏನೆಂದು ಆಲೋಚಿಸುತ್ತಿದ್ದೀರಾ?; ಇಲ್ಲಿದೆ ಸೂಕ್ತ ಮನೆಮದ್ದಿನ ಮಾಹಿತಿ | Health Tips

ಪ್ರಸ್ತುತ ಕಾರ್ಯನಿರತ ಜೀವನ ಮತ್ತು ಕಳಪೆ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಅದರಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ…